ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಮತಾ ಅರಸೀಕೆರೆ ಕವಿತೆ- ಪಟ ಹಾರುತ್ತದೆ..

ಮಮತಾ ಅರಸೀಕೆರೆ

ಆಗೀಗ ಬಿಕ್ಕಳಿಸುತ್ತಾ ಗಾಳಿ ಬಂದಾಗಲೆಲ್ಲ
ತೂರಿಕೊಳ್ಳುವ ಗಾಳಿ ಪಟ
ತನ್ನದೇ ಸಹಿ ಹಾಕುವ ಕನಸುಕಾಣುತ್ತಾ
ಸಾಗುತ್ತದೆ
ಆಕಾಶದ ಆಳ ಅಗಲಗಳನ್ನೆಲ್ಲಾ
ಅಳೆಯುವ ಉಮೇದಿನೊಂದಿಗೆ
ಕಾಲದೊಂದಿಗೆ ಕಸದಂತೆ ಕಿತ್ತೆಸೆದ,
ಜಗತ್ತುಗಳನ್ನು ಗುಡಿಸಿದ ಗಾಳಿಯೀಗ
ನಿಸ್ಸಾರ
ಕೀಳರಿಮೆಯಿಂದ ಮುದುಡುತ್ತದೆ
ಮೀರಿ ಪಟ ಹಾರುತ್ತದೆ.


ಎಳೆ ದಾರದೊಂದಿಗೆ ನಾಟ್ಯವಾಡುತ್ತದೆ
ಪಟ
ನಕಲಿ ರೆಕ್ಕೆಗಳ ಕಟ್ಟಿಕೊಂಡೂ
ಕೆಲವೊಮ್ಮೆ ನೆಲಕ್ಕುರುಳುವ
ಮನುಷ್ಯನನ್ನೇ ಅಣಕಿಸುತ್ತದೆ
ನೂರಾರೂ
ತೋಟದ ಹಲವಾರು ಹೂಗಳಿದ್ದೂ
ಬಣ್ಣ ಕಳೆದು ನರಳುವ ಭೂಮಿಗೆ
ಸವಾಲೆಸೆಯುತ್ತದೆ
ಹತ್ತಾರು ಗಾಳಿಪಟದೊಂದಿಗೆ
ಆಗಸ ರಂಗೇರುತ್ತದೆ
ಮುದುಡುವ ಮನಗಳ ಮೇಲೆ
ಕನಸೊಂದ ಚೆಲ್ಲಿ
ಮುಗುಮ್ಮಾದ ತುಟಿಗಳ ನಗುವರಳಿಸಿ
ಬದಲಾದ ಜಗತ್ತಿನ ವಸಂತಗಳ
ನವಿರುಳಿಸಿ
ಬೀಗುತ್ತದೆ
ಪಟ ಆಗಾಗ್ಗೆ ಬಾಗುತ್ತದೆ..

‍ಲೇಖಕರು avadhi

25 May, 2023

1 Comment

  1. Jayasrinivasa Rao

    Lovely poem!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading