ರವೀಂದ್ರನಾಥ ಟಾಗೋರ್ ರ ಚಿಂತನೆಗಳು ಸರ್ವಕಾಲಕ್ಕು ಪ್ರಸ್ತುತ

ರಾಸುಮ ಭಟ್

“ನಿಮ್ಮ ಜೀವನದಿಂದ ಸೂರ್ಯನು ಹೊರಟು ಹೋದನೆಂದು ನೀವು ಆಳುತ್ತಿದ್ದರೆ. ನಿಮ್ಮ ಕಣ್ಣೀರು ನಕ್ಷತ್ರಗಳನ್ನು ನೋಡದಂತೆ ತಡೆಯುತ್ತದೆ”. ರವೀಂದ್ರನಾಥ ಟಾಗೋರ್ ರ ಈ ಹಿತವಚನ ಸರ್ವಕಾಲಿಕ ಸತ್ಯವಾಗಿದೆ. ಇರುವ ಜೀವನವನ್ನು ಅನುಭವಿಸಬೇಕೆ ಹೊರತು, ಇಲ್ಲದನ್ನು ನೆನೆಯುತ್ತಾ ಇರುವುದನ್ನು ಅನುಭವಿಸದೆ ಇರುವವರಿಗೆ ಮೇಲಿನ‌ಸಾಲುಗಳು ಕತ್ತಲಿನಲ್ಲಿ ಬೆಳಕು ಕಂಡತೆ ಮಾನವ ಕುಲಕ್ಕೆ ದಾರಿದೀಪವಾಗಿದೆ.

ರವೀಂದ್ರ ನಾಥ್ ಟ್ಯಾಗೋರ್ ಮೇ 7 1861 ಇಂದಿನ ಕಲ್ಕತ್ತಾ ನಗರದಲ್ಲಿ ಜನಿಸಿದರು. ಇವರ ತಂದೆ ದೆವೇಂದ್ರನಾಥ್ ಟ್ಯಾಗೋರ್ ಮತ್ತು ತಾಯಿ ಶಾರದ ದೇವಿಯವರ ಎಂಬ ಬ್ರಾಹ್ಮಣ ದಂಪತಿಯ 13 ಮಗನಾಗಿ ರವೀಂದ್ರನಾಥ ಟಾಗೋರ್ ಜನಿಸಿದರು.

ರವೀಂದ್ರ ನಾಥ್ ಟಾಗೋರ್ ಶಾಲಾ ಶಿಕ್ಷಣದಲ್ಲಿ‌ ಆಸಕ್ತಿಯನ್ನು ಹೊಂದಿರಲಿಲ್ಲ , ರವೀಂದ್ರನಾಥ್ ಟಾಗೋರ್ ರವರು ಪ್ರತಿಪ್ಠಿತ ಸೇಂಟ್ ಜೇಬಿಯರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತು ಲಂಡನ್ ಯುನಿರ್ವಸಿಟಿಯಲ್ಲಿ ಕಾನೂನು ಪದವಿ ಅಧ್ಯಯನಕ್ಕೆ ತೆರಳಿದ ಇವರು ಪದವಿ ಪಡೆಯದೆಯೆ ಎರಡು ವರ್ಷಗಳಲ್ಲಿ ತವರಿಗೆ ಹಿಂತಿರುಗಿದರು .

ರವೀಂದ್ರ ನಾಥ್ ಟಾಗೋರ್ ರ ಶಾಲೆಯ ಶಿಕ್ಷಣದಲ್ಲಿನ ನಿರಾಸಕ್ತಿ ಅವರ ಸಾಧನೆಗೆ ಹಿನ್ನಡಯಾಗಲ್ಲಿಲ್ಲ, ಬಂಗಾಳ ಸಾಂಸ್ಕೃತಿಕ ಪುನರುಜ್ಜೀವನ ಕಾಲದ ಪ್ರಸಿದ್ದ ವ್ಯಕ್ತಿ ಎಂದೆ ಇವರನ್ನು ಗುರುತಿಸಲಾಗಿದೆ. ಕವಿ, ಕಾದಂಬರಿಗಾರ, ನಾಟಕಕಾರ, ಕಥೆಗಾರ, ವರ್ಣಚಿತ್ರ ಕಾರ, ತತ್ವಜ್ಞಾನಿ, ಶಿಕ್ಷಣ ತಜ್ಞ ಹೀಗೆ ಬಹುಮುಖ ಪ್ರತಿಭೆಯ ಗಣಿ ರವೀಂದ್ರನಾಥ ಟಾಗೋರ್.

ತಮ್ಮ ಎಂಟನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಕವಿತೆಯನ್ನು ರಚಿಸಿದರು, ಇವರ ಪ್ರಮುಖ ಕೃತಿಗಳೆಂದರೆ ಹಾಡುಗಳು ಸಂಗ್ರಹದ ಗೀತಾಂಜಲಿ, ಗೋರಾ – ಅಂದರೆ ಬಿಳಿ‌ ಮುಖದ ವ್ಯಕ್ತಿಯೆಂದು, ಘರ್ ಬೈರಾ – ಅಂದರೆ ಮನೆ ಮತ್ತು ಪ್ರಪಂಚ. ಇವರ ಮುಖ್ಯ ಕೃತಿಗಳು.

ರವೀಂದ್ರನಾಥ ಟಾಗೋರ್ ಅಥವಾ ಬಂಗಾಳಿಯಲ್ಲಿ (ರಬೀಂದ್ರನಾಥ ಠಾಗೋರ್) ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ತಮ್ಮ ಕೃತಿ “ಗೀತಾಂಜಲಿ”ಗಾಗಿ 1913 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಬಾರತದ ಮೊದಲಿಗರು. ಗೀತಾಂಜಲಿ ಭಕ್ತಿ ಗೀತೆಗಳು, ದೇಶಭಕ್ತಿ, ರಾಷ್ಟ್ರೀಯತೆ, ಸ್ವದೇಶಿ ಚಳುವಳಿ, ಮನುಕುಲದ ಹಿತಕ್ಕೆ ಸಂಬಂದಿಸಿದ, ಹೀಗೆ ಹತ್ತು ಹಲವು ವಿಷಯಗಳನ್ನೊಳಗೊಂಡ ಕೃತಿಯಾಗಿದೆ.

ಗೀತಾಂಜಲಿ ಕೃತಿ ಪ್ರಪಂಚದ ಸುಮಾರು 35ಕ್ಕೂ ಹೆಚ್ಚು ಬಾಷೆಗಳಲ್ಲಿ ಗದ್ಯ ಅಥವಾ ಪದ್ಯದ ರೂಪದಲ್ಲಿ ಅನುವಾದಿತಗೊಂಡಿದೆ. ಆಂಗ್ಲ ಭಾಷೆಯಲ್ಲಿ ಗೀತಾಂಜಲಿಯ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದು, ಆಂಗ್ಲ ಭಾಷೆಯಲ್ಲಿ 50  ಕ್ಕೂ ಹೆಚ್ಚು ಬಾರಿ ಮರುಮುದ್ರಣಗೊಂಡ ಗೀತಾಂಜಲಿ ಕೃತಿ ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ.

ರವೀಂದ್ರನಾಥ ಟಾಗೋರ್ ರವರು ಮೂರು ದೇಶಗಳ ರಾಷ್ಟಗೀತೆಗಳಿಗೆ ಸ್ಪೂರ್ತಿಯಾದರು, ಅವರು ರಚಿಸಿದ “ಜನಗಣ ಮನ” ಭಾರತ ದೇಶದ ರಾಷ್ಟಗೀತೆಯಾಯಿತು, “ಅಮರ ಸೋನಾರ್ ಬಾಂಗ್ಲಾ” ಬಾಂಗ್ಲಾದೇಶದ ರಾಷ್ಟಗೀತೆಯಾದರೆ, ಶ್ರೀಲಂಕಾದ ರಾಷ್ಟಗೀತೆಗೆ ಇವರ ಕೃತಿಗಳು ಸ್ಪೂರ್ತಿಯಾದವು.

“ದೇಶ ಸುತ್ತು ಕೋಶ ಓದು” ಎನ್ನುವ ಗಾದೆಯಂತೆ 1878 ರಿಂದ 1932 ರ ಅವಧಿಯಲ್ಲಿ ರವೀಂದ್ರನಾಥರು 30 ದೇಶಗಳಿಗೆ ಬೇಟಿ ನೀಡಿದರು.1812 ರ ಇಂಗ್ಲೆಂಡ್ ಮತ್ತು ಅಮೆರಿಕಾ ಪ್ರವಾಸ ಕೈಗೊಂಡಯಿವರು , 1926ರಲ್ಲಿ ಇಟಲಿಗೆ ಬೇಟಿ ನೀಡಿ ಅಂದಿನ ಸರ್ವಾಧಿಕಾರಿ ಬೆನಿಟೋ ಮುಸಲೋನಿಯನ್ನು ಬೇಟಿಯಾದರು.1930 ರಲ್ಲಿ ಖ್ಯಾತ ವಿಜ್ಞಾನಿ “ಅಲ್ಬರ್ಟ್ ಐನಸ್ಟೀನ್ ನರನ್ನು ಬೇಟಿಯಾದರು.

ರವೀಂದ್ರನಾಥರ ಪ್ರಮುಖ ಭೋದನೆಗಳೆಂದರೆ, “ಮೋಡಗಳು ನನ್ನ ಜೀವನದಲ್ಲಿ ತೇಲುತ್ತವೆ, ಮಳೆ ಅಥವಾ ಚಂಡಮಾರುತವನ್ನು ಒಯ್ಯಲು ಅಲ್ಲ ಬದಲಿಗೆ ನನ್ನ ಸೂರ್ಯಾಸ್ತದ ಆಕಾಶಕ್ಕೆ ಬಣ್ಣವನ್ನು ಸೇರಿಸಲು” ಎಂದರೆ ಜೀವನ ಏರಿಳಿತಗಳನ್ನು ಸಮಾನವಾಗಿ ಸ್ವೀಕರಿಸಿ, ಧನಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು ಎನ್ನುವುದು ಇದರ ಅರ್ಥವಾಗಿದೆ.

“ಕೇವಲ ನಿಂತು ಕೊಂಡು ನೀರನ್ನು ನೋಡುವುದರಿಂದ ನೀವು ಸಮುದ್ರವನ್ನು ದಾಟಲು ಸಾದ್ಯವಿಲ್ಲ” ಎಂದರೆ ಯಾವುದೇ ಪ್ರಯತ್ನವಿಲ್ಲದೆ  ಯಶಸ್ಸುನ್ನು ಗಳಿಸಲು ಸಾದ್ಯವಿಲ್ಲವೆಂದು ಅರ್ಥ.

“ಸಂತೋಷವಾಗಿರುವುದು ತುಂಬಾ ಸರಳವಾಗಿದೆ, ಅದರೆ ಸರಳವಾಗಿರುವುದು ತುಂಬ ಕಷ್ಟ” ಎಂದರೆ ಸರಳತೆಯೆನ್ನುವುದು ಒಂದು ತಪಸ್ಸಿನ ಹಾಗೆ ನಿರಂತರ ಪರಿಶ್ರಮ ಮತ್ತು ಶಿಸ್ತಿನ ಜೀವನದಿಂದ ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರವೀಂದ್ರನಾಥರು ಪ್ರಂಪಚಕ್ಕೆ ತಿಳಿಸುತ್ತಾರೆ.

“ಪ್ರೀತಿಯ ಉಡುಗೊರೆಯನ್ನು ನೀಡಲಾಗುವುದಿಲ್ಲ, ಅದು ಸ್ವೀಕರಿಸಲು ಕಾಯಬೇಕಾಗುತ್ತದೆ” ಎಂದರೆ ಪ್ರೀತಿ ಎನ್ನುವುದು ಮಾರುಕಟ್ಟೆಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ ಬದಲಿಗೆ ಮನಸ್ಸಿನಿಂದ ಮೂಡುವ ಬಾವನೆಯೆಂಬುದು ಇದರ ಅರ್ಥವಾಗಿದೆ.

“ಪ್ರೀತಿಯೆಂಬುದು ಅಂತ್ಯವಿಲ್ಲದ ರಹಸ್ಯವಾಗಿದೆ, ಏಕೆಂದರೆ ಅದನ್ನು ವಿವರಿಸಲು ಯಾವುದೇ ಸಮಂಜಸವಾದ ಕಾರಣವಿಲ್ಲ”, ಪ್ರೀತಿಗೆ ಯಾವುದೇ ರೂಪ, ಆಕಾರವಿಲ್ಲ ವ್ಯಕ್ತಿ ವ್ಯಕ್ತಿಗಳಿಗೆ ಬಿನ್ನವಾಗಿರುತ್ತದೆ .ಉದಾ ತಾಯಿ ತಂದೆಯರ ಮೇಲಿನ ಪ್ರೀತಿ , ಹೆಂಡತಿಯ ಮೇಲಿನ ಪ್ರೀತಿ, ಅಕ್ಕ ತಂಗಿಯರ ಮೇಲಿನ ಪ್ರೀತಿ ಇವೆ ಮುಂತಾದವು.

ರವೀಂದ್ರನಾಥ ಟಾಗೋರ್ ರ ಪ್ರಮುಖ ಸಾಧನೆಗಳೆಂದರೆ, 1913 ರಲ್ಲಿ‌ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರು‌, 1915 ರಲ್ಲಿ ಬ್ರಿಟಿಷ್ ಸರ್ಕಾರದ ನೈಟ್ ಹುಡ್ ಪದವಿ ಪಡೆದರು, ಅದರೆ 1919  ರ ಜಲಿಯನ್ ವಾಲಾಬಾಗ್ ಘಟನೆಯಿಂದ ನೊಂದು ನೈಟ್ ಹುಡ್ ಪದವಿಯನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂತುರುಗಿಸಿದರು.

1930ರಲ್ಲಿ ರವೀಂದ್ರನಾಥರ ವರ್ಣಚಿತ್ರಗಳ ಪ್ರದರ್ಶನ ಪ್ಯಾರಿಸ್ ಮತ್ತು ಲಂಡನ್‌ ನಗರಗಳಲ್ಲಿ ನೆಡೆಯಿತು ಇದರಿಂದ ಗುಲಾಮಗಿರಿ ದೇಶದ ಪ್ರಸಿದ್ದ ವ್ಯಕ್ತಿಯ ಪ್ರತಿಭೆಯನ್ನು ಜಗತ್ತಿಗೆ ಸಾರಿದಂತಾಯಿತು.

ರವೀಂದ್ರನಾಥ ಟಾಗೋರ್ ಇನ್ನೊಂದು ಪ್ರಮುಖ ಸಾಧನೆಯೆಂದರೆ “ಜಪಾನ್ ದೇಶದ ಡಾರ್ಟ್ ಟಿಂಗ್ ಹಾಲ್”  ಶಾಲೆಯ ಸಹ ಸಂಸ್ಥಾಪಕರಲ್ಲಿ ಇವರು ಕೂಡ ಒಬ್ಬರು.

ಮೇ 07  ರವೀಂದ್ರನಾಥ ಟಾಗೋರ್ ರ ಜನ್ಮ ದಿನವಾಗಿದ್ದು, ಅವರ ಭೋದನೆಗಳು  ಎಂದಿಗು ಪ್ರಸ್ತುತವಾಗಿರಲೆಂದು, ಭಾರತದ ಮತ್ತು ಜಗತ್ತಿನ ಯುವ ಜನಾಂಗಕ್ಕೆ ರವೀಂದ್ರನಾಥರು ಸದಾ ಸ್ಮರಣೀಯರಾಗಿರುತ್ತಾರೆ. ಈ ಅಂಕಣವನ್ನು ಬಾರತದ ಹೆಮ್ಮೆ ರವೀಂದ್ರನಾಥ ಟಾಗೋರ್ ರರಿಗರ ಅರ್ಪಿಸೋಣ.

‍ಲೇಖಕರು Admin

May 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: