ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಹಬೂಬಿ ಗಝಲ್..


ಮೂಲ: ಮುನವ್ವರ ರಾಣಾ

ಅನು: ಮೆಹಬೂಬಿ

ಈ ಓಣಿಯಲಿ ಹಸಿದ ರೈತನಿದ್ದಾನೆ
ಇದು ಆ ಭೂಮಿ ಅಲ್ಲಿ ಆಗಸವಿದೆ…

ಹೆದರಿಕೆಯಿದೆ ಗಾಳಿಯಿಂದ ಈ ಗಿಡ ಬೀಳದಿರಲಿ
ಇದರಲೊಂದು ಹಕ್ಕಿಗಳ ವಂಶವಿದೆ…

ಹಾದಿಯಲಿ ಅಲೆಮಾರಿ ಹುಚ್ಚನಂತಿದೆ ಹೃದಯ
ಅದರೊಂದಿಗೆ ಗಾಯದ ತಾಜಾ ಕಲೆಯೊಂದಿದೆ..

ನಿನ್ನ ಕನಸುಗಳ ಗಂಧ ಹೊತ್ತಿವೆ ಕಣ್ಣುಗಳು
ನಿನ್ನ ನೆನಪಿನಿಂದ ಹೃದಯ ಕೇಸರಿಯಾಗಿದೆ..

ನನಗೆ ಶತ್ರುಗಳ ಸಂಖ್ಯೆಯೇಕೆ ತಿಳಿಸುತ್ತೀರಿ
ನನ್ನ ಜೊತೆಗಿರುವ ಮಗನಿಗೂ ಯೌವನ ಬಂದಿದೆ…

ಸಿಂಗರಿಸಲ್ಪಡುತ್ತವೆ ವಧಾಸ್ಥಾನಗಳು ‘ರಾಣಾ’
ದೇಶದಲ್ಲಿ ದಿನಾಲೂ ನನ್ನ ಪರೀಕ್ಷೆ ನಡೆಯುತ್ತಿದೆ..

‍ಲೇಖಕರು Admin

28 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading