ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊನ್ನೆ ಎಲ್ಲವನ್ನೂ ಸ್ಕ್ಯಾನ್ ಮಾಡಿಸಿ, ತಂದಿಟ್ಟುಕೊಂಡೆ..

tejasvini hegade

ತೇಜಸ್ವಿನಿ ಹೆಗಡೆ 

chiguru1“ಚಿಗುರು” –

ಇದು ನಾನು ಎಂಟೊಂಭತ್ತನೆಯ ತರಗತಿಯಲ್ಲಿದ್ದಾಗ ರಚಿಸಿದ್ದ ಕವಿತೆಗಳ ಸಂಗ್ರಹ. ನಾನು ಹತ್ತನೆಯ ತರಗತಿಯಲ್ಲಿದ್ದಾಗ, ಅಂದು ಕಲಿಯುತ್ತಿದ್ದ ಲಿಟ್ಲ್‌ಫ್ಲವರ್ ಹೈಸ್ಕೂಲಿನಲ್ಲಿ ಬಿಡುಗಡೆಗೊಂಡಿತ್ತು.

ಇದನ್ನು ಪ್ರಕಟಿಸಿ, ಬಿಡುಗಡೆ ಮಾಡಿದವರು, ಅಂದು ನನಗೆ ಕನ್ನಡ ಪಠ್ಯವನ್ನು ಕಲಿಸುತ್ತಿದ್ದ ಶ್ರೀಯುತ ರಾಮ ನಾಯಕ್ (ಸುಮುಖಾನಂದ ಜಲವಳ್ಳಿ ಎಂಬ ಕಾವ್ಯ ನಾಮದಿಂದ ಬರವಣಿಗೆ ಮಾಡುತ್ತಿರುವವರು. ಅಂದು ಮಾತ್ರವಲ್ಲ.. ಇಂದಿಗೂ ನನ್ನ ಗುರುಗಳೇ. ನಿವೃತ್ತಿಯ ನಂತರವೂ ಕನ್ನಡಕ್ಕಾಗಿ ದುಡಿಯುತ್ತಿರುವವರು. ಊರಿನಲ್ಲಿದ್ದುಕೊಂಡೇ ‘ಸಂಪ್ರಭ’ ಎಂಬ ಕಿರು ಪತ್ರಿಕೆಯನ್ನೂ ನಡೆಸುತ್ತಿದ್ದಾರೆ.

ನನ್ನಲ್ಲಿ ಮಾತ್ರವಲ್ಲ, ಅವರ ವಿದ್ಯಾರ್ಥಿಗಳೆಲ್ಲರಲ್ಲೂ ಕನ್ನಡ ಭಾಷೆಯ ಮೇಲೆ ಪ್ರೀತಿ, ಆದರವನ್ನು ಬೆಳೆಸಲು ಶ್ರಮಿಸಿದವರು. ತರಗತಿಯ ಬಿಡುವಿನಲ್ಲಿ, ನಾನೇ ಏನೋ ಗೀಚಿ ಮುಚ್ಚಿಟ್ಟುಕೊಳ್ಳುತ್ತಿದ್ದ ಕವಿತೆಗಳನ್ನೆಲ್ಲಾ ಓದಿ, ಮೆಚ್ಚಿ, ಪ್ರೋತ್ಸಾಹಿಸಿದರು.

ನನ್ನ ಮನೆಯಲ್ಲಿಯೂ ಪ್ರಸ್ತಾಪಿಸಿ, ಉತ್ಸಾಹದಿಂದ ಹೊತ್ತಗೆಯ ರೂಪ ಕೊಟ್ಟು ತಮ್ಮ ಸುಮುಖ ಪ್ರಕಾಶನದ ಹೆಸರಿನಡಿ ಪ್ರಕಟಿಸಿದವರು. ಹೊಸ ದಾರಿಯ ತೆರೆದವರು. ತೋರಿದವರು. ಹಿಂದೆ ಗುರು, ಮುಂದೆ ಗುರಿ ಇದ್ದರೆ ಯಾವುದೂ ಸಾಧ್ಯ ಎನ್ನುವುದು ಸತ್ಯಕ್ಕೆ ಸತ್ಯ. ಗುರುಭ್ಯೋ ನಮಃ. 

ಈಗ ನನ್ನ ಬಳಿ ಈ ಕವನಸಂಕಲನದ ಒಂದೆರಡು ಪ್ರತಿಗಳು ಮಾತ್ರ ಇವೆ. ಮೊನ್ನೆ ಎಲ್ಲವನ್ನೂ ಸ್ಕ್ಯಾನ್ ಮಾಡಿಸಿ, ತಂದಿಟ್ಟುಕೊಂಡೆ.

chiguru3

chiguru4

chiguru5

chiguru2

‍ಲೇಖಕರು admin

2 December, 2015

4 Comments

  1. tejaswini hegde

    ತುಂಬಾ ಧನ್ಯವಾದಗಳು

  2. ಮುಗಿಯದ ಮೌನ- GKN

    ಬಾಲ್ಯದ ನೆನಪುಗಳ ಬುತ್ತಿಗೆ, ಜಾರಿ ಹೋಗಿದ್ದೀರಿ, ಜೊತೆಗೆ ನಮ್ಮನ್ನೂ ಜಾರಿಸಿದ್ದೀರಿ, ಧನ್ಯವಾದಗಳು,,,,,,,

    ಮುಂದುವರೆಯಲಿ ಈ ಕೃಷಿ

  3. Anonymous

    ಕವಯಿತ್ರಿಗೆ ಅಭಿನಂದನೆಗಳು. ಒಂದು ಮಾತು. ಚಿತ್ರದಲ್ಲಿರುವವರು ಸುಮುಖಾನಂದ ಜಲವಳ್ಳಿಸರ್ ಅಲ್ಲ ಅಂತ ನನ್ನ ಅನುಮಾನ. ಅವರು ಭುವನಾಭಿರಾಮ ಉಡುಪ. ಆಗಿರಬೇಕು. ಅವರು ಜಲವಳ್ಳಿಯವರ ಸ್ನೇಹಿತರೇ.ಬಹುಶ: ಅವರೂ ಸಮಾರಂಭದಲ್ಲಿ ಭಾಗವಹಿಸಿದ್ದಿರಬಹುದು. ನನ್ನ ಗಮನಕ್ಕೆ ಬಂದ ವಿಷಯವನ್ನು ತಿಳಿಸಿದೆ ಅಷ್ಟೆ.

    • Avadhi

      U r right. Image removed

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading