ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮುಳ್ಳು ಹೊಕ್ಕ ಪಾದಕ್ಕೆ ರಕ್ತ ಒರೆಸಲು ಬೇಲಿ ಎಲೆ…’ – ಉಮಾರಾವ್ ಕವಿತೆ

ಹಾದಿ ತಪ್ಪಿ

– ಉಮಾ ರಾವ್


ಹಾದಿ ತಪ್ಪಿದಾಗ
ಎಲ್ಲೆಲ್ಲೂ ಸಂಜೆ ಮಬ್ಬು
ಕೈಯ್ಯಲ್ಲಿ ದೀವಿಗೆಯಿಲ್ಲ
ಕತ್ತಲು ಕತ್ತಲು
ಧುತ್ತನೆ ಎದುರಾಗುವ ಬಂಡೆ
ಪಕ್ಕದಲ್ಲೇ ಮೈತಳೆದು ಹೆದರಿಸುವ
ಬೃಹತ್ ವೃಕ್ಷ
ಕತ್ತು ಹಿಸುಕಲು ಬಾಗುವ
ದೀರ್ಘಬಾಹು ಬಿಳಲು
ಎಲ್ಲೋ ಒಂದು ಜೀರುದುಂಬಿ
ಒಂದು ವಿರಹಿ ಕೋಗಿಲೆ
ಅರಸುತ್ತಾ ಹೋದರೆ
ಸಿಕ್ಕಿದ್ದು ಹಾಳು ದೇಗುಲ
ಬಾವುಲಿಗಳ ಕೆಳಗೆ
ಗರ್ಭಗುಡಿಯ ಮೌನದಲ್ಲಿ
ಧ್ಯಾನಿಸುವ ಶಿವಪಾರ್ವತಿಗೆ
ಬಿಲ್ವದ ಹಂಗಿಲ್ಲ
ದೀಪಸ್ತಂಭದ ಹಣತೆಯಲ್ಲಿ
ಬರಿ ಎಣ್ಣೆ ಮಣುಕು
ಬತ್ತಿ ಕಾಗೆ ಪಾಲು
ಮುಗಿಲಲ್ಲಿ ನೇತುಬಿಟ್ಟ
ತೂಗುದೀಪ ಅರ್ಧಚಂದ್ರ
ಎಲ್ಲೆಲ್ಲೂ ಚೆಲ್ಲಿದ
ದೇವಕಣಿಗಲೆ ಪರಿಮಳ
ಕಾಡ ಬೆಳದಿಂಗಳು
ಮುಳ್ಳು ಹೊಕ್ಕ ಪಾದಕ್ಕೆ
ರಕ್ತ ಒರೆಸಲು ಬೇಲಿ ಎಲೆ
ಬೀಸಿ ಬರುವ ತಣ್ಣನೆಯ ಗಾಳಿಗೆ
ಎದೆ ನಡುಕ
ದೂರದಿಂದ
ದೇವದಾಸಿಯ ಗೆಜ್ಜೆಯುಲಿಯೊಡನೆ ಹರಿದುಬಂದ
ಎಳೆಕಂದನ ಆಕ್ರಂದನ
 
 

‍ಲೇಖಕರು G

16 January, 2015

6 Comments

  1. ಅಕ್ಕಿಮಂಗಲ ಮಂಜುನಾಥ

    ಪದ್ಯ ಚೆನ್ನಾಗಿದೆ. ಓದುತ್ತಿದ್ದಂತೆ ಆಲನ ಹಳ್ಳಿಯವರ ಕಾಡು ಕಾದಂಬರಿಯಲ್ಲಿ ಕಿಟ್ಟಿ ಮತ್ತು ಕಮಲಮ್ಮನವರು ಕಾಡು ಹೊಕ್ಕುವ ದೃಶ್ಯಗಳು ನೆನಪಾದವು.

  2. vidyashankar

    surprise ending! haunting poem!

  3. sindhu

    ishta aytu madam.. a haunting poem.

  4. mmshaik

    uttama kavana madam..

  5. ಶೇಷಗಿರಿ ಜೋಡಿದಾರ್

    ಮುಗಿಲಲ್ಲಿ ನೇತುಬಿಟ್ಟ
    ತೂಗುದೀಪ ಅರ್ಧಚಂದ್ರ…. nice image…. delighted….good one… UmaRao..

  6. ramaswamynd62@gmail.com

    Thought provoking

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading