ಮಲೆಗಳಲ್ಲಿ ಮದುಮಗಳು :ಚಿಂತೆ ಯಾತಕೋ ಕಾಂತಾನೆ ಮನದೊಳು’

ಬಾ ಹುಲಿಕಲ್ ನೆತ್ತಿಗೆ-5

-ಪ್ರೊ. ಶಿವರಾಮಯ್ಯ

ಉಂಗುರದ ಮರುಪಯಣವನ್ನು ಕಲ್ಪಿಸಿದ ಕೆವೈಎನ್ ಕಾವೇರಿ ಶವದ ಬೆರಳಿನಲ್ಲಿದ್ದ ಆ ಉಂಗುರವನ್ನು ಅಂತಕ್ಕ ತನ್ನ ಸೋದರಳಿಯನ ಕೈಗೆ ಕೊಟ್ಟು ಹುಂಡಿಗೆ ಹಾಕಿಬಿಡು ಎಂದಿದ್ದಳು. ಅದು ಗೋಸಾಯಿಗಳಿಗೆ ಕೈಗೆ ಕಂತೆ ಭಿಕ್ಷವಾಗಿ ತಿರುಗಿಬಿತ್ತು. ಆ ಕಾರಣೀಕ ಉಂಗುರದ ಕಥೇಯನ್ನು ಅಜರ್ುನ ಜೋಗಿಗಳಿಗೆ ಹೇಳಿದ ಗೋಸಾಯಿಗಳು ‘ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ ಬರೆದಿರುವ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ನೀವು ಪುರಾಣ ಮಾಡಿ ಹಾಡಿ ಹೊಟ್ಟೆ ಹೊರೆದು ಕೊಳ್ಳಿರಪ್ಪಾ’ ಎಂದು ಉಂಗುರ ಕೊಟ್ಟು ಉತ್ತರಕ್ಕೆ ಪಯಣಿಸಿದರು.

(ಚಿತ್ರ :ಶ್ರೀರಾಮ್ .ಕೆ ಎ .ಜಮದಗ್ನಿ)

ಇದಿಷ್ಟು ಉಂಗುರದ ಪೂರ್ವ ವೃತ್ತಾಂತ. ಇದನ್ನು ಮುಂದಿಟ್ಟುಕೊಂಡು ಎರಡು ವಿರಾಮದ ಮದುಮಗಳು ರಂಗರೂಪವನ್ನು ಮುನ್ನಡೆಸುತ್ತಾರೆ ನಮ್ಮ ನಿರೂಪಕರು, ಅಕ್ಷರಶಃ ನೂರಾರು ಪಾತ್ರಗಳಿಂದಲೂ, ಘಟನಾ ಬಾಹುಳ್ಯದಿಂದಲೂ ಇಡಿಕಿರಿದಿರುವ ಮದುಮಗಳು ಕಾದಂಬರಿ ಕೇವಲ ಒಂದು ಮಳೆಗಾಲದ (ಮುಂಗಾರು ಭತ್ತದ ನಾಟಿಯಿಂದ ಕಟಾವು ಆಗುವವರೆಗೆ) ಕಾಲಮಾನದಲ್ಲಿ ಜರುಗುತ್ತದೆ. ಆ ದಟ್ಟಾರಣ್ಯದಲ್ಲಿ ಸುರಿವ ಮಳೆ, ಹರಿವ ಹೊನಲು, ಹಗಲು ಇರುಳೆನ್ನದೆ.

ಇಂಥಲ್ಲಿ ಮಲೆನಾಡಿಗರ ಬದುಕುಸಾಗುತ್ತಿದೆ. ಶತಮಾನದ ಹಿಂದಿನ ಬದುಕನ್ನು ಹರಿಗಡಿಯದಂತೆ ವರ್ತಮಾನಕ್ಕೆ ಹೇಳುವುದೆಂದರೆ ಹೇಗೆ ಎಂಬ ಚಿಂತೆ ಕವಿದಾಗ ಈ ನಮ್ಮ ಕಥನಕಾರರು ‘ಚಿಂತೆ ಯಾತಕೋ ಕಾಂತಾನೆ ಮನದೊಳು’ ಎಂಬಂತೆ ಉಂಗುರ ಸಿಕ್ಕಿದ ಕೂಡಲೆ ಸಾಲುಗಟ್ಟಿ ನೆರವಾದರು. ಹೀಗಾಗಿ ಒಂಭತ್ತು ಗಂಟೆ ನಾಟಕ ನೋಡುವಲ್ಲಿ ಉದ್ಭವಿಸಬಹುದಾದ ಮನಾಟನಿಯನ್ನು ತಪ್ಪಿಸಲು ನೆರವಾದರು.

ಮಲೆನಾಡಿನ ರಂಗ ಪ್ರವೇಶಕ್ಕೆ ಇವರು ಎಷ್ಟರ ಮಟ್ಟಿಗೆ ಉಚಿತ ಎಂಬ ಜಿಜ್ಞಾಸೆ ಮೂಡಿದಾಗ, ನಮ್ಮ ಕೋರಿಕೆಯ ಮೇರೆಗೆ ಜಾನಪದ ತಜ್ಞರಾದ ಪ್ರೊ. ಹಿ.ಶಿ. ರಾಮಚಂದ್ರೇಗೌಡರು ಹಲವಾರು ಜಾನಪದ ವಿಶ್ವಕೋಶಗಳನ್ನು ತಿರುವಿ ಹಾಕಿ, ಅಜರ್ುನ ಜೋಗಿಗಳು ಹಿಂದೆ ಮಲೆನಾಡು ಪ್ರದೇಶದಲ್ಲಿ ಹುಡುಗಿಯರನ್ನು ಹಾರಿಸಿಕೊಂಡು ಹೋಗುತ್ತಿದ್ದರೆಂಬ ಐತಿಹ್ಯವನ್ನೂ, ಸುಡುಗಾಡುಸಿದ್ಧರು ಸ್ಮಶಾನವಾಸಿಗಳಾಗಿ ತಿರುಗುತ್ತಿದ್ದರೆಂಬುದನ್ನೂ, ಹೆಳವರು ಮಲೆನಾಡಿನ ಒಕ್ಕಲು ಮಕ್ಕಳ ಅಲಿಖಿತ ವಂಶಾವಳಿಯನ್ನು ಮೌಖಿಕವಾಗಿ ಹೇಳಬಲ್ಲವರೆಂಬುದನ್ನೂ, ಇನ್ನು ಗೋಸಾಯಿಗಳು, ಕುವೆಂಪು ಅವರೇ ಗಡ್ಡದಯ್ಯನ ಪ್ರಕರಣದಲ್ಲಿ ವಿವರಿಸುವಂತೆ ಅಖಿಲ ಭಾರತ ಸಂಚಾರಿಗಳೆಂಬುದನ್ನೂ ಓದಿ ತಿಳಿದು ಮಾಹಿತಿ ಒದಗಿಸುತ್ತಿದ್ದರಲ್ಲಿದೆ, ಒಂದೆರಡು ಬಾರಿ ನಮ್ಮಲ್ಲಿಗೆ ಒಂದು ಆ ಬಗ್ಗೆ ಚಚರ್ಿಸಿದ್ದರು ಸಹ. ಸೀನ್ ಕಟ್ಟಿದಷ್ಟನ್ನು ಕಾ.ತ.ಚಿಕ್ಕಣ್ಣ, ಬಸು ಅವರೊಟ್ಟಿಗೆ ಕುಳಿತ ಗೌಡರು ಓದಿಸಿ, ಕೇಳುತ್ತಾ ಹೋದುದುಂಟು

ಮುಂದುವರೆಯುವುದು…

‍ಲೇಖಕರು avadhi

December 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: