ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆತ್ತಗೆ ಸವರುತ್ತ ಸಾಗಬೇಕಷ್ಟೇ..

ಚುಕ್ಕಿ ಇಟ್ಟುಬಿಡು

ವೈಶಾಲಿ ಹೆಗ್ಡೆ

 

ಚುಕ್ಕಿ ಇಟ್ಟುಬಿಡು

ಒಂದರ ಪಕ್ಕ ಇನ್ನೊಂದು

ಸಾಲಾಗಿ

ಸಾಲು ಸಾಲಾಗಿ

ರಂಗೋಲಿಯ ಗೆರೆಗಳ ಲೆಕ್ಕ ತಪ್ಪುವವು

rangoli balu mandartiಬಿಗಿದಿಡುವ ಚುಕ್ಕಿ ಇಲ್ಲದಿರೆ

ಸಣ್ಣಹುಡಿಯ ಹರಳು ಅತ್ತಿತ್ತಲಾದೀತು

ಉಸಿರ ಗಾಳಿಯೇ ಸಾಕು

ಗೆರೆ ಪೂರ ಡೊಂಕು

ಮತ್ತೆ ನೇರ ಕೂಡಿಸಲೊಂದು ಚುಕ್ಕಿಯೇಬೇಕು ಅದೋ ಆ ತುದಿಯಲ್ಲಿ

ಉಸಿರು ಬಿಗಿ ಹಿಡಿದುಕೊ

ಹೆಬ್ಬೆರಳ ಬದಿಯಿಂದ ತೋರುಬೆರಳ ನಡುವಿನ ಕಣಿವೆಯಲಿ

ಸಪೂರ ಜಾರಬೇಕದು

ಅಳತೆ ತಪ್ಪದಂತೆ ಉದುರಬೇಕು

ಗುಪ್ಪೆಯಾಗದಂತೆ ಎಳೆ ಬೀಳಬೇಕು

ಚುಕ್ಕಿ ಚುಕ್ಕಿಯ ಹೆಣಿಕೆಯಲಿ ಹೊಕ್ಕು ಹೊರಡುವ ಗೆರೆಗೆಲ್ಲೂ ಮೋಹಬೇಡ

ಮೆತ್ತಗೆ ಸವರುತ್ತ ಸಾಗಬೇಕಷ್ಟೇ

ಎಲ್ಲ ಕೊಡಿಸಿಡುವ ಕಾಯಕದ ಹಿಂದಿಂದ

ಚುಕ್ಕಿಯ ಕುರುಹು

ಮರೆಯಾದೀತು

ಆದರೆ ಇರುವಿಕೆಯಲ್ಲ

‍ಲೇಖಕರು admin

24 October, 2016

2 Comments

  1. Suma

    very nice vaishali. Just got a hang of your writings.

  2. Shreedhar Bhat

    beautiful one jii 🙂 🙂 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading