ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲ್ಲಮ್ಮ ಯಾಟಗಲ್ ಕವಿತೆ – ಅವ್ವನೆಂದರೆ ಕರಗದ ನಿಧಿ…

ಮಲ್ಲಮ್ಮ ಯಾಟಗಲ್

ಮುಂಗಾರಿ ಮಳೆಗೆ ಬಿದ್ದ ಬೀಜವೆಲ್ಲ
ಕಮರಿಹೋಗದೆ ಪುಟಿದೆದ್ದು
ಮುಖ ನೋಡಿ ನಗುತ್ತಿದ್ದರೆ
ಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ

ಹಿಂಗಾರಿನ ಮಂಜಿಗೆ ಮೊಳಕೆಯೊಡೆದ
ಬಿಳಿ ಮುತ್ತಿನ ರೆಕ್ಕೆಗಳು
ಗರಿಬಿಚ್ಚಿ ಕುಣಿಯುವಾಗ
ಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ..!

ಮಸಿ ಬಳಿದ ತತ್ತಿಯನು
ಗೂಡಿನೊಳಗಿಟ್ಟು ಮರಿಗಾಗಿ
ದೀಪ ತೋರಿಸುವಾಗ
ಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ..!

ಮಿಣುಕುವ ಮಿಂಚು ಮಾಯವಾಗಿ
ರೆಕ್ಕೆಯ ತಾಳ ಹಾಕುತ್ತ ಮುಗಿಲಿನ
ಹಾದಿಗುಂಟ ಕೋಳಿ ಹಾರಿದಾಗ
ಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ..!

ಅವ್ವನೆಂದರೆ ನೆಲದೊಳಗಿರು ಕರಗದ ನಿಧಿ
ದಣಿವರಿಯದೆ ಹರಿಯುವ ಪಯೋನಿಧಿ
ಬೇಡಿಬಂದ ಜೀವಕ್ಕೆ ಕೊಡುವುದೆಂದರೆ
ಅವ್ವನೆದೆಯಲ್ಲಿ ಚಿಗುರುವ ಕನಸಿಗೆ ವಸಂತಕಾಲ..!

ಅವ್ವನೆಂದರೆ ನನ್ನೊಳಗಿರುವ
ಅಂತರಾತ್ಮದ ಪ್ರಜ್ನೆ

‍ಲೇಖಕರು Admin

1 December, 2022

1 Comment

  1. AugustinJames

    ಸುಂದರ ಕವನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading