ಮಿಡ್ಲ್ ಕ್ಲಾಸ್..


ಹಿಂದಿ ಮೂಲ: ಪವನ್ ಮಾಲು


ಸಂಗಮೇಶ ಸಜ್ಜನ

ಇವನೇನು ನಾಯಕನಲ್ಲ
ಹಾಗಂತ ಖಳನಾಯಕನೂ ಅಲ್ಲ

ಜೀವನದ ಏರಿಳಿತಗಳಲ್ಲಿ
ಒಮ್ಮೊಮ್ಮೆ ನಡುವೆಯೇ ನಿಂತು ಬಿಡುತ್ತಾನೆ

ಕನಸನ್ನು ಸಹ ಪೂರ್ತಿ ಮಾಡಲಾಗುವುದಿಲ್ಲ
ಹಾಗಂತ ಅವನ್ನು ಬಿಟ್ಟು ದೂರ ಇರಲಾರನು

ಆದರೆ ತಕ್ಕಡಿಯ ಮುಳ್ಳಿನಂತೆ
ಬದುಕಿನ ಸಮತೋಲನ ಇಲ್ಲೇ ಸರಿಪಡಿಸುತ್ತಾನೆ

ಪ್ರೀತಿಯಿಂದ ಇವನು
ಮಿಡ್ಲ್ ಕ್ಲಾಸ್
ಎನಿಸಿಕೊಳ್ಳುತ್ತಾನೆ.

ಇವನಿಗೆ ಬೇಡಲು ಸಹ ಬರುವುದಿಲ್ಲ
ಮತ್ತೆ ಇವನಿಗೆ ಕಸಿದುಕೊಳ್ಳಲು ಸಹ ಬರುವುದಿಲ್ಲ

ಆದರೆ ಇವನಿಗೆ ತನ್ನ ಇಚ್ಛೆಗಳನ್ನು
ಪ್ರೀತಿಯಿಂದ ಮೋಹಿಸಲು ಬರುತ್ತದೆ

ಕೆಲವೊಮ್ಮೆ ಶ್ರೀಮಂತರ ಸಾರಥಿಯಾಗುತ್ತಾನೆ
ಇನ್ನೂ ಕೆಲವೊಮ್ಮೆ ಬಡವರ ಸಾಥಿಯಾಗುತ್ತಾನೆ

ಆದರೆ ತನ್ನ ಸಹಾಯಕ್ಕಾಗಿ
ಯಾರಿಗೂ ಏನನ್ನು ಕೇಳುವುದಿಲ್ಲ

ಸ್ವಾಭಿಮಾನಿಯಿವನು
ಮಿಡ್ಲ್ ಕ್ಲಾಸ್
ಎನಿಸಿಕೊಳ್ಳುತ್ತಾನೆ

ಅವಶ್ಯಕತೆ ಇವನಲ್ಲೂ ಇವೆ
ಆದರೆ ಕೇಳುವವರು ಯಾರೂ ಇಲ್ಲ

ಪ್ರಶ್ನೆಗಳು ಇವನಲ್ಲೂ ಇವೆ
ಆದರೆ ಉತ್ತರಿಸುವವರು ಯಾರೂ ಇಲ್ಲ

ಕಷ್ಟದಲ್ಲಿ ಇವನೂ ಇದ್ದಾನೆ
ಆದರೆ ಪ್ರಸಿದ್ಧಿ ಪಡೆದಿಲ್ಲವಾದುದ್ದರಿಂದ

ಬಹುಶಃ ಅದಕ್ಕಾಗಿಯೇ,

ಸಮಸ್ಯೆಯಲ್ಲಿ ಇವನೂ ಬಿದ್ದಿದ್ದಾನೆ
ಆದರೆ ಸುದ್ಧಿಯಲ್ಲಿ ಬೀಳಲೇ ಇಲ್ಲ

ರಶ್ ನಲ್ಲಿ ಧಕ್ಕೆ ತಿನ್ನುತ್ತಿರುತ್ತಾನೆ
ಗಳಿಸುವವರ ಅಣುಕು ಕೇಳಿಸಿಕೊಳ್ಳುತ್ತಿರುತ್ತಾನೆ

ದುಃಖದಿಂದ ಬದುಕುತ್ತಾನೆ
ಕಹಿ ಸತ್ಯಗಳನ್ನು ಹೀರಿಕೊಳ್ಳುತ್ತಾನೆ
ಸ್ವಲ್ಪ ಹಣೆಬರಹವನ್ನು ಶಪಿಸಿಕೊಳ್ಳುತ್ತಾನೆ
ಒಳಗಿಂದೊಳಗೆ ಅತ್ತು ಬಿಡುತ್ತಾನೆ

ದೋಣಿಯಂತೆ ಸಾಗುತ್ತಿರುವ ಜೀವನವನ್ನು
ಎಂದಿಗೂ ಮತ್ತೆ ಹಿಂದೆ ಕೊಂಡೊಯ್ಯುವುದಿಲ್ಲ

ಆದರೆ ಪರಿಸ್ಥಿತಿಯ ಮುಖವಾಡದಿಂದ
ನಗುತ್ತಲೇ ಎಲ್ಲವನ್ನು ಮರೆತು ಬಿಡುತ್ತಾನೆ

ಅರ್ಥೈಸಿಕೊಳ್ಳುವಿಕೆ ನರ ನಾಡಿಯಲ್ಲೂ ತುಂಬಿದೆ
ಬುದ್ಧಿವಂತಿಕೆಯಿಂದಲೇ ಮನಸ್ಸನ್ನು ಹರಿಬಿಡುತ್ತಾನೆ

ಬುದ್ಧಿವಂತನಿದ್ದಾನೆ
ಮಿಡ್ಲ್ ಕ್ಲಾಸ್
ಎನಿಸಿಕೊಳ್ಳುತ್ತಾನೆ

ಅರ್ಥೈಸಿಕೊಳ್ಳುವಂತವನಿದ್ದಾನೆ
ಮಿಡ್ಲ್ ಕ್ಲಾಸ್
ಎನಿಸಿಕೊಳ್ಳುತ್ತಾನೆ.

‍ಲೇಖಕರು nalike

August 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: