ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನ ಕಾಂಡ! 

ರಾಜೇಂದ್ರ ಪ್ರಸಾದ್ 

ಈ ಮೀನಿಂದಲೇ ಪರಾಶರ ಪರಾಭವಗೊಂಡು
ಪರಾಗಸ್ಪರ್ಶವಾದ ಬಳಿಕ ಪರಿಣಯ
ಪರಿಸಮಾಪ್ತಿಗೊಳಿಸಿಕೊಂಡದ್ದು.

ಈ ಮೀನಿಂದಲೇ ಶಾಕುಂತಲೆ ವಿರಹದುರಿಗೆ
ಸಿಕ್ಕು ಕಾಡಿನಲ್ಲಿ ಕಾಲಯಾಪನೆಯ ಮಾಡಿ
ಎಂದೂ ಮರೆಯದ ಉಂಗುರ ಉಪಾಖ್ಯಾನಕ್ಕೆ ಕಾರಣವಾಗಿದ್ದು.

ಈ ಮೀನಿಂದಲೇ ಯೇಸುವು ಹಸಿದ ಜನರಿಗೆ
ಅಕ್ಷಯವೆನಿವಷ್ಟು ಅನ್ನವುಣಿಸುತ್ತಾ ರೊಟ್ಟಿ ಮುರಿದು
ಸದಾ ಶತ್ರು ಪ್ರೀತಿಸುವ ಪಾಠ ಹೇಳಿದ್ದು.

ಅರೆ! ಈ ಮೀನೇ ಆದಿಗೆ ಮೊದಲಾಗಿ ಅಂತ್ಯಕ್ಕೆ ಮನುವಾಗಿ
ಭೂಚರಗಳ ನಾವೆಯಾಗಿ ಒಡಲಲ್ಲಿ ಹೊತ್ತು ಸಲಹಿದ್ದು
ಮೀನೆಂದರೆ ಬರೀ ಮೀನೇ ಎಂದು ಎಣಿಸದಿರು
ಮೀನು ಮನುಕುಲದ ಶಕ್ತಿಮದ್ದು.

‍ಲೇಖಕರು avadhi

26 October, 2017

1 Comment

  1. kalkesh goravar

    super sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading