ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾತಿಗೆ ಮಾತು ಬೆಳೆದು..

ಕುದಿಮೌನದ ಮಾತು

ಅಶ್ಫಾಕ್ ಪೀರಜಾದೆ

ಮಾತು  ಅತಿರೇಕಕ್ಕೇರಿದಾಗ
ಮಹಾಮೌನಕೆ ಶರಣಾಗುವೆ
ನನಗೆ ಗೊತ್ತು ಮಾತು ಬೆಳ್ಳಿ ;
ಮೌನ ಬಂಗಾರವೆಂದು

ಸತತ ಮಾತನಾಡುವ ವ್ಯಕ್ತಿಗೆ
ಮೌನವೆನ್ನುವುದು ಶಿಕ್ಷೆಯಾದಂತೆ
ಮೌನ ವಹಿಸುವ ಮೌನಿಗೆ
ಮಾತು ಮನೋಹಿಂಸೆಯ
ಸಜೆಯೂ ಹೌದು

ಮಾತಿಗೆ ಮಾತು ಬೆಳೆದು
ಮಾತು ಮನಸ್ತಾಪಕೆ ಹೊರಳುವ
ಅಪಾಯವರಿತು  ಮೌನ ತಾಳುವೆ
ಶಾಂತಿ – ಸಂಧಾನದ
ಮೌನಸಂದೇಶ ಅರಿಯದ ಮಾತು
ಮೌನಕೆ ಅಹಂಕಾರದ
ಬಣ್ಣ ಬಳೇದು
ವಾತಾವರಣ ಹದಗೆಡಸಿ
ರಕ್ತ ಇನ್ನಷ್ಟು ಹೆಪ್ಪುಗಟ್ಟಿಸುವುದು

ಆಗಲೂ ನಾನು ನನ್ನ ನೆಚ್ಚಿನ
ಮೌನವನ್ನೇ ಪಾಲಿಸಲು ಪ್ರಯತ್ನಿಸಿವೆ
ಮತ್ತು
ನನ್ನೆದೆಯ ಮೌನ ಪ್ರಕೋಪವನು
ಮೂಕಾಗಿಯೇ ನುಂಗುವೆ

ಅಂತರಾಳದಲಿ
ಕುದಿಯುವ ಮೌನ
ಯಾವತ್ತಿಗೂ ತನ್ನಷ್ಟಕ್ಕೆ ತಾ
ತುಡಿಯುವ ತುಡಿತವಲ್ಲ
ಒಳಗೊಳಗೆ ಕುದಿಯುವ ಕುದಿತ
ಜ್ವಾಲಾಮುಖಿಯಾಗುವ ಮುನ್ನ
ತಂಪು ಮಳೆಯ ಸಿಂಚನವಾಗಿ
ಶಾಂತಿತೋಟ ಹಸಿರುದುಂಬಿ ನಳನಳಿಸಲಿ..

‍ಲೇಖಕರು avadhi

6 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading