ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರೆಯದ ಕಣ್ಣೋಟ…

ಮುತ್ತು ಬಳ್ಳಾ ಕಮತಪುರ

ಅಮಲು ಎರಿದ ಚಂದ್ರ ರೂಪವತಿ ಲಾವಣ್ಯಕೆ ಮರುಳಾಗಿ ಕಂಡಿದೆ |
ಧರೆಗಿಳಿದ ಮಳೆರಾಯ ರಂಗೇರಿ ಅಂಗಳಕೆ ಬಣ್ಣವಾಗಿ ಕಂಡಿದೆ ||

ದ್ವೇಷ ಹುಟ್ಟಿಸುವ ಜಗದಲಿ ಈ ನೆಲದ ಉಸಿರು ಆಳವಾಗಿ ಹಬ್ಬಿದೆ |
ಪ್ರೇಮಕೆ ಅಂಟಿದ ಧರ್ಮದ ಬೇರುಗಳು ಈಗ ವಸ್ತ್ರವಾಗಿ ಕಂಡಿದೆ ||

ಎಂದಿಗೂ ಮರೆಯದ ಕಣ್ಣೋಟ ಇರಿಯುತ್ತಿದೆ ಕಣ್ಣ ಸಲುಗೆಯಲಿ |
ಚುಕ್ಕಿಯಿಟ್ಟ ರಂಗೋಲಿಯ ದೃಷ್ಟಿ ಗೊಂಬೆ ಕಥೆ ನಿಲುವಾಗಿ ಕಂಡಿದೆ ||

ದೇಹದುಸಿರು ಏರಿಳಿತಗಳು ಕಳೆದ ಕತ್ತಲ ರಾತ್ರಿಯ ಕರಾಳ ನೆನಪು |
ಮಂಜುಗಡ್ಡೆ ಕರಗಿ ಕುಂದಿ ಮನದಾಸೆಯ ತಣಿಸಿ ಗೆಲುವಾಗಿ ಕಂಡಿದೆ ||

ಮುತ್ತು ಎಂದಾದರೂ ಎದುರಾದಾಗ ಕನಸುಗಳ ದಾಖಲಿಸಿ ಬಿಡು |
ಸಾಲು ದೀಪಗಳ ನಡುವೆ ಅವಳ ಹಚ್ಚಿದ ಹಣತೆ ಬೆಳಕಾಗಿ ಕಂಡಿದೆ ||

‍ಲೇಖಕರು Admin

2 August, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading