ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನದ ಒಳ ಹೊರಗೆ…

ಜಬೀವುಲ್ಲಾ ಎಮ್ ಅಸದ್

ಕವಿದ ಕತ್ತಲು
ಕಾಡುವ ಕನವರಿಕೆ
ಕನಸುಗಳ ನಿದಿರೆ
ನೆನಪುಗಳ ಎಚ್ಚರ
ಹೆಪ್ಪುಗಟ್ಟಿದ ಕಂಬನಿ
ನರಳಿಕೆಯ ಸದ್ದು
ಮತ್ತು
ನೋವು
ಒಳಗೆ…..

ಮುಚ್ಚಿದ ಬಾಗಿಲು
ಹೊರಗೇನು? ಎಂದು
ತಿಳಿಯದಾಗಿದೆ

ಬಿಸಿಲೇ
ಮಳೆಯೇ
ಗಾಳಿಯೇ
ಬೆಳಕೇ
ಅಥವಾ
ಸಂತಸ ಇರಬಹುದೇ?

ಹಕ್ಕಿ ಹಾರುತ್ತಿರಬಹುದೇ?
ಇರುವೆ ಹೆಜ್ಜೆ
ಹಾಕುತ್ತಿರಬಹುದೇ?
ಏನೊಂದೂ ತಿಳಿಯದಾಗಿದೆ!

ಮುಚ್ಚಿದ ಬಾಗಿಲ
ಮುಚ್ಚಿಯೇ ಇದೆ
ತೆರೆಯುವ ಇಚ್ಛೆ ಇಲ್ಲದೆ

ನೋವು ನಗುತ್ತಲೇ ಇದೆ
ಅನಾಹತ ತಬ್ಬಿ ಬಳಸಿ
ಭಾವಗಳ ಬಂಧಿಯಾಗಿಸಿ
ಬಾಳಿಗೆ ಜುಗಲ್ಬಂದಿಯಾಗಿ

ಇನ್ನೇಷ್ಟು ಸಮಯ ಹೀಗೆ…
ಬಿಡುಗಡೆ ಎಂದು?
ಪ್ರಶ್ನೆಗಳೇ ಪ್ರೇತಗಳಿಲ್ಲಿ
ಉತ್ತರ ಕಾಣದಾಗಿದೆ
ದೈವದಂತೆ!

‍ಲೇಖಕರು Admin

20 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading