ರಂಗಶಂಕರದಲ್ಲಿ ‘ಅಮ್ಮಾ ಮತ್ತು ಸುಹೇಲ್’

ಭಿನ್ನ-ಸಾಮಾನ್ಯ (queer) ಪ್ರೇಮಕ್ಕೆ ಒಂದು ಹೃದಯಪೂರ್ವಕ ಸಮರ್ಪಣೆ. ಕಾರಣಾಂತರಗಳಿಂದ, ಪೂರ್ವಕಲ್ಪಿತ ಭಾವನೆಗಳಿಂದ ದೂರ ಸರಿದಿರುವ ಮನಸ್ಸುಗಳನ್ನು ಮತ್ತೆ ಹತ್ತಿರ ತರುವಲ್ಲಿ ಅಂತಃಕರಣ, ಸಕಾರಾತ್ಮಕ ಸಂಭಾಷಣೆ ಮತ್ತು ಸ್ಪಂದನೆಗಳ ಶಕ್ತಿ ಮತ್ತು ಉಪಯುಕ್ತತೆ ಬಗ್ಗೆ ಈ ನಾಟಕ ಚಿಂತಿಸುತ್ತದೆ. ಕಥಾ ಹಂದರವು ಮನುಷ್ಯ ಸಹಜವಾದ ಎಲ್ಲಾ ಭಾವನೆಗಳನ್ನೂ, ಆಸೆ- ನಿರಾಶೆಗಳನ್ನೂ ಮುಕ್ತವಾಗಿ, ಹಾಸ್ಯದ ಮೂಲಕ ತೆರೆದಿಡುತ್ತದೆ. ಪಾತ್ರಗಳು ಒಂದನ್ನೊಂದು ಪ್ರಶ್ನಿಸುತ್ತಾ, ತನ್ಮೂಲಕ ಅರ್ಥಮಾಡಿಕೊಳ್ಳುತ್ತಾ ಹೋದಾಗ, ಸಹಾನುಭೂತಿ ಮತ್ತು ಗೌರವದ ಬಾಗಿಲುಗಳು ತೆರೆದುಕೊಳ್ಳುತ್ತದೆ.

ಲೈಂಗಿಕ ಅಸ್ಮಿತೆ, ಜಾತಿ, ಮತಗಳನ್ನೂ ಮೀರಿ. ಪ್ರೀತಿ-ನೋವು ಮುಂತಾದ ಮುಗ್ಧ ಮನುಷ್ಯ ಭಾವನೆಗಳು ಎಲ್ಲರಲ್ಲೂ ಒಂದಾಗೇ ಮಿಡಿಯುತ್ತಿರುತ್ತದೆ ಎನ್ನುವುದೇ ಈ ನಾಟಕದ ಮೂಲ ಸೆಲೆಯಾಗಿರುತ್ತದೆ. ಒಂದು ಅಂತರ್ಮತೀಯ ಭಿನ್ನ-ಸಾಮಾಮನ್ಯ ಜೋಡಿ ಮತ್ತು ಅವರಲ್ಲೊಬ್ಬರ ಅಮ್ಮ ಭೇಟಿಯಾದಾಗ ಉಂಟಾಗುವ ಸನ್ನಿವೇಷ, ತದನಂತರ ಅವರ ಸಂಬಂಧದ ಯಾನದಲ್ಲಿ ಅವರೆಲ್ಗರೂ ತಮ್ಮ ಭೂತಕಾಲದ ಹೊರೆಗಳನ್ನೆಲ್ಲಾ ಕಳಚಿಡುತ್ತಾ, ಅಂತಃಕರಣಗಳನ್ನು ತೆರೆದುಕೊಳ್ಳುತ್ತಾ ಪ್ರೀತಿ, ಒಪ್ಪಿಗೆ ಮತ್ತು ದ್ವೇಶದ ಒಳ ಹಂದರಗಳನ್ನು ದಾಟುತ್ತಾ, ತಮ್ಮನ್ನು ತಾವೇ ಹೊಸ ಬೆಳಕಿನಲ್ಲಿ ಕಂಡುಕೊಳ್ಳುತ್ತಾ ಹೋಗುತ್ತಾರೆ.

ರಚನೆ-ನಿರ್ದೇಶನ – ಸಂಗೀತ : ಕಾರ್ತಿಕ್ ಹೆಬ್ಬಾರ್
ಪಾತ್ರ ವರ್ಗ: ಡಾ. ಸೀತಾ ಕೋಟೆ, ಬಿ ವಿ ಶೃಂಗ, ಅರುಣ್ ಡಿ ಟಿ.
ಬೆಳಕು: ಎಂ ಜಿ ನವೀನ್
ತಂಡ ನಿರ್ವಹಣೆ: ಮುರಳಿ ಶ್ರೀರಾಮ್

‍ಲೇಖಕರು avadhi

January 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: