ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

(photo by : ci so)

ಇವರು ಮೂರ್ತಿ 7

ಸಿಂಪಲ್ ಗುರುದತ್...

ಗುರುದತ್ನ ಸಿಂಪಲ್ ಲೀವಿಂಗ್ ಬಗ್ಗೆ ನಾನು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೆ. ನನ್ನ ಪುಸ್ತಕ (ಬಿಸಿಲು ಕೋಲು)ದಲ್ಲೂ ಇದನ್ನು ಬರೆದಿದ್ದೇನೆ. ನಾವು ಶೂಟಿಂಗ್ ಮಾಡುವಾಗ, ಸಂಜೆ ಹೊತ್ತಿಗೆ ನನಗೆ ಸಲ್ಪ ಹಸಿವೆಯಾಗುತ್ತಿತ್ತು. ಹಾಗಾಗಿ ಏನಾದ್ರೂ ತರಿಸಿಕೊಂಡು ತಿಂತಾ ಇದ್ದೆ. ನಮ್ಮ ಜೊತೆ ಒಬ್ಬ ಕ್ಯಾಮರಾ ಬಾಯ್ ಇದ್ದ ವಿಠಲ್ ಅಂತ. ಅವನನ್ನು ಕರೆದು ಜೋಳದ ರೊಟ್ಟಿ, ಖಾರ ಚಟ್ನಿ ತರಿಸಿಕೊಳ್ಳುತ್ತಿದ್ದೆವು. ಗುರುದತ್ ನನ್ನ ಬಳಿ ಬಂದು, “ಕ್ಯಾ ಖಾ ರಹೆ ಹೋ’ ಅಂತ ಕೇಳಿದ. ನಾನು ತಿಂಡಿ ಮುಚ್ಚಿಕೊಂಡು ಇದೆಲ್ಲ ನಿಂಗಲ್ಲ ಅಂದೆ. ಅಂವ ನಂಗೇ ಜೋರು ಮಾಡಿ ನನ್ನ ಜೊತೆಗೇ ಕುಂತು ರೊಟ್ಟಿ ತಿನ್ನಲು ಕೂತು ಬಿಟ್ಟ. ಆ ರೀತಿಯ ಸಿಂಪಲ್ ಮನುಷ್ಯ ಆತ.

ವೇವ್ಲೆಂಥ್ ಸೂಪರ್...

ನನಗೂ ಗುರುದತ್ ನಡುವಿನ ಕೆಮೆಸ್ಟ್ರಿ, wavelength first class ಫಸ್ಟ್ಕ್ಲಾಸ್ ಆಗಿತ್ತು. ಇಬ್ರೂ ಕೆಲಸಕ್ಕೋಸ್ಕರ ಅನೇಕ ಬಾರಿ ಜಗಳ ಮಾಡಿದ್ವಿ. ಅದನ್ನ ಹೀಗೆ ಶೂಟ್ ಮಾಡಬೇಡ, ಸರಿ ಹೋಗಲ್ಲ ಅಂದ್ರೆ, ನಾನು ಹಠ ಮಾಡಿ ಹಾಗೇ ಶೂಟ್ ಮಾಡ್ತಾ ಇದ್ದೆ. ಅನೇಕ ಸಣ್ಣ ಸಣ್ಣ ವಿಷಯಗಳನ್ನು ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. “ಕಾಗಜ್ ಕೆ ಫೂಲ್’ ಅಂತ ಫಿಲ್ಮ್ ಮಾಡಿದೆವಲ್ಲ, ಅದು ಫಿಲ್ಮ್ ಹಿಸ್ಟರಿಯಲ್ಲಿ ದೊಡ್ಡ ಮೈಲ್ಸ್ಟೋನ್.

ಈ ಚಿತ್ರ ಆರಂಭ ಮಾಡುವುದಕ್ಕೆ ಮುಂಚೆ ಅವನಿಗೆ ಹೇಳಿದೆ ನಾನು, ಲೋ ಈ ಸಬ್ಜೆಕ್ಟೇ ಬೇಡ, ಸರಿ ಹೋಗಲ್ಲ ಅಂದಿದ್ದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಅಂದ್ರೆ ಅವರ ಬಳಿ ದಂಡಿಯಾಗಿ ದುಡ್ಡಿರತ್ತೆ ಎಂದು ಭಾವಿಸುತ್ತಾರೆ. ಅವರಿಗೂ ಕಷ್ಟಗಳಿವೆ ಅಂತ ಗೊತ್ತಾಗುವುದಿಲ್ಲ. ಈ ಚಿತ್ರ ಮಾಡುವುದು ಬೇಡ ಅಂದೆ. ಏಯ್, ಇಲ್ಲ ಕಣೋ ನಾನು ಮಾಡಲೇಬೇಕು ಅಂತ ಪಟ್ಟು ಹಿಡಿದ ಗುರುದತ್. ತುಂಬ ಹಠವಾದಿಯಾಗಿದ್ದ ಆತ. ಏನಾದರೂ ಮಾಡಬೇಕು ಅಂದ್ರೆ ಮಾಡಲೇಬೇಕು.

ಆದರೆ, ಏನಾದರೂ ಸಿಟ್ಟು ಮಾಡಿಕೊಂಡ್ರೆ, ಮರುದಿನ ಅದನ್ನು ಮರೆತೂ ಬಿಡುತ್ತಿದ್ದ. ಅಷ್ಟೊಂದು ಫ್ರೆಂಡ್ಲಿ ಆಗಿರುತ್ತಿದ್ದ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಗುರುದತ್ ನಂತರ ಅಷ್ಟೊಂದು ಕ್ರಿಯೇಟಿವ್ ಆಗಿರೋರು ಬೇರೆ ಡೈರೆಕ್ಟರ್ ನನಗೆ ಸಿಗಲೇ ಇಲ್ಲ. ಶ್ಯಾಮ್ ಬೆನಗಲ್ ನನಗೆ ತುಂಬಾ ಹಿಡಿಸುತ್ತಿತ್ತು, ಆದರೆ ಅವರ ಸ್ಟೈಲೇ ಬೇರೆ ಇತ್ತು. ಅವರದ್ದು ಸ್ವಲ್ಪ ಡಾಕ್ಯುಮೆಂಟರಿ ಸ್ಟೈಲ್. ಡ್ರಮ್ಯಾಟಿಕ್ ಸ್ಟೈಲ್ ಅವರಿಗೆ ಕಷ್ಟವಾಗಿತ್ತು. ನನ್ನ ಬಳಿಯೇ ಟ್ರೈನಿಂಗ್ ಪಡೆದು ಒಳ್ಳೆ ನಿರ್ದೇಶಕರಾದವರು ಅಂದ್ರೆ ಗೋವಿಂದ ನಿಹಲಾನಿ. ಎಸ್ಜೆಪಿ ಸ್ಟುಡೆಂಟ್ ಅವನು. ನನ್ನ ಬಳಿ ಎರಡು ಫಿಲ್ಮ್ಗೆ ಫ್ರೀ ಆಗಿ ಕೆಲಸ ಮಾಡಿದ…

ಮುಂದುವರೆಯುವುದು…

‍ಲೇಖಕರು avadhi

December 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: