ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕಿಂಗ ಕಾಡತಿ ಮನದಾಗ..

ಜಯಶ್ರೀ ಭ ಭಂಡಾರಿ /ಬಾದಾಮಿ

ಯಾಕೀ ಮೌನ…..
ಸರಿದಾರಿಗೆ ಬಾರೋ ಸರದಾರ
ಸಾಕಾಗೇದ ನಿನ್ನ ಮೌನಧಾರ
ಯಾಕಿಂಗ ಕಾಡತಿ ಮನದಾಗ
ಸರಸರ ಬರತಿದ್ದಿ ಸರಸಕ ಕರೆದಾಗ

ಆದದ್ದೆಲ್ಲ ಮರತ ಆಗುದ ನೋಡ
ನಿನ್ನ ಬಿಟ್ಟ ಇರಾಕ ನೀಗಂಗಿಲ್ಲ ಬಿಡ
ಜೋಡಿ ಜೀವ ಅಗಲಿದರ ಏನ ಚಂದ
ನೋಡದವರ ಏನಂದಾರ ತಿಳದ ನೋಡ

ಹೆಜ್ಯಾಗ ಹೆಜ್ಜಿ ಇಟ್ಟಬಂದಾಕಿ
ನೀ ಉಂಡ ಎಲ್ಯಾಗ ಉಂಡಾಕಿ
ಕಷ್ಟ ಸುಖದಾಗ ನಿನ್ನ ಜೊತೆಯಾದಾಕಿ
ಸರಸದಲ್ಲಿ ಸಾಟಿಯಿಲ್ಲದವನೆ ನಾ ನಿನ್ನಾಕಿ.

 

ಬರೋ ಹುಣ್ಣಿಮೆಗೆ ತಿಂಗಳಾತು
ತಿಂಗಳ ಬೆಳಕ ತಂಗಳಾತು
ಬ್ಯಾಸರ ಬಂದದ ನೀನಿಲ್ದದ ಅಂಗಳ
ಎಂದು ಬರುವೆ ರಾಯ ಕಾಯ್ತಿವೆ ಕಂಗಳ

ಮಲ್ಲೆಮುಡಿದು ಬಹಳ ದಿನವಾತು
ಲಲ್ಲೆಗರೆಯುವ ಸಮಯ ಬಂದಾತು
ತಣಿಸುಬಾ ರಸಿಕನೆ ಮನದನ್ನೆಯ
ಹರುಷದಿ ಸರಸದಿ ಸೇರುವ ಬಾ
ಜೊನ್ನಹನಿಯಾಗಿ

‍ಲೇಖಕರು avadhi

6 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading