ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲತಿ ಶಶಿಧರ್ ಕವಿತೆ- ಪವಿತ್ರ ಪಾದ..

ಮಾಲತಿ ಶಶಿಧರ್

ನಿನ್ನ ಬಿರಿದ ಪಾದಗಳಲ್ಲಿ
ಮುತ್ತುಗದ
ಹೂವು ಅರಳುತ್ತವೆ

ಚಿಗುರು ನಕ್ಕಾಗ
ಚಕಿತಗೊಳ್ಳುತ್ತವೆ
ಕಣ್ತೆರೆಯುತ್ತವೆ
ಹೂ ಕಾಯಿ ಹಣ್ಣು

ಹೊಕ್ಕಳಲ್ಲಿ ಬೇರು
ಇಳಿಬಿಟ್ಟು
ವಿಸ್ತಾರವಾದ ಬೆನ್ನಲ್ಲಿ
ಕವಲೊಡೆದ ಟೊಂಗೆಗೆ
ನಿನ್ನ ಪಾದದಲ್ಲೇ ಮುಕ್ತಿ

ನಡುರಾತ್ರಿ ಎಲೆ ಎಲೆಯ
ಬಯಲಲ್ಲಿ ಬೆಳದಿಂಗಳು
ಕದ್ದಿಣುಕುವಾಗ
ಪವಿತ್ರ ಪಾದಗಳಿಗೆ
ಕಚಗುಳಿ

ಗಿಣಿಮರಿಯೊಂದು
ಚಿಗುರು ತಿಂದು ನುಡಿಯುತ್ತದೆ
ಹೊಸಕಾಲದ ಗಾಳಿಯು
ಅಣುರೇಣುಗಳ ನುಂಗುವ ಶಕುನ

‍ಲೇಖಕರು avadhi

21 May, 2023

2 Comments

  1. Jayasrinivasa Rao

    What a thought! Lovely poem!

  2. ರಾಜ

    ಚೆನ್ನಾಗಿದೆ…
    ಅಂಕದಿಂದಚೆ ಇನ್ನೂ ಯೋಚನೆ ಮಾಡಬಹುದಿತ್ತೇನೋ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading