ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲತಿ ಶಶಿಧರ್ ಬಿಂದಾಸ್ ಕವಿತೆ: ಇಪ್ಪತ್ತರ ಹರೆಯ 

ಮಾಲತಿ ಶಶಿಧರ್

ದಿಕ್ಕು ತಪ್ಪಿಸುವ ಸಂಜೆಯಲಿ
ಮೂತಿ ತಿರುಗಿಸೋ ಮೂಗುತಿಯ
ಊರ ತುಂಬಾ ಮೆರವಣಿಗೆ
ಮಾಡಿಸಿಕೊಂಡು ಒಂದು
ಸುತ್ತು ಬರದಿದ್ದರೆ ನಿದ್ದೆ ಹತ್ತುತ್ತಿರಲಿಲ್ಲ.

ಕತ್ತು ಕೊಂಕಿಸಿ, ಎದೆಯುಬ್ಬಿಸಿ,
ಪರಿವಾಳದಂತೆ ಅಂಕು ಡೊಂಕು
ಹೆಜ್ಜೆ ಇಡುವಾಗ ಕಂಪೌಂಡಿನ
ಮೇಲೆ ಕೂತ ಗಂಡು ಹೈಕಳು
ಸೊಕ್ಕಿನ ರಾಣಿ ಎಂದು ಕರೆದರೆ
ಒಳಗೊಳಗೇ ನಗುತ್ತಿದ್ದೆ,
ಕಂಗಳಲ್ಲಿ ಮಾತ್ರ ಬೆಂಕಿ ಚಂಡು.

ಗಂಟೆ ನಾಲ್ಕಾದರೆ ಸಾಕು
ಕಾಲೇಜು ಗೇಟಿನ ಮುಂದೆ
ನಿಂತ ಹುಡುಗರಿಗೆ ಓರೆ ನೋಟವೆಸೆದು
ತುಟಿಯಂಚಲ್ಲೇ ಕಾಡಿ ಕೈಗೆ ಸಿಗದೆ
ಸ್ಕೂಟಿಯಲಿ ಬರ್ರೆಂದು ಹಾರಿ
ಕನ್ನಡಿಯಲ್ಲೊಮ್ಮೆ ಅವರ ನೋಡಿ
ಮುಸಿ ಮುಸಿ ನಗುತ್ತಿದ್ದೆ .

ಬಂದ ವರರನ್ನೆಲ್ಲಾ ಸಲ್ಲದ ಕಾರಣ
ಕೊಟ್ಟು ನಿರಾಕರಿಸಿ ಏಕೈಕ
ಸುಂದರಿಯಂತೆ ಜಡೆಯ
ತಿರುಗಿಸುತ್ತಾ ಹೃತಿಕ್ ರೋಷನ್ನಂತ
ಗಂಡು ನೆನೆದು ನಾಚಿ ಬಾಗಿಲಿಗೊರಗಿದರೆ
ಸರಣಿ ಹಗಲುಗನಸು.

ಪಕ್ಕದ ಮನೆಯ ಹುಡುಗಿ
ಕತ್ತು ಕೊಂಕಿಸಿ, ಎದೆಯುಬ್ಬಿಸುತ
ವಿಶ್ವ ಸುಂದರಿಯಂತೆ
ಜಂಬದಿ ಕಾಲೇಜಿನತ್ತ
ಅವಳಲ್ಲಿ ಇಪ್ಪತ್ತರ ಹರೆಯದ
ನನ್ನನ್ನು ಕಂಡು ಹೇಗಿದ್ದೆ ಎಂದು
ಅಹಂಕಾರದ ಕಂಗಳಲ್ಲಿ ಬೀಗುತ್ತೇನೆ.

‍ಲೇಖಕರು avadhi

21 July, 2020

3 Comments

  1. Prajna Mattihalli

    Nice poem Malati

  2. T S SHRAVANA KUMARI

    ಹುಚ್ಚು ಖೋಡಿ ಮನಸು, ಅದು ಹರಯದ ವಯಸು

  3. Chirapreran

    Nice madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading