ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನಸಿನ ಹೊಲದ ಮೇಲೆ ತಂತುರು ಹನಿ…

ಚಿತ್ತ ಪರದೆಯ ಒಳಗೆ

– ಬಿದಲೋಟಿ ರಂಗನಾಥ್

ಕನಸುಗಳು ಜೊತೆಯಾಗಿ
ಕರ ಹಿಡಿದು ನಡೆವಾಗ..
ಮನಸಿನ ಹೊಲದ ಮೇಲೆ
ತಂತುರು ಹನಿ…

ಹನಿಗಳೊಳಗೆ ನನ್ನವಳು ಬೆರತು
ಸ್ಪರ್ಶದಿಂದ ಅಮಲೇರಿ
ನಾನೂ ಒಂದು ಹನಿಯಾಗಿ ಮುತ್ತಿಟ್ಟೆ
 
ಮುತ್ತಲ್ಲಿ ನಂಬಿಕೆಯ ಮಳೆ ಹೊಯ್ದು
ಪ್ರೀತಿಯು ಕೊನರಿ
ನಳನಳಿಸುವ ಕಣ್ಣ ಭಾವ
 
ಕ್ಷಣ ಹೊತ್ತು ಜಾರಿ
ಮಳೆ ನಿಂತ ಆ ಕ್ಷಣ
ನನ್ನೊಳಗೆ ನಾನಿರಲಿಲ್ಲ
ಅವಳೊಳಗು ಅವಳಿರಲಿಲ್ಲ
 
ಆದರೆ,
ಚಿತ್ತ ಪರದೆಯ ಒಳಗೆ
ನಿಗೂಢ ಪಿಸುಮಾತು
ಯಾರಿಗೂ ಕೇಳದೆ
ನಮ್ಮೊಳಗೆ ಮಾತ್ರ.
ಕೇಳುತಿದೆ…
 
 

‍ಲೇಖಕರು G

3 May, 2015

3 Comments

  1. mmshaik

    kavite chennaagide..naviru bhavada sundara kavite..sir

  2. mallikarjun talwar

    sogasu sir!. andange hod vaara nimmadondu kavite odhide. hi! banglorenalli…. chennagittu. barita iri sir.

  3. savitri hiremath

    nimma kavana male hoyda samayadalli tannane bhasa tandoddidantide.its nise.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading