ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಣದ ಬಾಗಿಲಲ್ಲಿ..

ಜಿ ಪಿ ಬಸವರಾಜು

ದೇವ ಭಾಗ
ಕೊಡಬೇಕು ದೇವತೆಯೆ-
ಮೃತ್ಯು ದೇವತೆಯೇ
ನಿನ್ನ ಪಾಲನ್ನು ನಿನಗೆ
ಅದು ಸಹಜ, ನ್ಯಾಯ
ಆದರೆ
ಹೀಗಲ್ಲ:
ಏಕಾಏಕಿ ಮಾರಿ-
ಬಲೆ ಬೀಸಿ
ಸಾರಾಸಗಟು ಜೀವಗಳ
ಎಳೆದೊಯ್ಯುವುದಲ್ಲ

ಹುಡುಗು ಹರಯ ಮುದಿತನಗಳ
ಗೆರೆಯನ್ನು ಅಳಿಸಿ
ಉಳಿಸದೆ ಏನನ್ನೂ
ಸೆಳೆಯುವುದೆಷ್ಟು
ಸಹಜ, ನ್ಯಾಯ?

ನೀನು ಹೊರತಲ್ಲ
ಲೋಕ ನಿಯತಿಗೆ
ಋತ ಗತಿಗೆ;

ನಿಫಾ, ಕೊರೊನಾ, ಎಬೋಲ
ಹೆಸರೇನಾದರೇನು?
ಪರಿಣಾಮ, ಪದ
ನೀನೇ;

ನಿಂತು, ಧ್ಯಾನಿಸಿ
ನೋಡು: ನ್ಯಾಯದ
ತಕ್ಕಡಿ ತೂಗುವುದನ್ನು

ಕರುಳೆಂಬುದು
ನಿನಗೂ ಇದ್ದರೆ
ನಡೆದುಕೊ ತಕ್ಕಂತೆ

ಮರಣದ ಬಾಗಿಲಲ್ಲಿ
ತಲೆಬಾಗಿದ ಬಲಿ ನಾವು
ಕಾದು ನಿಂತಿದ್ದೇವೆ
ಕರುಣೆಯ ಕಣ್ಣಿಗಾಗಿ
ಕೇಳುತ್ತೇವೆ ಕೊನೆಯ
ಬಾರಿ: ನೋಡು ಇನ್ನೊಮ್ಮೆ
ನಿನ್ನ ಪಾಲು ಸರಿಯಿದೆಯೇ?

‍ಲೇಖಕರು avadhi

23 March, 2020

2 Comments

  1. ಸಿರಾಜ್ ಅಹಮದ್

    ಕರುಣೆಯ ಕಣ್ಣಿಗಾಗಿ
    ಕೇಳುತ್ತೇವೆ ಕೊನೆಯ
    ಬಾರಿ: ನೋಡು ಇನ್ನೊಮ್ಮೆ
    ನಿನ್ನ ಪಾಲು ಸರಿಯಿದೆಯೇ?
    …… ಏನೂ ಹೇಳಲು ಆಗುತ್ತಿಲ್ಲ. ಈ ಸಾಲುಗಳು ಹೇಳುವ ಹಾಗೆ.

  2. Raju Hegde

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading