ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೋ ಈಗೀಗ ಕವಿತೆ ಹುಟ್ಟುತ್ತಿಲ್ಲ..

ದಾಕ್ಷಾಯಣಿ ನಾಗರಾಜ
ಕುರುಗೋಡು । ಬಳ್ಳಾರಿ

ಜೋಪಡಿಯಲ್ಲಿ
ಜೋತಾಡುವ
ಬದುಕ ಧಾವಂತಗಳ
ಪದಗಳಲಿ ಹಿಡಿಯಲಾಗುತ್ತಿಲ್ಲ

ಯಾವುದೋ ಕಾಯ್ದೆಗೆ
ಸಿಲುಕಿ
ಬೀದಿಗೆ ಬಿದ್ದ ಬೀದಿ ವ್ಯಾಪಾರಿಯ ನೋವು
ಕಾವ್ಯವಾಗುತ್ತಿಲ್ಲ

ಆಫೀಸಿನಿಂದ ಆಫೀಸಿಗೆ
ಅಲೆವ ಸಾಕಮ್ಮನ
ಸವೆದ ಚಪ್ಪಲಿಗಳ
ಆತ್ಮ ಕಥೆ ಹೆಣೆಯಲಾಗುತ್ತಿಲ್ಲ

ಯಾಕೋ ಈಗೀಗ ಕವಿತೆ ಅರಳುತ್ತಿಲ್ಲ

ಪದದ ದ್ವಂದ್ವದ ಚಿಂತೆ
ನಿಘಂಟ ತಡಕಾಡಿ ಬಳಸಿದರೆ ಮತ್ತೇನೊ ಕಾಡುವ ಆತಂಕ
ಮತ್ತೆ ಮತ್ತೆ ಹೆಕ್ಕುವೆ
ಪದಸಂತೆಯೊಳಗೆ  ಅಳಿಸುವೆ
ಬದಲಾಯಿಸುವೆ, ಸೋಲುವೆ,
ಮತ್ತೆ ಹೆಕ್ಕುವೆ

ಓಲೈಕೆಯ ಧಿಕ್ಕರಿಸಿ
ನೋವಿಗೆ ದನಿಯಾಗದ
ಅಸಹಾಯಕ ಕವಿತೆ ಮರುಗುತ್ತದೆ,,,,
ನನ್ನಂತೆ

ಯಾಕೋ ಈಗೀಗ ಕವಿತೆಗಳು
ಹುಟ್ಟುತ್ತಿಲ್ಲ,,,,

‍ಲೇಖಕರು avadhi

16 February, 2020

2 Comments

  1. Chaitra Shivayogimath

    ಚೆನ್ನಾಗಿದೆ!!! 🙂

  2. Dakshayani nagaraj

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading