ಮಾಲಾ ಅಕ್ಕಿಶೆಟ್ಟಿ ಓದಿದ ‘ದೇವರ ಹೊಲ’

ಮಾಲಾ ಮ ಅಕ್ಕಿಶೆಟ್ಟಿ

“ದೇವರ ಹೊಲ” ಇದು ಮಂಜಯ್ಯ ದೇವರಮನಿ ಅವರ ಎರಡನೇ ಕಥಾ ಸಂಕಲನ. ಇವರ ಕೆಲವು ಕಥೆಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಈ ಮೊದಲು ಓದಿದ್ದೆ. ಅಪ್ಪಟ ಗ್ರಾಮೀಣ ಜೀವನವನ್ನು ಕಣ್ಣ ಮುಂದೆ ಚಿತ್ರಿಸುವ ಸಾಮರ್ಥ್ಯ ಇದರಲ್ಲಿದೆ.

ಈ ಕಥಾ ಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಬಹಳಷ್ಟು ಕಥೆಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ. ಈಗ ರಾಣೇಬೆನ್ನೂರಿನಲ್ಲಿ ನೆಲೆಸಿರುವ ಇವರು ಕಥೆಗಳಲ್ಲಿ ಬಳಸುವ ಗ್ರಾಮೀಣ ಭಾಷೆ, ಜೀವನ, ಸಂಪ್ರದಾಯ, ಹಬ್ಬಗಳು ಇತ್ಯಾದಿ ಎಷ್ಟು ಚೆನ್ನಾಗಿ ವರ್ಣಿಸುತ್ತಾರೆಂದರೆ ಬಹಳಷ್ಟು ವರ್ಷ ಗ್ರಾಮದಲ್ಲಿಯೇ ಕಳೆದಿರಬೇಕು ಇಲ್ಲಾದರೆ ಈ ಕಥಾಸಂಕಲನದುದ್ದಕ್ಕೂ ಬರುವ ಗ್ರಾಮ್ಯ ಜೀವನ ಚಿತ್ರಣ ಅಸಾಧ್ಯ.

ಕಥೆಗಳು ಸರಳ ಮತ್ತು ಓದಿನ ರುಚಿಯನ್ನು ಹೆಚ್ಚಿಸುತ್ತವೆ. ಮತ್ತೊಂದು ವಿಶೇಷ ಏನಂದ್ರೆ ಬಹಳಷ್ಟು ಕಥೆಗಳು ಸುಖಾಂತ್ಯ ಕಂಡು ಓದುಗರನ್ನು ಆತಂಕದಿಂದ ಆಗುವ ವಿಷಾದದಿಂದ ಮುಕ್ತಗೊಳಿಸುತ್ತವೆ. ಓದಿದ ನಂತರ ನಿರಂಬಳ ಭಾವ.

“ದೇವರ ಹೊಲ”, “ಲೆಕ್ಕ ಪುಸ್ತಕ” ಮತ್ತು “ಕೈವಲ್ಲಿ” ನನ್ನಿಷ್ಟದ ಕಥೆಗಳು. “ದೇವರ ಹೊಲ” ಕಥೆಯಲ್ಲಿ ಪಾತ್ರ ಅನುಭವಿಸುವ ಶಿಕ್ಷೆ, ಕಲ್ಪನೆಯೋ ಅಥವಾ ದೇವರಿಂದ ಮಾಡಲ್ಪಟ್ಟಿದ್ದೋ ಅಥವಾ ಕಥೆಯ ಪಾತ್ರವೇ ಶಿಕ್ಷೆ ನೀಡುತ್ತದೆಯಾ ಎನ್ನುವ ನಿರ್ಣಯವನ್ನು ಓದುವನಿಗೆ ಬಿಡಲಾಗಿದೆ.ಸತ್ಯಕ್ಕೆ ಗೆಲುವು ಎಂದೆಂದೂ ನಿಜ. “ಲೆಕ್ಕಪುಸ್ತಕ” ಮತ್ತು “ಕೈವಲ್ಲಿ” ಕಥೆಗಳು ಪರೋಪಕಾರ ಎಂಬ ಗುಣದಿಂದ ಓದುಗನನ್ನು ತುಂಬಾ ಆಕರ್ಷಿಸುತ್ತವೆ. ದಾನ ಎನ್ನುವುದು ತಮ್ಮಲ್ಲಿ ಬಹಳಷ್ಟು ಇದ್ದಾಗ ಅಷ್ಟೇ ಕೊಡುವುದಲ್ಲ. ತಮ್ಮಲ್ಲಿ ಕಡಿಮೆ ಇದ್ದು, ತಮಗೆನೇ ಇಲ್ಲದಾಗಿಸಿಕೊಂಡು ಕೊಡುವುದು ಮಹಾದಾನ ಎನ್ನುವುದನ್ನು ಎರಡು ಕಥೆಗಳು ಬಹಳ ಕಾರ್ಮಿಕವಾಗಿ ತಿಳಿಯಪಡಿಸುತ್ತವೆ. ಉದಾರತೆ ಬಡವರಲ್ಲಿಯೇ ಹೆಚ್ಚು.

“ಅಗಸಿ ಹೆಣ” ಯಾವುದು ಬೇಡ ಎನ್ನುತ್ತೇವೆಯೋ ಅದನ್ನೇ ಹಠಕ್ಕೆ ಬಿದ್ದು ಮಾಡಿದಾಗ ಸಿಗುವ ಫಲವಾದರೆ, “ಹುಳಿಮಾವು” ನಲ್ಲಿಯದು ನಸೀಬಕ್ಕೆ ಸಿಲುಕಿದ ಪಾತ್ರ. ಮಾಡಬೇಕಾದ ಕರ್ತವ್ಯ ಮಾಡಿದರೂ ಊರ ಜನರ ವಿಲಕ್ಷಣ ಮಾತಿಗೆ ಆಹಾರವಾಗುವುದು ದೌರ್ಭಾಗ್ಯ. ವ್ಯಕ್ತಿಯನ್ನು ಮಕ್ಕಳೇ ಸೇಡಿಗೆ ಬಿದ್ದು ಕೊಲೆ ಮಾಡಿರಬಹುದು ಎಂದು ಅಂದುಕೊಳ್ಳುವಾಗ ಕಥೆಗಾರ ಬೇರೆಯದೇ ಕಾರಣ ನೀಡಿ ಆಶ್ಚರ್ಯವನ್ನುಂಟು ಮಾಡುತ್ತಾರೆ.ಅರೆಬೆಂದ ಹೆಣವನ್ನು ಬೈಯುವುದು ಮತ್ತು ಮೂಳೆಗಳಿಂದ ಚಿನ್ನಿದಾಂಡು ಆಡುವುದು ಒಂದು ಕ್ಷಣ ಗಾಬರಿಗೊಳಿಸಿದವು…ಮೈ ಜುಮ್ ಎಂದಿತು.ಸಾವನ್ನು ವಿಲಕ್ಷಣವಾಗಿ ಮಕ್ಕಳು ಸಂಭ್ರಮಿಸುತ್ತಾರೆನ್ನುವದನ್ನು ಅರಗಿಸಿಕೊಳ್ಳಲಾಗಲಿಲ್ಲ.

“ದೇವರ ಕೂಗು” ಕಥೆಯಲ್ಲಿ ದುಡಿದು ತಿನ್ನುತ್ತೇವೆ ಎನ್ನುವವರಿಗೆ ಸಹಾಯ ಮಾಡಬೇಕೆನ್ನುವ ಸೂಕ್ಷ್ಮವನ್ನು ಸಾರುತ್ತದೆ.

ನಾಯಿ ಬುಡ್ಡನ ಪವಾಡ, ಕಲ್ಲೇಶಿ ಪ್ರೇಮ ಪುರಾಣ, ಕಾಡ್ಕೋಣ ಭೂತಲಿಂಗ, ಮುತ್ತಿನ ರಾಶಿ, ಕಪಲಿ ಬಾವಿ, ಮಾದೇವನ ಮದುವೆ, ಸುದ್ದಿಗಾರ ಕೆಂಪಣ್ಣ ಕಥೆಗಳು ತಮ್ಮದೇ ವಿಶಿಷ್ಟ ವಿಷಯದಿಂದ ಸೆಳೆಯುತ್ತವೆ.

“ದೇವರ ಹೊಲ”, “ಕೈವಲ್ಲಿ” ಮತ್ತು “ಲೆಕ್ಕ ಪುಸ್ತಕ” ಓದಲೇಬೇಕಾದ ಕಥೆಗಳು.

ಮಂಜಯ್ಯ ದೇವರಮನಿಯವರ ಈ ಕಥಾ ಸಂಕಲನವೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

February 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: