ರಂಗಾಯಣ ಏಕೆ, ಏನು, ಎತ್ತ?

ಬಿ ರಾಜೇಶ್

ರಂಗಮಾಧ್ಯಮ, ರಂಗಸಂಸ್ಥೆಗಳು,  ನಟನೆಯ ವೃತ್ತಿ, ವೃತ್ತಿಪರತೆ ಇತ್ಯಾದಿಯಾಗಿ ರಂಗಭೂಮಿಗೆ ಸಂಬಂಧಿಸಿದ ಜ್ವಲಂತ ಸಂಗತಿಗಳನ್ನು ಕುರಿತಂತೆ ನಟರು ಹಾಗೂ ರಂಗಕರ್ಮಿಗಳೇ ಚರ್ಚಿಸುವುದು ಸಾಧ್ಯವಾಗಬೇಕು ವಿಮರ್ಶಕವಾದ ನಿಲುವೊಂದು ರಂಗಭೂಮಿಯ ಒಳಗಿನಿಂದಲೇ ರೂಪಿತವಾಗಬೇಕು, ಎಂಬ ಆಶಯದಿಂದ ಭಾರತೀಯ ರಂಗಭೂಮಿ ಪ್ರತಿಷ್ಠಾನವು ಹಲವು ಕಾರ್ಯಕ್ರಮಗಳನ್ನು ನಿಯೋಜಿಸಿಕೊಂಡು ಬಂದಿದೆ.

ಮೇ 22, ಸಂಜೆ 5, ಕಲಾಮಂದಿರದ ಕಿರುರಂಗಮಂದಿರದಲ್ಲಿ ಈ ಬಾರಿ ರಂಗಾಯಣ ಸಂಸ್ಥೆಯನ್ನು ಕುರಿತಂತೆ, ರಂಗಾಯಣ ಏಕೆ, ಏನು, ಎತ್ತ? ಎಂಬ ಒಂದು ಗೋಷ್ಠಿಯನ್ನು ನಿಯೋಜಿಸಲಾಗಿದೆ. ರಂಗಾಯಣವು, ಇತ್ತ, ನಟರು ಹಾಗೂ ತಂತ್ರಜ್ಞರಿಗೆ ವೃತ್ತಿಪರ ಜೀವನೋಪಾಯದ ಮಾರ್ಗವಾಗಬೇಕು, ಅಂತ ಸಮಾಜಕ್ಕೆ ಅದು ಉತ್ತಮ ಗುಣಮಟ್ಟದ ರಂಗ ಪ್ರದರ್ಶನಗಳನ್ನು ನೀಡಬೇಕು ಎಂಬ ಘನ ಉದ್ದೇಶದಿಂದ ಆರಂಭವಾದ ಸಂಸ್ಥೆಯು ತನ್ನ ಉದ್ದೇಶಗಳನ್ನು ಈಡೇರಿಸುವಲ್ಲಿ ಸಫಲವಾಗಿಧೆಯೇ, ಅಥವಾ ಅಧಿಕಾರ ರಾಜಕಾರಣದ ತಿಪ್ಪೆ ಕಸವಾಗಿ ಕಸವಾಗಿದಿಯೇ ಎಂಬ ಸಂಗತಿಯೂ ಇಂದು ಎಲ್ಲಾ ನಟರು ಹಾಗೂ ರಂಗಕರ್ಮಿಗಳನ್ನು ಕಾಡತೊಡಗಿದೆ.

ಕಲೆ ರಂಗಭೂಮಿ ಸಾಹಿತ್ಯ ಜಾನಪದ ಇತ್ಯಾದಿ ಸಾಂಸ್ಕೃತಿಕ ಕ್ಷೇತ್ರಗಳ ಸ್ವಯತ್ತತೆಯನ್ನು ರಕ್ಷಿಸಿಕೊಳ್ಳುವ ಬಗೆಯೇನು? ಮಂತ್ರಿಗಳು ಅಧಿಕಾರಿಗಳು ಗೂಟದ ಕಾರುಗಳು ಹಾಗೂ ಪಕ್ಷ ರಾಜಕಾರಣದ ಹಸ್ತಕ್ಷೇಪವಿಲ್ಲದೆ ಸರಕಾರದ ಅನುದಾನ ಪಡೆಯುವ ಬಗೆ ಯಾವುದು? ಸರಕಾರದ ಅನುದಾನವು ರಂಗಭೂಮಿಯ ಗುಣಮಟ್ಟವನ್ನು ಹಾಳುಗೆಡುವದಂತೆ ಕಾಪಾಡುವ ಬಗೆ ಯಾವುದು? ನಾನೆಲ್ಲಿ ಎಡವಿದ್ದೇನೆ? ಎಂಬ ಹಲವು ಸಂಗತಿಗಳು ನನ್ನನ್ನು ಕಾಡುತ್ತಿವೆ.

ಸಂತೆಗೆ ಮೂರು ಮೊಳ ನೇಯ್ದು ಕೊಡುವ ಅಸಡ್ಡೆ ಸದ್ಯ ಇಡೀ ರಂಗಭೂಮಿಯನ್ನು ಆವರಿಸಿದೆ. ಇತ್ತ ಸೂಕ್ತ ಜೀವನೋಪಾಯದ ಮಾರ್ಗಗಳಿಲ್ಲದೆ ತರಬೇತಾದ ರಂಗ ನಟರು ಹಾಗೂ ತಂತ್ರಜ್ಞರು ದಾರಿದ್ರಕ್ಕೆ ಸಿಲುಕಿದ್ದಾರೆ. ಅನಿವಾರ್ಯವಾಗಿ, ಅವರು, ಯಂತ್ರ ಚಾಲಿತ ಮನರಂಜನೆಯ ಕಾರ್ಖಾನೆಗಳಲ್ಲಿ ದಿನಗೂಲಿ ಕೆಲಸರಾಗುತ್ತಿದ್ದಾರೆ. ಈ ಎಲ್ಲಾ ಸಂಗತಿಗಳನ್ನು ಚರ್ಚಿಸಿ ಕಾರಣ ಹುಡುಕೋಣ ಬನ್ನಿ.

‍ಲೇಖಕರು avadhi

May 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: