ಮುಂಬೈನಿಂದ ರೇಖಾ: ಇವತ್ತು ಶೀತ, ೧೦೨ ಡಿಗ್ರಿ ಜ್ವರ

ಮಲೆಗಳಲ್ಲಿ ಮದುಮಗಳು – ಶನಿವಾರ ೧೧ ಮೇ ೨೦೧೩
ಕಲಾಗ್ರಾಮ ಮಲ್ಲತಹಳ್ಳಿ ಬೆ೦ಗಳೂರು,

ಚಿತ್ರ: ಮುರಳಿ ಮೋಹನ ಕಾಟಿ

ಬ೦ದಿದ್ದಕ್ಕೆ, ನೆನೆದಿದ್ದಕ್ಕೆ ಎಲ್ಲಾವುದಕ್ಕೆ ಥ್ಯಾ೦ಕ್ಸ್
ಆದರೆ ನಾನು ನೋಡಿದ್ದು ಮಳೆಗಳಲ್ಲಿ ಮದುಮಗಳು
ಬಿಡದೆ ಮಳೆ, ಪ್ರೇಕ್ಷಕರ ತಹತಹ, ಪಾತ್ರಧಾರಿಗಳ ಕಳವಳ
ಮಲೆನಾಡನ್ನ ನಮ್ಮೆದುರಿಗೆ, ಹತ್ತಿರ ಕಣ್ ಮು೦ದೆ ಅದ್ಭುತವಾಗಿ ಅಭಿನಯ ರೂಪದಲ್ಲಿ ತ೦ದಿತ್ತ ಪ್ರತಿಯೋರ್ವರು ಅಭಿನ೦ದನೆಗಳಿಗೆ ಪಾತ್ರರು.
ನನ್ನಜ್ಜಿ ಹೆಸ್ರಲ್ಲೆ ಇರುವ ಅ೦ತಕ್ಕ ಶೆಟ್ಟಿ ಎ೦ಬ ಪಾತ್ರ, ಡೇನ ನಾ ಡೇನ ನಾ ಡೇನ ನಾ….. ಆಲಾಪ ಅಜ್ಜಿಯಾ ತೊಡೆಯಲ್ಲಿ (ಮಲಗಿ) ಕೇಳಿದ ಆ ಪಾಡ್ದನದ ನೆನಪು೦ಟು ಮಾಡಿಸಿತು.
ರಾಷ್ಟ್ರ ಕವಿ ಕುವೆ೦ಪು ಅವರ ಪುಸ್ತಕದ ಪ್ರತಿಯೊ೦ದು ಪಾತ್ರವು ಜೀವ ತಳೆದು ನಾನು ಇರುವೆನು, ಆದರೆ ಬರಿ ಪುಸ್ತಕದಲ್ಲಿ ಮಾತ್ರವಲ್ಲಾ ಎ೦ದು ಎತ್ತಿ ತೋರಿಸುತಿತ್ತು.
ಇದನ್ನ ನಮ್ಮ ನಿಮ್ಮ ಮು೦ದೆ ನಾಟಕ ರೂಪದಲ್ಲಿ ತರಲು ಪಡೆದ ಪ್ರತಿಯೋರ್ವರ ಶ್ರಮ ಶ್ಲಾಘನೀಯ.
ಮಳೆರಾಯ ನಾನು ಹೋಗಲೊಲ್ಲೆ ಎನಲು ನಾಟಕ ಆಗುವುದೊ ಇಲ್ಲವೋ ಎ೦ದು ಯೋಚಿಸುತ್ತ ಇದ್ದೆ. ರಾತ್ರಿ ೮:೩೦ಕ್ಕೆ ಆರ೦ಭವಾಗ ಬೇಕಾಗಿದ್ದ ನಾಟಕ ೧೧:೧೫ ಗ೦ಟೆ ಆದರೂ ಆರ೦ಭವಾಗದೆ ಇದ್ದಾಗ…… ನಾವ೦ತು ಇವತ್ತು ನಾಟಕ ಮಾಡೆ ಮಾಡ್ತಿವಿ ಅ೦ತ ತ೦ಡದವರು ಹೇಳಿದಾಗ ನಿಜವಾಗಲು ಇರುವ ಅರ್ಪಣಾ ಭಾವ, ಕಲೆಯ ಬಗೆಗಿನ ಬದ್ದತೆಯನ್ನು ಮೆಚ್ಚಿದೆ.
ಜಾರುವ ಮಣ್ಣಿನಲ್ಲಿ ನಡೆದಾಡಲು ಆಗದೆ, ಚಪ್ಪಲಿ ಕಿತ್ತುಹೋಗಿ ಬರಿಗಾಲಿನಲ್ಲೆ ಕೆಸರಿನ ಮಣ್ಣಿನಲ್ಲಿ ಒಂದು ವೇದಿಕೆಯಿಂದ ಇನ್ನೊಂದು ವೇದಿಕೆಗೆ ಅಡ್ಡಾಡಿ,ಬೆಳಿಗ್ಗೆ ಏರ್ ಪೋರ್ಟ್ ಗೆ ಬರಿಗಾಲಿನಲ್ಲಿ ಹೋಗಬೇಕಾ? ಎಂಬ ಪರಿವೆಯು ಇಲ್ಲದೆ, ಒ೦ದೊಂದೇ ಒಂದೊಂದೇ ಹೆಜ್ಜೆ ಮು೦ದೆ ಇಡಲು ಯೋಚಿಸುತಿದ್ದರೆ, ಅತ್ತ ನಾಟಕ ತಂಡದ ಪ್ರತಿಯೊಬ್ಬ ನಟರು ಆ ಜಾರು ಮಣ್ಣಿನ ಮೇಲೆ ಮಳೆರಾಯನಿಗೆ ಸವಾಲು ಕೊಟ್ಟು ಅಭಿನಯ ಮಾಡಿದ ಪ್ರತಿಯೊರ್ವರು ಗ್ರೇಟ್. ಬೆಳಿಗ್ಗೆ ಏರ್ ಪೋರ್ಟ್ ಗೆ ಹೋಗಲು ಚಪ್ಪಲಿ ಕೊಟ್ಟ ಶ್ರಾವಂತಿಗೆ ಒಂದು ಧನ್ಯವಾದಗಳು.
ಸ೦ಗೀತ ತ೦ಡ ಪ್ಲಾಸ್ಟಿಕ್  ಕವರ್ ಹಾಕಿ , ಮಳೆಯಿ೦ದ ವಾದ್ಯವನ್ನ ರಕ್ಷಣೆ ಮಾಡ್ಕೊ೦ಡು ಎಲ್ಲು ಧ್ವನಿ, ಸ೦ಗೀತ, ತಾಳ ತಪ್ಪಿ ಹೋಗದ೦ತೆ ನಿರ್ವಹಿಸಿದ ಪ್ರತಿಯೊಬ್ಬರು ಗ್ರೇಟ್.
ಗುತ್ತಿ – ಅಲ್ಲಾ …..ನಾಯಿ ಗುತ್ತಿ ಹಾಗು ತಿಮ್ಮಿ, ಐತಾ, ಪೀಂಚಲು, ಸುಬ್ಬಣ್ಣ ಹೆಗ್ಡೆ, ಕುಂಟ ವೆಂಕಟ ನಾಯ್ಕ, ಚಿನ್ನಮ್ಮ, ದೇಯಿ, ಅ೦ತಕ್ಕ, ಪಾದ್ರಿ, ದೇವಯ್ಯ, ಮುಕುಂದಯ್ಯ, ಚೀಂಕ್ರ, ಜೋಗಪ್ಪಂದಿರು, ನಾಗತ್ತೆ, ನಾಗಕ್ಕ, ವಿವೇಕಾನಂದ, ಎಲ್ಲಕ್ಕಿಂತ ಹುಲಿಯ ನಾಯಿ, ಎಲ್ಲರು ಆ ರಾತ್ರಿ ನನ್ನನ್ನ ಅವರ ಲೋಕಕ್ಕೆ ಕರೆದುಕೊ೦ಡು ಹೋದರು.
ನಾನು ಹುಟ್ಟಿ ಬೆಳೆದಿದ್ದು ಮುಂಬೈ ನಲ್ಲಿ… ನನ್ನ ತ೦ದೆಯವರು ನನಗೆ ಚಿಕ್ಕ೦ದಿನಲ್ಲಿ ಯಕ್ಷಗಾನ ತೋರಿಸುತಿದ್ದರು ಆಗ ರಾತ್ರಿ ಇಡೀ ಜಾಗರಣೆ ಮಾಡಿ ನೋಡುವಾಗ ಯಾವ ಸ೦ತೋಷ ಅನಿಸುತಿತ್ತೊ ಅದೇ ಅನುಭವ ಆಯಿತು.
ನೆನ್ನೆ ಮಳೆಯಲ್ಲಿ ನೆನೆದು ಇವತ್ತು ಶೀತ, ೧೦೨ ಡಿಗ್ರಿ ಜ್ವರ , ಆದ್ರು ನೆನಪಿನ ಅ೦ಗಳದಲ್ಲಿ ಯಾವತ್ತು ಮಾಸದೆ ಇರುವ೦ತಹ ಅನುಭವ ಮಲೆಗಳಲ್ಲಿ ಮದುಮಗಳು (ಮಳೆಗಳಲ್ಲಿ ಮದುಮಗಳು).
 
ರೇಖ
ಮುಂಬೈ
 
 

‍ಲೇಖಕರು G

May 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: