ಮೇಲೊಂದು ಗರುಡ ಹಾರುತಿಹುದು..

ಬಿ ಎ ವಿವೇಕ ರೈ

ಚಿತ್ರ:Putina.jpgಕನ್ನಡದ ಹಿರಿಯ ಕವಿ ಪು.ತಿ.ನರಸಿಂಹಾಚಾರ್  ಅವರು ೧೯೪೭ರಲ್ಲಿ ಬರೆದ ಒಂದು ಮಹತ್ವದ ಕವನ – ‘ನೆರಳು’.  ಗಾಂಧೀಜಿಯನ್ನು ಗರುಡನ ರೂಪಕದ ಮೂಲಕ ವಿವರಿಸುತ್ತಾ ಅವರ ಪ್ರಭಾವದ ‘ನೆರಳು’  ಭೂಮಿಯಲ್ಲಿ ಚಲಿಸುವ ವರ್ಣನೆ ಆ ಕವನದಲ್ಲಿ ಇದೆ. ಇವತ್ತು ಗಾಂಧಿ ಅವರ ಆದರ್ಶ ,ಮೌಲ್ಯಗಳು ಬಹುತೇಕ ಕಣ್ಮರೆ ಆಗಿವೆ. ಈಗ ಗರುಡ ಇಲ್ಲ ಅಷ್ಟೇ ಅಲ್ಲ, ಗರುಡನ ನೆರಳೂ ಕಣ್ಮರೆಯಾಗಿದೆ.  ’ಅದಕೋ ಅದರಿಚ್ಚೆ ಹಾದಿ, ಇದಕು ಹರಿದತ್ತ ಬೀದಿ’ ಎನ್ನುವ ಪುತಿನ ಕವನದ ಸಾಲುಗಳು ಈ ಸಂದರ್ಭದಲ್ಲಿ ವ್ಯಂಗ್ಯದ  ಭಿನ್ನ ಅರ್ಥವನ್ನು ಕೊಡಬಹುದು. ಧರ್ಮ,ಜಾತಿ,ಪಂಗಡ,ಪ್ರದೇಶ, ಪಕ್ಷಗಳ ನೂರಾರು ಬೀದಿಗಳಲ್ಲಿ ನೆರಳುಗಳು ಕೂಡಾ ಇಲ್ಲದೆ ಜನರು ಎತ್ತೆತ್ತಲೋ ಹರಿಯುತ್ತಿರುವಾಗ ಕವಿ ಮಾತು ಇನ್ನಷ್ಟು ನೆನಪಾಗುತ್ತದೆ  : ‘ ಇದ ನೋಡಿ ನಾನು ನೆನೆವೆನಿಂದು  – ಇಂಥ ನೆಳಲೇನು ಗಾಂಧಿಯೆಂದು!’

ಮತ್ತೆ ಮತ್ತೆ ಓದಿದಷ್ಟೂ ಈ ಕವನ ಪ್ರಸ್ತುತ ಸಂದರ್ಭದಲ್ಲಿ ಸಮಕಾಲೀನ ಅರ್ಥಗಳನ್ನು ಕೊಡುವ ಧ್ವನಿ ಶಕ್ತಿಯನ್ನು  ಹೊಂದಿದೆ.

ಸ್ವಾತಂತ್ರ್ಯ ದಿನದ ನೆನಪಿನಲ್ಲಿ ಪುತಿನ ಅವರ ‘ನೆರಳು’ ಕವನವನ್ನು ಇಲ್ಲಿ ಕೊಡಲಾಗಿದೆ:

ಮೇಲೊಂದು ಗರುಡ ಹಾರುತಿಹುದು

ಕೆಳಗದರ ನೆರಳು ಓಡುತಿಹುದು

ಅದಕೊ ಅದರಿಚ್ಚೆ ಹಾದಿ

ಇದಕು ಹರಿದತ್ತ ಬೀದಿ.

ನೆಲನೆಲದಿ ಮನೆಯ ಮನೆಯ ಮೇಲೆ

ಕೊಳ ಬಾವಿ ಕಂಡು ಕಾಣದೋಲೆ

ಗಿಡ ಗುಲ್ಮ ತೆವರು ತಿಟ್ಟು

ಎನ್ನದಿದಕೊಂದೆ ನಿಟ್ಟು.

ಗಾಳಿ ಬೆರಗಿದರ ನೆಲದೊಳೋಟ !

ವೇಗಕಡ್ಡ ಬಹುದಾದ  ಹೂಟ?

ಸಿಕ್ಕು ದಣಿವಿಲ್ಲದಂತೆ

ನಡೆಯಿದಕೆ ನಿಲ್ಲದಂತೆ.

ಇದ ನೋಡಿ ನಾನು ನೆನೆವೆನಿಂದು

ಇಂಥ ನೆಳಲೇನು ಗಾಂಧಿಯೆಂದು !

ಹರಿದತ್ತ ಹರಿಯ ಚಿತ್ತ

ಈ ಧೀರ ನಡೆವನತ್ತ.

 

‍ಲೇಖಕರು avadhi

August 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vidyarashmi pelathadka

    ಸುಮಾರು ೧೦ ವರ್ಷಗಳ ಹಿಂದೆ ಈ ಕವನ ಓದಿದ್ದೆ. ಮತ್ತೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್ ಸರ್.

    ಪ್ರತಿಕ್ರಿಯೆ
  2. Gananath

    ಎಷ್ಟೊಂದು ಬಾರಿ ಈ ಕವನ ಓದಿದ್ದೇನೆ. ಪ್ರತಿ ಬಾರಿಯೂ ಹೊಸದಾಗಿ ಓದಿದಅಂತೆ ಅನಿಸುತ್ತದೆ.

    ಮರು ಓದಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
  3. raghunath

    Gandhiji pu.ti.na.tale marige neralagiddare ee tale marige BhutanDante. Tappiskollabekada duswapnavagiddarre.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: