ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತಾ ಅರಸೀಕೆರೆ ಹೊಸ ಕವಿತೆ – ಅಲೆಯಾದೆ ಆಟವಾಡಿದರು…

ಮಮತಾ ಅರಸೀಕೆರೆ

ಪ್ರವಾಹವಾದೆ
ಉಕ್ಕಿದವಳೆಂದರು

ಸುನಾಮಿಯಾದೆ
ಸೊಕ್ಕಿದವಳೆಂದರು

ಮಳೆಯಾದೆ
ಕಂಗೆಡಿಸಿದವಳೆಂದರು

ಒಣಗಿಹೋದೆ
ಬರಡಾದವಳೆಂದರು

ಅಲೆಯಾದೆ
ಆಟವಾಡಿದರು

ಝರಿಯಾದರೆ
ಸೊಗಸೆಂದರು

ಅದೆಷ್ಟು ಅಣೆ ‘ಕಟ್ಟುಪಾಡು’
ತಂತಾನೆ ಹರಿವ ನದಿಗೆ
ಬಿರುಕು ಬಿಡಲು ಕ್ಷಣವಷ್ಟೇ ಹೊತ್ತು,
ಗೊತ್ತಿಲ್ಲವೆ ಅವರಿಗೆ!

‍ಲೇಖಕರು Admin

27 July, 2022

1 Comment

  1. ಕು.ಸ.ಮಧುಸೂದನರಂಗೇನಹಳ್ಳಿ

    ಮಮತಾ ಅರಸಿಕೆರೆ ನಿಮ್ಮ ಕವಿತೆ ಇಷ್ಟವಾಯ್ತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading