ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಿಕಾರ್ಜುನಗೌಡ ತೂಲಹಳ್ಳಿ ಕವಿತೆ – ಚೌಪದಿಯ ಲಯದಿ…

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಸಣ್ಣ ಭೇಟಿಯಲಿ
ಕಣ್ಣು ಹೊಳೆದು
ಬಿಟ್ಟು ಹೋಗಿರುವ ಮಾತು
ನನ್ನ ಕವಿತೆ

ಪುರಾಣದ ಹೆಣ್ಣಲ್ಲ ನೀ
ಸದ್ಯದ ಸುಡು ನೆಲದಲಿ
ಪಾದ ಪುಟಿಸಿ
ತೆಳ್ಳಗೆ ಹರಿದು ಬಂದ ತೊರೆ

ನಿಮಿಷದಲ್ಲೇ
ದೊಡ್ಡ ವಿರಾಮ ನೀಡಿ
ನಾಡಿ ಮಿಡಿದ ಹೊತ್ತಲ್ಲಿ
ಅವಸರಿಸದೆ ಕಾಯುತ್ತಿರುವೆ
ಕಡಲ ಬಾಗಿಲ ಮುಂದೆ

ವಿನಂತಿಯಿಷ್ಟೇ
ನೇರ ಕಡಲಿಗೇ ನುಗ್ಗದೆ
ದಡದಲ್ಲೊಂದಿಷ್ಟು ಆಡು
ಕೈಬೆರಳ ನೀಡುವೆ

ಚೌಪದಿಯ ಲಯದಿ
ಸಾಗುವ ಹೆಜ್ಜೆಗಳು
ನಿತ್ಯ ನೆನಪಿಗೆ
ಹಾಡೊಂದ ಬರೆಯಲಿ

‍ಲೇಖಕರು avadhi

18 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading