ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂರ್ತಿ, ರವಿ ಜುಗಲಬಂದಿ

ಎಂ ಎಸ್ ಮೂರ್ತಿ ಆಷಾಡದಲ್ಲಿ  ಇನ್ನೂ ಕಾಲಿಡದ ಮಳೆಯ ಬಗ್ಗೆ ಬರೆದಿದ್ದರು. ಅದಕ್ಕೆ ಕ್ಯಾಮರೂನ್ ನಿಂದ ರವಿ ಪ್ರತಿಕ್ರಿಯಿಸಿದ್ದು ಹೀಗೆ

ರವಿ ಮೂರ್ನಾಡು, ಕ್ಯಾಮರೂನ್

ಅವನ ನಗುವಿನ ಉರಿ ಇವಳ ಪ್ರಾಣದ ಪರಿ ಗರ್ಭದಲಿ ಚಿಗುರೆಲೆಗೆ ಹಾಲ ಧ್ವನಿ ! ಮೋಡಗಳ ಗುದ್ದುತ್ತಿದೆ ಮಳೆ ಬಿತ್ತು ಹುಡುಕುತ್ತೇನೆ ಇಳೆಯ ಸುಕ್ಕು ಗೆರೆಗೆ ಬೆವರ ಹನಿ ! ಬಾಯಾರಿ ತುಟಿ ಹರಿದು ಬೆವರೇರಿ ಗಬ್ಬುದ್ದು ನಾಲೆಯಲ್ಲಿ ನೀರಿಲ್ಲ ಗಂಟಲವರೆಗೆ ! ಈ ಖಾಲಿ ಕಮ್ಮಟದಿ ಹನಿದು ರಕುತಕೆ ಜೀವ ಸಿಕ್ಕಿಲ್ಲ ಸವರಿ ರುಚಿ ತುಟಿಯವರೆಗೆ ! ಬಾನಾಡಿ ಹೆಜ್ಜೆಗೆ ನೀನು ಬೀಡಾಡಿ ಜಗತ್ತಿನ ಅವನಿ ಮಡಿಲಲ್ಲಿ ಮಕ್ಕಳ ಕತೆಗೆ ತಾಯಿ ನಾನು ! ಸುರಿಯಲಿದೋ ತಾಪಕೆ ವೀರ್ಯ ಬಿರುಕಿಟ್ಟು ಅಳುತ್ತಿದೆ ಹನಿ ಉಪ್ಪು ನೀರಿನ ಕಣ್ಣಿಗೆ ನಿನ್ನದೇ ಕನಸು ! ಬಿರುಸು ಮೋಡಕೆ ತೆರೆದು ಮೈಯೆದ್ದು ಮೊರೆಯುತಿದೆ ಗುಡುಗು ಮಿಂಚಿಗೆ ಮರೆತು ಸುಳಿದ ಮನಸು !  ]]>

‍ಲೇಖಕರು G

26 June, 2012

3 Comments

  1. Paresh Saraf

    ಚಿತ್ರದೊಂದಿಗೆ ಹಾಗೆಯೇ ನವಿರಾದ ಭಾವಗಳನ್ನು ಹೆಣೆದಿದ್ದೀರ.. ಬಹಳ ಚೆನ್ನಾಗಿದೆ ರವಿಯಣ್ಣ 🙂

  2. Mamata

    really very nice..:-)

  3. Pramod Pammi

    ನಿಮಗೆ ನೀವೇ ಸರಿಸಾಟಿ ರವಿಯಣ್ಣ., ನಿಮ್ಮ ಕಾವ್ಯ ಪ್ರೌಢಿಮೆ ನಿಜಕ್ಕೂ ಖುಷಿ ನೀಡುತ್ತದೆ., ಪ್ರತಿ ಸಾಲುಗಳು ಸೂಕ್ಷ್ಮ ಭಾವಗಳು ಹವಿ ನಿಲ್ಲುತ್ತವೆ.. ಅಭಿನಂದನೆಗಳು., ಶುಭವಾಗಲಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading