ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮತ್ತೊಂದು ಮುಂಜಾವಿಗಾಗಿ ಮರುಗುತ್ತಲೇ..’ ಮಂಜುಳಾ ಹುಲಿಕುಂಟೆ

ಮಂಜುಳಾ ಹುಲಿಕುಂಟೆ

ಬಣ್ಣ ಕಟ್ಟಿಕೊಂಡ ಬಾನು
ಈ ಸಂಜೆಗೆ ತಣ್ಣಗಾದ ಸೂರ್ಯ
ಹಾರಿ ದಣಿವಾಗಿ ಗೂಡಿಗೆ ಇಂತಿರುಗುತ್ತಿರುವ ಬಾನ ಹಕ್ಕಿಗಳ ಸಾಲು
ನನ್ನೊಳಗೆ ನಿನ್ನ ನಿರೀಕ್ಷೆಯನ್ನ ಮತ್ತೆ ಚಿಗುರಿಸುತ್ತವೆ

ರೆಕ್ಕೆ ಕತ್ತರಿಸಿಕೊಂಡು
ಮೂಲೆ ಹಿಡಿದ ಒಂಟಿ ಹಕ್ಕಿ ನಾನು
ಅದ್ಯಾಕೋ ಈ ಸಂಜೆಗಳು ಹಿತವೆನಿಸುತ್ತಿವೆ
ಪ್ರತೀ ಸಂಜೆ ನೀನು ಮರಳಿ ಬರುವೆಯೆಂದೇ ಕಾದು ಕೂರುತ್ತೇನೆ
ಈ ರೆಕ್ಕೆಗಳಿಗಿಷ್ಟು ನಿನ್ನ ಕನಸುಗಳ ಕಾವುಕೊಟ್ಟು
ಮತ್ತೆ ಮುಗಿಲಿಗಾರಲು ಮುಂದಾಗುತ್ತೇನೆ..
 
ಕೆಂಪಿಟ್ಟ ಮುಗಿಲ ತುಂಬಾ
ನಿನ್ನದೇ ಕಾತರಿಕೆಗಳ ಕಲಸಿ
ನಾನೂ ರಂಗೇರುತ್ತೇನೆ
ಬಾನು ಬಣ್ಣಕಳೆದುಕೊಳ್ಳುತ್ತದೆ
ಸೂರ್ಯನೂ ಮುಳುಗಿ ಮರೆಯಾಗುತ್ತಾನೆ
ಎಲ್ಲಾ ಹಕ್ಕಿಗಳೂ ಗೂಡುಸೇರುತ್ತವೆ
ಮತ್ತೆ ಈ ಕಣ್ಣಿಗೆ ಮಬ್ಬುಕವಿಯುತ್ತದೆ
ಪ್ರತೀ ರಾತ್ರಿಗೂ ನನ್ನ ಸಾವಷ್ಟೇ ನನಗುಳಿಯುತ್ತದೆ..
ಮತ್ತೊಂದು ಮುಂಜಾವಿಗಾಗಿ ಮರುಗುತ್ತಲೇ
ಆ ರಾತ್ರಿಗೆ ಸಾಯುತ್ತೇನೆ

‍ಲೇಖಕರು G

30 May, 2015

6 Comments

  1. Noorulla

    ಕನಸುಗಳಿಗೆ ಕಾವುಕೊಟ್ಟ ಭಾವುಕ ಕಲ್ಪನೆ ಚೆನ್ನಾಗಿದೆ.

    • manjulahulikunte

      ಥ್ಯಾಂಕ್ಯೂ….

  2. ತಿರುಪತಿ ಭಂಗಿ

    ಕಾವ್ಯ ಚನ್ನಾಗಿದೆ

  3. bidaloti Ranganath

    ಸಖ,ಸಖಿಯನ್ನ ಬಯಸುವ ಪ್ರತಿಯೊಬ್ಬ ಹೃದಯವಂತಮನದಾಳದಲ್ಲಿ ಮಾತು ತಲ್ಲಣಗಳ ಮೇಲೆಳುದುಕೊಂಡು ಕಾಯುವ ಮನಸಿನಲ್ಲಿ
    ಪ್ರೀತಿ ಕೊನರುತ್ತಿರುತ್ತದೆ.ಸಾಯುವುದಿಲ್ಲ.ಪ್ರೀತಿಸುವ ಪ್ತತಿಯೊಬ್ಬರು
    ಜೊತೆಯಲ್ಲೆ ಇರಬೇಕೆನಿಸುವ ನಿಮ್ಮ ಕವಿತೆಯ ಮನದಾಳದ ಮಾತು ಇಷ್ಟವಾಯ್ತು.

  4. sangamesh

    kavite cannagide ri

  5. ಮಲ್ಲೇಶಪ್ಪ

    ಕಾವ್ಯ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading