ರಂಗಾಯಣಕ್ಕೆ ಸತೀಶ್ ಪ್ರಶ್ನೆ..

ಸತೀಶ್ ತಿಪಟೂರು

ಸ್ನೇಹಿತರೇ,

ಆತಿಥ್ಯ ಮಾತ್ರದಿಂದಲೇ ನಾಟಕ ಸಂಘಟನೆ ಸಾಧ್ಯವೇ?

ರಂಗಾಯಣ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವಿನೊಂದಿಗೆ ಜೂನಿಯರ್ ರೆಪರ್ಟರಿಯನ್ನು (ಸಂಚಾರಿ ರಂಗ ತಂಡ) ಪ್ರಾರಂಭಿಸಿದೆ.

ಈ ತಂಡವು ’ಧರ್ಮಪುರಿಯ ದೇವದಾಸಿ’ ಹಾಗು ‘ಸಂಗ್ಯಾ ಬಾಳ್ಯ’ ಎರಡು ನಾಟಕಗಳನ್ನು ಸಿದ್ದಪಡಿಸಿ ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದೆ.

ಈ ಪ್ರದರ್ಶನಗಳನ್ನು ಆಯಾ ಊರಿನ ಸ್ಥಳೀಯ ‘ರಂಗ ಸಂಸ್ಥೆ’ಗಳ ಸಹಯೋಗದೊಂದಿಗೆ ನಡೆಸಲು ಉದ್ದೇಶಿಸಿದ್ದು, ಸ್ಥಳೀಯ ಸಂಸ್ಥೆಗಳು ಊಟ/ವಸತಿ ಯ ಆತಿಥ್ಯ ಒದಗಿಸಿದರೆ ನಾಟಕ ಪ್ರದರ್ಶನವನ್ನು ರಂಗಾಯಣ ನೀಡುತ್ತದೆ ಎಂದು ಹೇಳಲಾಗಿದೆ.

ಆದರೆ ಆಯೋಜಿಸುವ ಸಂಸ್ಥೆಗಳು ಎರಡು ದಿನಗಳಿಗೆ

ಒದಗಿಸಬೇಕಾದ ಕನಿಷ್ಠ ಸೌಲಭ್ಯಗಳು ಇಂತಿವೆ..

20 ಜನ ಕಲಾವಿದರು/ತಂತ್ರಜ್ಞರಿಗೆ ಊಟ/ ವಸತಿ,

ರಂಗಮಂದಿರ ಬಾಡಿಗೆ /

ಬಯಲು ರಂಗಮಂದಿರವಾದರೆ ಟಿಕೆಟ್ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಶಾಮಿಯಾನ ಸೈಡ್ ವಾಲ್ ಹಾಗು ಆಸನ ವ್ಯವಸ್ಥೆ,

ಕರೆಂಟ್ (3 ಫೇಸ್-8 ಕೆ.ವಿ.)

ಜನರೇಟರ್ 15 ಕೆ.ವಿ/ಡೀಸೆಲ್,

ಪ್ರಚಾರಕ್ಕೆ ಸಂಬಂದಿಸಿದಂತೆ/ಫ್ಲೆಕ್, ಕರಪತ್ರ, ಪೋಸ್ಟರ್ ಇತ್ಯಾದಿ

ಮತ್ತು

ಇತರ ಸಂಘಟನಾ ಖರ್ಚುಗಳು…

ಇಷ್ಟೂ ವ್ಯವಸ್ಥೆಗಳನ್ನು (ಎರಡು ದಿನಗಳಿಗೆ ಕನಿಷ್ಟ ಸುಮಾರು 40,000/- ಆಗಬಹುದು ) ಊರಿನ ಪ್ರಾಯೋಜಕರ ನೆರವಿನೊಂದಿಗೆ ನೀಡಿದರೆ ರಂಗಾಯಣ ರೆಪರ್ಟರಿಯು ಪ್ರದರ್ಶನಗಳನ್ನು ನೀಡುತ್ತದೆ ಮತ್ತು ಪ್ರೇಕ್ಷಕರಿಗೆ ಸಬ್ಸಿಡಿ ದರದಲ್ಲಿ (ರೂ.25/-) ಟಿಕೆಟ್ ಮಾರಾಟ ಮಾಡಿ ಹಣವನ್ನು ರಂಗಾಯಣವೇ ತೆಗೆದುಕೊಳ್ಳುತ್ತದೆ.

ಸದುದ್ದೇಶದ ಈ ಯೋಜನೆಯು ರಂಗಭೂಮಿಯ ಪ್ರಾಯೋಜನೆ/ಸಂಘಟನೆ/ಸ್ಥಳೀಯ ಸಂಪನ್ಮೂಲ ಮುಂತಾಗಿ ಹಲವು ಪ್ರಾಯೋಗಿಕ ಸಮಸ್ಯೆಗಳ ಕುರಿತಾಗಿ ಹಲವು ಪ್ರಶ್ನೆಗಳನ್ನು ಎತ್ತುತ್ತದೆ.

1. ಸ್ಥಳೀಯ ಸಂಪನ್ಮೂಲವನ್ನು ಆಶ್ರಯಿಸಿ ವರ್ಷದಲ್ಲಿ ಒಂದೆರಡು ನಾಟಕಗಳನ್ನಷ್ಟೇ ಆಯೋಜಿಸುವ ಸಾದ್ಯತೆಗಳು ಇರುವ ಗಾಮೀಣ ಪ್ರದೇಶಗಳಲ್ಲಿ ಸಬ್ಸಿಡಿ ದರದ ಟಿಕೆಟ್ ಹಣವನ್ನೂ ಸಂಘಟನೆಯ ಖರ್ಚಿಗೆ ನೀಡದ ನಿಮ್ಮ ಈ ಯೋಜನೆ ಸ್ಥಳೀಯ ರಂಗ ಸಂಸ್ಥೆಗಳಿಗೆ ಆರ್ಥಿಕ ಹೊರೆಯಲ್ಲವೆ…?

2. ನಾಟಕ ಪ್ರದರ್ಶನದ ಟಿಕೆಟ್ ಹಣದಿಂದಲೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ವೃತ್ತಿಪರ ರಂಗತಂಡಗಳಿಗೆ ನಿಮ್ಮ ಸಬ್ಸಿಡಿ ಟಕೆಟ್ ದರದಿಂದ (ರೂ.25/-) ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಆತ್ಮ ವಿಶ್ವಾಸ ಹೆಚ್ಚುವುದೇ…? ಇದು ನಾಟಕ ಮೌಲ್ಯದ ಪ್ರಶ್ನೆಯೂ ಆಗಬಹುದೇ..?
(ನಮ್ಮೂರಿನಲ್ಲಿ ನಾಟಕ ಪ್ರವೇಶ ದರ ರೂ.50/- ಅದೂ 25 ವರ್ಷಗಳ ಸತತ ಪರಿಶ್ರಮದಿಂದ )

3. ಯಾವುದೇ ಆರ್ಥಿಕ ಸಹಾಯವಿಲ್ಲದೇ ಆಯೋಜಕರ ಪ್ರೀತಿ ಮತ್ತು ಟಿಕೆಟ್ ಹಣದಿಂದಲೇ ಹತ್ತಾರು ವರ್ಷಗಳಿಂದ ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವ ‘ಜನಮನದಾಟ’, ‘ಆಟ ಮಾಟ’, ‘ಥಿಯೇಟರ್ ಸಮುರಾಯ್ಸ್ ಮುಂತಾದ ಹಲವಾರು ವೃತ್ತಿಪರ ಸಂಚಾರಿ ರಂಗತಂಡಗಳಿಗೆ ಆಯೋಜಕರ ಕೊರತೆಯಿಂದ ತೊಂದರೆಯಾಗಬಹುದೇ…?

4. ಈ ಕೆಲವು ಪ್ರಶ್ನೆಗಳೊಂದಿಗೆ ಸರ್ಕಾರಿ ಆರ್ಥಿಕ ಸಹಕಾರವಿರುವ ರಂಗಾಯಣ ಜೂನಿಯರ್ ರೆಪರ್ಟರಿ ಇತರ ರಂಗತಂಡಗಳಿಗೆ ತೊಂದರೆಯಾಗದಂತೆ ಕನ್ನಡ ರಂಗಭೂಮಿಯ ಆತ್ಮವಿಶ್ವಾಸ ಮತ್ತು ಘನತೆ ಹೆಚ್ಚಿಸುವಂತೆ ಯಾವ ರೀತಿಯ ಪ್ರದರ್ಶನ ಸಾಧ್ಯತೆಗಳನ್ನು ರೂಪಿಸಿಕೊಳ್ಳಬಹುದು..?

5. ವೃತ್ತಿರಂಗಭೂಮಿಯವರು ಮಾಡುವಂತೆ ಸ್ಥಳೀಯರ ಸಹಕಾರದೊಂದಿಗೆ ಪರಿಪೂರ್ಣ ಸಂಘಟನೆಯ ವೆಚ್ಚವನ್ನು ಭರಿಸಿ ಮೌಲ್ಯಯುತ ಟಿಕೆಟ್ ಪ್ರದರ್ಶನಗಳನ್ನು ನೀಡಬಹುದೇ..?

6. ರಿಯಾಯಿತಿ ಟಿಕೆಟ್ ದರದ ಬದಲು ಕಡಿಮೆ ಸಂಭಾವನೆಗೆ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಆಯೋಜಕರ ಖರ್ಚು ವೆಚ್ಚಗಳು ಸರಿದೂಗಿಸಿಕೊಳ್ಳಲು ದರ ನಿಗದಿಯ ಅವಕಾಶವನ್ನು ‘ರಂಗ ಸಂಸ್ಥೆ’ಗಳಿಗೆ ನೀಡಿ ಸಹಕರಿಸಬಹುದಲ್ಲವೇ..?

7. ಯಾರಿಗೂ ಹೊರೆಯಾಗದಂತೆ ಹಲವಾರು ವರ್ಷಗಳಿಂದ ಪ್ರದರ್ಶನಗಳನ್ನು ನೀಡುತ್ತಿರುವ ನೀನಾಸಮ್, ಶಿವಸಂಚಾರ, ಜನಮನದಾಟ, ಆಟ ಮಾಟ, ಥಿಯೇಟರ್ ಸಮುರಾಯ್ಸ್ ಮುಂತಾದ ವೃತ್ತಿಪರ ಸಂಚಾರಿ ತಂಡಗಳು ತಮ್ಮ ಅನುಭವಗಳ ನೆಡೆಯಲ್ಲಿ ಕಂಡುಕೊಂಡಿರುವ ಸ್ವರೂಪ ನಿಮಗೂ ಮಾದರಿಯಾಗಬಹುದೇ ?

ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊÀಂಡು ಚರ್ಚೆಗಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ವಂದನೆಗಳೊಂದಿಗೆ

ಸತೀಶ್ ತಿಪಟೂರು
ರಂಗ ನಿರ್ದೇಶಕರು

‍ಲೇಖಕರು avadhi

March 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: