ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಡಿ ಬಿ ಅನುವಾದದಲ್ಲಿ – ಜ್ವಾಲೆಗಳು

ಅಶೋಕ ಪುರಿ ಗೋಸ್ವಾಮಿ

ಕನ್ನಡಕ್ಕೆ : ರಜಿಯಾ ಡಿ ಬಿ

ಸಿಡಿಮದ್ದುಗಳ ಜಗತ್ತಿನಲ್ಲಿ
ನಮ್ಮ ಜೀವನ
ದುರದೃಷ್ಟವೇ ಏನೋ ಹತ್ತಿಯ ಅಂಗಡಿ ಜತೆಗೆ
ಸುಡುತ್ತಿರುವ ಬೀದಿಗಳಲ್ಲೆ
ನಿನ್ನ ಮನೆ
ಈ ಜ್ವಾಲೆಗಳಿಂದ ಅದು ಉಳಿಯುವ
ಸಾಧ್ಯತೆಯೇ ಇಲ್ಲ‌ss
ಎಚ್ಚರವಿರದಂತೆ ಯಾಕೆ ಕುಳಿತೇ
ನಿನ್ನಷ್ಟಕ್ಕೆ ನೀನು-

ಧ್ಯಾನವೆಲ್ಲಿ ಈಗ ನಿನಗೆ
ದೇಹದ ಅಂಗಾಂಗ ಊನವಾದಂತೆ;
ರಕ್ತ ಮಾಯವಾಗಿ ಹರಿಯುತ್ತಿದೆ
ಈ ಹಾಡು ss
ಗಲಭೆ ಸೃಷ್ಟಿಸಿ ಯಾರು ಶಾಂತವಾಗಿಲ್ಲ
ಮುರಿದ ನನ್ನ ನಾವೆಗೆ
ದೇವರೇ ನಾವಿಕ
ಎಲ್ಲರ ಸಂರಕ್ಷಕನಾದ
ಆತನೆ
ನನಗೂ ರಕ್ಷಕನು

‍ಲೇಖಕರು Admin

3 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading