ಮಾರ್ಕ್ವೇಜ್ ಮತ್ತು ಮರ್ಸಿಡಿಸ್ ಚಿತ್ರ ನೆನಪಿಗೆ ಬಂತು…

ಮೂಲ: ಉಜ್ವಲ್ ಶುಕ್ಲಾ

ಕನ್ನಡಕ್ಕೆ: ಮೆಹಬೂಬ ಮುಲ್ತಾನಿ

ಪ್ರಸಿದ್ಧ ಕಾದಂಬರಿಕಾರ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ Hundred years of solitude ಬರೆಯಲು ಇನ್ನೇನು ತಯಾರಿ ನಡೆಸಿಕೊಳ್ಳುತ್ತಿದ್ದರು. ಮನೆ ನಡೆಸಿಕೊಂಡು ಹೋಗಲೆಂದು ಅವರು ತಮ್ಮ ಕಾರನ್ನು ಮಾರಿ ಅದರ ಹಣವನ್ನು ತಮ್ಮ ಹೆಂಡತಿಯ ಕೈಯಲ್ಲಿ ಕೊಟ್ಟು ಕಾದಂಬರಿ ಬರೆಯಲು ತೊಡಗಿದರು. ಆದರೆ ಅವರು ನೀಡಿದ ಹಣ ಕೆಲವೇ ತಿಂಗಳ ಖರ್ಚನ್ನು ನಿಭಾಯಿಸಲು ಸಾಧ್ಯವಾಯಿತು.

ಮಾರ್ಕ್ವೇಜ್ 18 ತಿಂಗಳ ಕಾಲ ಬರೆದು ಆ ಕಾದಂಬರಿ ಮುಗಿಸಿದಾಗ, 9 ತಿಂಗಳ ಮನೆಬಾಡಿಗೆ ಬಾಕಿ ಉಳಿದಿತ್ತು. ಅವರ ಹೆಂಡತಿ ಅದ್ಹೇಗೋ ಮನೆ ನಡೆಸಿಕೊಂಡು ಹೋಗ್ತಾ ಇದ್ದರು. ಆದರೆ ಅವರೆಂದೂ ಈ ಸಮಯದಲ್ಲಿ ಮಾರ್ಕ್ವೇಜ್ ಅವರಿಗೆ ತೊಂದರೆ ನೀಡಲಿಲ್ಲ. ಅವರ ಬರವಣಿಗೆಗೆ ಅಡ್ಡಿಯಾಗುವ ಯಾವುದನ್ನೂ ಅವರಿಗೆ ಹೇಳಲಿಲ್ಲ. ನಿನ್ನೆ ಕೂಡಾ IPL ಫೈನಲ್ ಪಂದ್ಯ ಮುಕ್ತಾಯದ ನಂತರ ನನಗೆ ಇದೆಲ್ಲ ಮತ್ತೆ ನೆನಪಾಯ್ತು. ಮ್ಯಾಚ್ ಮುಕ್ತಾಯದ ನಂತರ ಸಾಕ್ಷಿಯವರು ಧೋನಿಯವರನ್ನು ಪ್ರೀತಿಯಿಂದ ತಬ್ಬಿಕೊಂಡ ಕ್ಷಣ ನನಗೆ ಮಾರ್ಕ್ವೇಜ್ ಮತ್ತು ಅವರ ಹೆಂಡತಿ ಮರ್ಸಿಡಿಸ್ ಅವರ ಚಿತ್ರ ನೆನಪಿಗೆ ಬಂತು.

ಹಿಂದಿನ ಕೆಲ ವರ್ಷಗಳಲ್ಲಿ ಧೋನಿ ಅದೆಷ್ಟು ಟ್ರೊಲ್ ಗಳಿಗೆ ಒಳಗಾದರು, ಟೀಕೆಗೆ ಒಳಗಾದರು, ಅವಹೇಳನಕ್ಕೊಳಗಾದರೂ ಅಂದೂ ಕೂಡಾ ಸಾಕ್ಷಿ ಅವರ ಜೊತೆ ಇದ್ದರು ನಿನ್ನೆ ಕೂಡಾ. ಜೀವನದಲ್ಲಿ ಇಂತಹ ಸಂಗಾತಿ ಇರುವುದು ಅವಶ್ಯಕವಿದೆ. ನಾವು ಸಚೀನ್ ರ ಸಾಧನೆಯಲ್ಲೂ ಅವರ ಸಂಗಾತಿಯನ್ನು ಹೊರಗಿಡಲಾಗದು. ನಮ್ಮ ಸಮಾಜದಲ್ಲಿ ನಮಗೆ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ ಮತ್ತು ಅಲ್ಲೆಲ್ಲ ಸಾಮಾನ್ಯವಾಗಿ ಸ್ತ್ರೀಯರೆ ತ್ಯಾಗಮಯಿಗಳಾಗಿ ಕಂಡು ಬರುತ್ತಾರೆ. ಆದರೆ ನಾನು ಮುಂಬರುವ ದಿನಗಳಲ್ಲಿ ಇಂತಹ ತ್ಯಾಗವನ್ನು ಪುರುಷರ ಕಡೆಯಿಂದ ಬಯಸುತ್ತೇನೆ. (ನನ್ನನ್ನೂ ಒಳಗೊಂಡು).

ನಮ್ಮ ಮನೆಯ ಹೆಣ್ಣು ಮಕ್ಕಳು ಯಾವುದೇ ಉತ್ತಮ ಕಾರ್ಯ ಮಾಡಲು ಮುಂದಾದರೆ, ಸಾಧನೆ ಮಾಡಲು ಮುಂದಾದರೆ, ಯಾವುದೇ ಘನಕಾರ್ಯಕ್ಕೆ ಮುಂದಾದರೆ ನಾವು ಅವರಿಗೆ ಜೊತೆಯಾಗಿ ನಿಲ್ಲೋಣ. ದೊಡ್ಡ ಕಾರ್ಯಗಳನ್ನು ಮಾಡುವವರಿಗೆ ದೊಡ್ಡ ಸೋಲುಗಳೆ ಆಗುತ್ತವೆ. ಇಂತಹ ಸಮಯದಲ್ಲೇ ಮನುಷ್ಯನಿಗೆ ಸಹಾಯ ಬೇಕಿರುತ್ತದೆ. ಅದು ನಿಮ್ಮ ಸಂಗಾತಿಯಾಗಿದ್ದಲ್ಲಂತೂ ಇನ್ನೂ ಉತ್ತಮ.

ಈ ತರಹದ ಜೋಡಿಗಳು ಮಾನವ ಇತಿಹಾಸದಲ್ಲಿ ಪ್ರೀತಿ ಮತ್ತು ಸಂಬಂಧಗಳ ಗಟ್ಟಿ‌ ಮುದ್ರೆ ಒತ್ತುತ್ತಾರೆ ಮತ್ತು ಸೋಲಿನಲ್ಲಿರುವ, ಕಷ್ಟದಲ್ಲಿರುವ ವ್ಯಕ್ತಿಗೆ ಅವುಗಳ ಜೊತೆ ಹೋರಾಡುವ ಶಕ್ತಿ ತುಂಬುತ್ತಾರೆ. ಮಿಲೈನಾ- ಕಾಫ್ಕಾ, ಅಮೃತಾ- ಸಾಹೀರ ಒಂದೆಡೆಯಾದರೆ ಮಾರ್ಕ್ವೇಜ್- ಮರ್ಸಿಡಿಸ್‌ ಇನ್ನೊಂದೆಡೆ.

‍ಲೇಖಕರು Admin

October 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: