ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಸುರೆ ಕ್ಯಾಕರಿಸಿ ಉಗಿದ ಹಾಗೆ ಹೊಸ ವರ್ಷ..!!

 

 

 

ದತ್ತು ಕುಲಕರ್ಣಿ

 

 

 

ಬೆಳಗಾಗೆದ್ದು ಹಲ್ಲುಜ್ಜಿ
ಸಿಕ್ಕಿಕೊಂಡ ಮುಸುರೆಯನ್ನು ಕ್ಯಾಕರಿಸಿ ಉಗಿದ ಹಾಗೆ
ಹೊಸ ವರ್ಷಾಚರಣೆ

ಹಾಲು ಪೇಪರಿನವರ ಕೂಗಾಟಕ್ಕೆ ಬೈದು
ಮತ್ತೆ ಅವರ ಪೂಸಿ ಹೊಡೆದ ಹಾಗೆ
ಹೊಸ ವರ್ಷಾಚರಣೆ

ನಿನ್ನೆ ಉಳದ ಅನ್ನಕ್ಕೆ
ಒಗ್ಗರಣೆ ಹಾಕಿ ನಿಂಬೆ ಹಿಂಡಿದ ಹಾಗೆ
ಹೊಸ ವರ್ಷಾಚರಣೆ

ನಡು ಮಧ್ಯಾಹ್ನದ ಏಕಾಂತದಲಿ
ಬಂದ ಮೊಬೈಲ್ ಮೆಸ್ಸಜುಗಳನ್ನೆಲ್ಲ ಓದಿ ಉತ್ತರಿಸಿ ಅಳಿಸಿ
ಒಂದು ಜೋಂಪು ನಿದ್ದೆ ಹತ್ತಿಸಿಕೊಂಡ ಹಾಗೆ
ಹೊಸ ವರ್ಷಾಚರಣೆ

ಹಾಗೆ ಸಾಯಂಕಾಲ ಹೊರ ಹೋಗಿ ಹಳೆ ಮೊಬೈಲಿಗೆ
ಹೊಸ ಕವರು ಹಾಕಿ, ಸ್ಕ್ರೀನ್ ಸೇವರ್ ಅಂಟಿಸಿದ ಹಾಗೆ
ಹೊಸ ವರ್ಷಾಚರಣೆ

ರಾತ್ರಿ ಮರುದಿವಸದ ಕೆಲಸಕ್ಕೆ ತಯಾರಾಗುತ್ತ
ನಾಳೆ ಇಸವಿಯನ್ನು ತಪ್ಪಾಗಿ ಬರೆಯಬಾರದು ಅಂದುಕೊಳ್ಳುತ್ತ ಮಲಗಿದ ಹಾಗೆ
ಹೊಸ ವರ್ಷಾಚರಣೆ

‍ಲೇಖಕರು avadhi

22 January, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading