ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀನು ಅಂಗಡಿಯಲ್ಲಿ..

 ವಿ ಎಸ್‌  ಶಾನಭಾಗ್‌

 

ಎಲ್ಲಿದೆಯೇ ಮೀನು ಮೀನಾ

ಇಲ್ಲೆ ಇದೆಯಮ್ಮ

ಬರ್ಫು, ಪೆಟ್ಟಿಗೆ ತಕ್ಕಡಿ

ಇಲ್ಲೆ ಇವೆಯಮ್ಮ

 

ಏನನ್ನೋ ಮರೆತಂತಿದೆ

ಮರೆಯುವುದು ಹೇಗೆ

ಏನನ್ನೋ ನೆನೆದಂತಿದೆ

ಶಿಗಡಿ ಮೀನೇ ಹಾಗೆ

ಬಿಸಿ ನೀರಿದೆಯೇ ಮೀನಾ

ಶಿಗಡಿ ಮೀನಿನ ಅಡಿಗೆಗೆ

ಮೀನು ಬೇಕಾದಷ್ಟಿದೆಯಮ್ಮ

(ಕಣ್ಣಲ್ಲೂ ಜತೆಗೆ)

ಮಗುವನು ಹಿಡಿಯೇ ಹೀಗೆ

ಕಪ್ಪಿಡುವನು ಹಣೆಗೆ

ಮೈ ಬಿಸಿಯಾಗಿದೆಯಲ್ಲೆ

ವ್ಯಾಪಾರದ ಸಮಯಕ್ಕೆ.

 

ಮೀನು  ಕಡಿಯುವ  ಶಬ್ದಕ್ಕೆ

ಮಗು ಅಳುತಿದೆ

ಅಲ್ಲಾಡುವ  ಅವಳ ಮೈ

ಹಾಲು ಸಿಗದ ಹೆದರಿಕೆಗೆ

 

ಕಿಟಕಿಯ ಒಳಗೂ ಇರುವುದು

ಮೀನು, ಒಣಗಲಮ್ಮ ಹೋಗು

ಇಲ್ಲಿಂದಲೇ ಕೈ ತೋರುವೆ

ನಲ್ಲಿಂದಲೆ ಪರದೆ ಸರಿಸು

 

ಓಣಿಯುದ್ದಕೂ ಹಬ್ಬಿತು

ಹೋಗಿ ಬರುವವರ ಮೂಗು

ಎಲ್ಲಿದ್ದೀಯ ಮೀನಾ

ಎಲ್ಲಿದೆಯೆ?

 

ಮೀನು ಬೇಯುವ ಹಬೆಯಲಿ

ಹೊಟ್ಟೆಯಲಿ ಗಾಲಿ ಉರುಳು

ಇಲ್ಲೇ ಇದ್ದೇನಮ್ಮ

ಇಲ್ಲೇ ಇದ್ದೇನೆ

 

ಕಿಟಕಿಯ ಮುಚ್ಚಿಕೋ ಮೀನಾ

ಮೀನು ಬೇಯುವವರೆಗೆ

ಕಿಟಕಿ ಮುಚ್ಚಿದೆನಮ್ಮ

ಕಣ್ಣು ಬೀಳದ ಹಾಗೆ.

(ಕೆ ಎಸ್‌ ನ ರವರ  “ರೈಲು ನಿಲ್ದಾಣದಲ್ಲಿ” ಕ್ಷಮೆ ಕೋರಿ)

‍ಲೇಖಕರು nalike

21 May, 2020

1 Comment

  1. T S SHRAVANA KUMARI

    ಕೆಲವು ಭಾವಗಳು ಸರಿಯಾಗಿ ಹೊಂದುವುದಿಲ್ಲ ಉದಾ. ಮಗುವನು ಹಿಡಿಯೇ ಹೀಗೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading