ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನುಷ್ಯ ಬದುಕುವುದು ಅನ್ನದ ಜೊತೆ ಅಹಂಕಾರಕ್ಕೆ

ಬದುಕುವದು ಯಾಕೆ

ಕು ಸ ಮಧುಸೂದನ್


ಮನುಷ್ಯ ಬದುಕುವುದು
ಗೇಣು ಹೊಟ್ಟೆಗಾಗಿ
ತುಂಡು ಬಟ್ಟೆಗಾಗಿ ಮಾತ್ರವಲ್ಲ!
ಹಾಗಾಗಿದ್ದರೆ-
ಕೋಟೆಗಳ ಕಟ್ಟುತ್ತಿರಲಿಲ್ಲ
ರಾಜ್ಯಗಳು ಹುಟ್ಟುತ್ತಿರಲಿಲ್ಲ
ಗಡಿಗಳಿಗೆ ಸೈನ್ಯಗಳ ಅಟ್ಟುತ್ತಿರಲಿಲ್ಲ
ಅನ್ಯರ ಹೊನ್ನು ಹೆಣ್ಣು ಮಣ್ಣುಗಳ ಮೇಲೆ
ಅಧಿಕಾರ ಮುದ್ರೆಯನೊತ್ತಲು
ನಿದ್ದೆಗೆಟ್ಟು ತಂತ್ರ ಪ್ರತಿತಂತ್ರ
ವ್ಯೂಹಾದಿಗಳನ್ನು ಹೆಣೆಯುತ್ತಾ
ಆಯುಷ್ಯ ವ್ಯಯಿಸುತ್ತಿರಲಿಲ್ಲ
ಮನುಷ್ಯ ಬದುಕುವುದು
ಅನ್ನದ ಜೊತೆ ಅಹಂಕಾರಕ್ಕೆ
ಪ್ರೇಮದ ಜೊತೆ ಕಾಮಕ್ಕೆ
ಸ್ವನಾಶದ ಜೊತೆ ಸರ್ವನಾಶಕ್ಕೆ!
 

‍ಲೇಖಕರು G

3 November, 2014

4 Comments

  1. mmshaik

    nice..very nice..

  2. Anonymous

    Nice one Sir

  3. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  4. Naveen

    ಅತ್ಯಂತ ಸತ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading