ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆಯಿಂದ ಮನೆಗೆ : ಮುಳುಗುವ ಸೂರ್ಯನ ಪಯಣದ ಚಿತ್ರಗಳು

– ಬಿ ಎ ವಿವೇಕ ರೈ

ಜರ್ಮನಿಯ ವ್ಯೂರ್ತ್ಸ್ ಬುರ್ಗಿನ ಸೂರ್ಯನನ್ನು ಹಿಂಬಾಲಿಸುತ್ತಾ ಮೈನಸ್ ಹದಿನೈದು ಡಿಗ್ರಿಯ ಚಳಿಯ ಮನೆಯಿಂದ ಪ್ಲಸ್ ಮೂವತ್ತು ಡಿಗ್ರಿಯ ಸೆಕೆಯ ಮನೆಗೆ ಬಂದ ನನಗೆ ನಿನ್ನೆ(ಫೆಬ್ರವರಿ ೧೨ ) ಪಣಂಬೂರಿನ ಕಡಲತಡಿಯಲ್ಲಿ ಸಲ್ಲಾಪಕ್ಕೆ ದೊರೆತವನು ಬೆಳಗುವ ಮುಳುಗುವ ಸೂರ್ಯ.ಅವನು ಕೆ.ಎಸ.ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ ‘ಕವನದ ಸಾಲುಗಳನ್ನು ನೆನಪುಮಾಡಿಕೊಳ್ಳುತ್ತಲೇ ಆ ಕವನದ ಕೊನೆಯ ಸಾಲುಗಳು ತನಗೆ ಇನ್ನೂ ನಿಜವಾಗಿಲ್ಲ ಎಂದು ಪರಿತಪಿಸುತ್ತಿದ್ದ. ” ಮನೆಯಿಂದ ಮನೆಗೆ , ಹೊರಮನೆಯಿಂದ ಹೊರಮನೆಗೆ ಮೊದಲಮನೆಯಿಂದ ಆದರವಿರದ ,ಕದವಿರದ ,ಹೆಸರಿರದ ಇನ್ನೊಂದು ಮನೆಗೆ ಹೊಸದು ಹಳೆಯದು ಎಲ್ಲ ಯಾತ್ರೆಗೆ ಹೊರಟಿದ್ದೇವೆ “ “ಅದೇ ಕಡೆಯ ಮನೆ” ನಾನು ಅವನಿಗೆ ಸಾಂತ್ವನ ಹೇಳಿದೆ : ” ನೀನು ಏಕಾಂಗಿ ಅಲ್ಲ.ನಾನು ಜೊತೆಗಿರುತ್ತೇನೆ ನಿನ್ನ ಪಯಣದಲ್ಲಿ -ಮರಗಟ್ಟುವ ಚಳಿಯಲ್ಲೂ ರಣಕಟ್ಟುವ ಸೆಕೆಯಲ್ಲೂ .ಕೆ ಎಸ ನ ಕವನದ ಕೊನೆಯ ಸಾಲೇ ನಮಗೆ ಸದಾ ಸಾಂತ್ವನ “ ‘ ಬಾಂದಳದ ತಾರೆಗಳ ಓರೆಗಣ್ಣಿನ ಕೆಳಗೆ ಆಗಾಗ ಬೀಸುವುದು ಬಯಲಗಾಳಿ ‘ ಸೂರ್ಯನು ಮನೆಗೆ ಹೋಗುತ್ತಿದ್ದ ಪಯಣದ ಕ್ಷಣ ಕ್ಷಣದ ಚಿತ್ರಗಳನ್ನು ,ನಿನ್ನೆ ನಾನು ತೆರೆಗಳ ನಡುವೆ ಸಾಗುತ್ತಾ ತೆಗೆದವುಗಳನ್ನು ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ.ಅವುಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ. [gallery orderby="ID"]]]>

‍ಲೇಖಕರು G

15 February, 2012

2 Comments

  1. Ashok shettar

    Beautiful pics

  2. SUDHAKAR RAO

    very nice photos Sir…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading