ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನದೊಳಗಿನ ಆ ರತಿ

ಕಾಮನ ಹುಣ್ಣಿಮೆಗೆ ವಿರಹದಾರತಿ

ರಾಜೀವ ನಾರಾಯಣ ನಾಯಕ

ದಹಿಸಿಬಿಡು ನನ್ನೊಳಗಿನ ಮದನನನ್ನು

ಆದರೆ ಹೂವಿನಂತೆ ಎತ್ತಿಡು

ಮನದೊಳಗಿನ ಆ ರತಿಯನ್ನು

 

ಸುಟ್ಟುಬಿಡು ನನ್ನೆಲ್ಲ ಅವಗುಣಗಳನ್ನು

ಆದರೆ ದಯವಿಟ್ಟು ಮುಟ್ಟದಿರು

ಅವಳು ಮದಿರೆ ಸವರಿದ ತುಟಿಗಳನ್ನು

ಕರಕಲಾಗಿಸಿಬಿಡು ನನ್ನಿಡೀ ದೇಹವನ್ನು

ಆದರೆ ಕನಿಕರಿಸಿ ಇರಲು ಬಿಡು

ಎದೆಗೊತ್ತಿದ ಮೊಲೆ ಗುರುತನ್ನು

 

ಆರಿಸಿಬಿಡು ನನ್ನ ಉರಿಸುವ ಸಂಕಟಗಳನ್ನು

ಆದರೆ ಹಾಗೇ ಹಚ್ಚಿಡು

ವಿರಹದ ಕಿರು ಹಣತೆಯನ್ನು

 

ಭಸ್ಮಮಾಡಿಬಿಡು ಭವದ ಮೋಹಗಳನ್ನು

ಆದರೆ ಬೂದಿಯಾಗಲು ಬಿಡದಿರು

ನನ್ನೊಳಗಿನ ಕವಿಯ ಭಾವಗಳನ್ನು

‍ಲೇಖಕರು avadhi

20 March, 2020

4 Comments

  1. Kala Bhagwat

    ಚೆನ್ನಾಗಿದೆ

    • ರಾಜೀವ ನಾಯಕ

      ಥ್ಯಾಂಕ್ಯೂ ಕಲಾ 🙂
      ಥ್ಯಾಂಕ್ಸ್ ಅವಧಿ

  2. Prakash N.

    ಬಹು ಚೆನ್ನ.

    • ರಾಜೀವ ನಾಯಕ

      ಧನ್ಯವಾದ ಪ್ರಕಾಶಣ್ಣ 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading