ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರ ಪ್ರಿಯನಾಗಲಿಲ್ಲ…

ಮೂಲ : ವಸೀಂ ಬರೆಲವೀ

ಕನ್ನಡಕ್ಕೆ : ಮೆಹೆಬೂಬೀ

ಒತ್ತಾಯದ ವಿಷ ಏನೇ ಆಗಲಿ ಕುಡಿಯೋದಿಲ್ಲ…
ನಾನು ಜಗತ್ತಿನ ಷರತ್ತುಗಳ ಮೇಲೆ ಜೀವಿಸೋದಿಲ್ಲ…

ಸೋಲುಂಡವನ ನೋಡಲು ನನ್ನಿಂದ ಆಗುವುದಿಲ್ಲ
ಆದ್ದರಿಂದಲೇ ನಾನಾವ ಯುದ್ಧವ ಗೆಲ್ಲಲಿಲ್ಲ….

ನನ್ನ ಪಾಲಿನ ಹಗಲುಗಳ ಸೂರ್ಯನನ್ನು ಹುಟ್ಟಿಸುತ್ತೇನೆ ನಾನೇ
ನಾನು ಹಣತೆಗಳ ಉಸಿರುಗಳ ಮೇಲೆ ಜೀವಿಸೋದಿಲ್ಲ…

ಆಯುಷ್ಯವಿಡೀ ನಿಯಮಗಳ ಗಡಿಗಳೊಳಗೆ ಕಳೆದೆ
ಆದ್ದರಿಂದ ನಾನು ಯಾರ ಪ್ರಿಯನಾಗಲಿಲ್ಲ….

‍ಲೇಖಕರು Admin

29 December, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading