ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧವಿಯೊಂದಿಗೆ ಒಂದು ಮಾತುಕತೆ..

ಅಕ್ಷತಾ ಕೃಷ್ಣಮೂರ್ತಿ

 

ಬೆಳಿಗೆದ್ದು ದಿನಾಲು ಅವನ ಹಿಂದೆಯೇ
ಕುಳಿತು ಸ್ಕೂಟರಿನಲ್ಲಿ ಹೋಗುವಾಗ
ಕಣಿವೆಯ ಹಸಿರು ಮೈದುಂಬುತ್ತದೆ ನನಗೆ
ಅಡವಿ ಪಾಡು ನಮ್ಮದೆನುವವರ ಎದೆಯಲಿ
ಅಕ್ಷರಬೀಜ ಬಿತ್ತಿ ನಗುವಾಗ
ವರ್ಷದುದ್ದಕ್ಕೂ ನಡೆವ ಸ್ಪರ್ಧೆಗಳಲಿ
ಭಾಗವಹಿಸಿ ಅವಳು ಗೆದ್ದಾಗ
ನಿನ್ನಂತಲ್ಲ ಅವಳು ಬದಲಾಗಿದ್ದಾಳೆ
ಎಂದೆನಿಸುತ್ತದೆ ಮಾಧವಿ

ಅಣುವಿನಂತ ವಿಷಯಕ್ಕೂ ಜಾತಿ ಧರ್ಮ
ರಾಜಕಾರಣ ಲೇಪಿಸುತ್ತಿರುವಾಗ
ದನಿಯಿಲ್ಲದವಳಲ್ಲಿ ದನಿಯಿಲ್ಲದವಳ
ಇನ್ನೊಂದು ದನಿ
ಉಳಿಯುವುದೇನು? ತವಕಗೊಳ್ಳುತ್ತೇನೆ
ಒಮ್ಮೊಮ್ಮೆ

ಧಾವಂತದ ಬದುಕು
ಗೋಡೆ ಮೇಲಿನ ಮಾತು
ನೀರಗುಳ್ಳೆಯಂತೆ ಮರೆಯಾಗುವುದು
ಎಂದದೆಷ್ಟೋ ಬಾರಿ ಹೇಳಿದ ಅವನ
ಒತ್ತಾಯಕೆ ಕಪಾಟಿನಲ್ಲಿದ್ದ ವಾರಿಸ್ ಡೇರಿಸ್
ಸಾರಾ ಶಗುಪ್ತಾ ಓದಿ
ಮತ್ತೆ ತಯಾರಾಗುತ್ತೇನೆ
ಖಚಿತವಾಗಿ ಮಾತಾಡಲು.

ಅತೀತಗಳು ಹೆದರಿಸಬಾರದು ಮಾಧವಿ
ನೂರಾರು ಗಾಲವರು ಎದುರು ಬಂದಾಗಲೂ
ಮುಖ ಹಣಕಬಾರದಲ್ಲವೆ…?
ಅಂದುಕೊಂಡಿದ್ದೇನೆ.

ಹಾಗಾಗಿ
ಈಗ ಅಡವಿಯ ಆ ಅವಳಿಗೂ
ತಿಳಿಸಿರುವೆ ಸೀತಾ ಪರಿತ್ಯಾಗ
ತಿದ್ದಿ ಬರೆಯೋಣ
ಹೊಸತಾಗಿ

‍ಲೇಖಕರು admin

10 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading