ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮದ್ಯಸಾರದಾಚೆಗೆ ರಘು ಅಪಾರ

ರಘು ಅಪಾರ

ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು

**

ನೀನು ವಂಚಿಸುತಿರುವುದರ ಅರಿವು
ನನಗಿಲ್ಲ ಎಂದಲ್ಲ
ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ

**

ದಣಿವಾಯಿತೆಂದು ಕೂತಿರುವೆ
ಈ ಊರು ನಂದಲ್ಲ
ಸ್ವಂತ ಊರು ಸ್ವಂತ ಮನೆ
ಸೋತವನಿಗೆ ಹೊಂದಲ್ಲ

‍ಲೇಖಕರು avadhi

22 April, 2013

9 Comments

  1. venkatraman

    apara super…

  2. Ravindra Mavakhanda

    super apara…

  3. Sumangala

    Apara, read you after many days, most of the time I am not clever enough to understand poetry, but after reading your poem I felt you gave poetic expression to the feelings inside me. specially last 8 lines… sounds like my own experience…Thank you..
    -Suma

  4. apara

    ವೆಂಕಟ್ರಮಣ, ರವೀಂದ್ರ. ಸುಮಂಗಲಾ ಮತ್ತು ಅವಧಿ – ಥ್ಯಾಂಕ್ಸ್. ಖುಷಿಯಾಯ್ತು.

  5. deepaG

    ಸರಳ ಸುಂದರ ಪದಗಳ ಹಂದಿರ
    ಓದಿದ ಬಳಿಕವೂ ಕರ್ಣದೊಳು ನಿಮ್ಮ ಕವಿತೆಯದೆ ಇಂಚರ
    ನೋವುಂಡ ಮನಸುಗಳಿವು ಸಾವಿರ ಸಾವಿರ
    ನಿಮ್ಮ ಕವಿತೆ ಕೊಡುವ ಸಮಾಧಾನವದು ಅಪಾರ..

  6. bharathi

    apaara …yaako vishaada vishaada …

  7. Sudha ChidanandaGowda

    very nice lines

  8. Dr. Ganesh M.Hegde,Neelesara

    ನಿಮ್ಮ ‘ಮದ್ಯಸಾರ’ ದ ಅಭಿಮಾನಿ ನಾನು. ಬರಲಿ ಇನ್ನೊಂದು ‘ಗೀತಸಾರ!- ಡಾ.ಗಣೇಶ ಎಂ.ನೀಲೇಸರ

  9. Prabhu

    “ಸದಾ ಎಚ್ಚರಿಕೆಯಿಂದಿದ್ದು ನನಗೂ
    ಸಾಕುಸಾಕಾಗಿದೆಯಲ್ಲ”
    ಈ ಅನ್ನಿಸಿಕೆ ನನಗೂ ಬಹಳ ಸಾರಿ ಉಂಟಾಗುತ್ತದೆ. ಈಗಂತೂ every other man / woman ನಮ್ಮನ್ನು ವಂಚಿಸುವದಕ್ಕೇ ಹೊಂಚುಹಾಕಿಕೊಂಡಿರುವಂತೆ ಅನ್ನಿಸುತ್ತಿರುತ್ತದೆ. ಜೀವನದ ಮುಖ್ಯ ಗುರಿಯೆಂದರೆ ಇಂಥವರಿಂದ ನಮ್ಮನ್ನು ರಕ್ಷಿಸಿಕೊಳ್ಳುವದೇ ಎಂದಾಗಿ ಬಿಟ್ಟಿದೆ! It’s so disgusting! 🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading