ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ಬುದ್ದನ ಹಾದಿ..

ಗೀತಾ ಹೆಗಡೆ ಕಲ್ಮನೆ 

ಮನಸಿಗೆ ಕಾಲಲ್ಲಿ ಚಕ್ರವಿದೆಯೆ?ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ?
ಕೇಳುತ್ತೇನೆ ಆಗಾಗ
ಪ್ರೀತಿಯಿಂದ ಓಲೈಸುತ್ತ
ನೀನೇ ಸರ್ವಸ್ವ ಬಾ ಒಮ್ಮೆ.

ಊಹೂಂ ಮಣಿಯಲೊಲ್ಲದು
ಎಷ್ಟು ಗೋಗರೆದರೂ
ಬಹಳ ಹಠಮಾರಿ ಘಾಟಿ ಘಠಾಣಿ
ಹಿಂದೆ ಹಿಂದೆ ನಾ ಓಡುತ್ತಲೇ ಇದ್ದೇನೆ
ಬುದ್ಧಿ ಬಂದಾಗಿಂದ
ಅದರ ಮೂಲ ಹುಡುಕಿ
ನನ್ನಣತಿಯಲ್ಲಿಡಲು ಹೆಣಗಾಡುತ್ತೇನೆ
ಹೆಣಗಾಡುತ್ತಲೇ ಇದ್ದೇನೆ

ಅದು ನನ್ನ ಮನಸು
ನನ್ನ ಸ್ವಂತ
ಆದರೆ ವಿಚಿತ್ರ ನೋಡಿ
ನನಗದರ ಮೇಲೆ ಅಧಿಕಾರವೇ ಇಲ್ಲವೆಂಬಂತೆ
ಪದೇ ಪದೇ ಕಳಚಿಕೊಳ್ಳುತ್ತಲೇ ಇದೆ
ಒಂದೆಡೆ ಕಟ್ಟಿ ಹಾಕಲು
ನನ್ನ ಶ್ರಮವೆಲ್ಲ ವ್ಯರ್ಥ ಆಗುತ್ತಲೇ ಇದೆ.

ಮತ್ತೆ ಮತ್ತೆ ಬುದ್ಧನ ಹಾದಿ ಹಿಡಿಯುತ್ತೇನೆ
ಇಡೀ ದೇಹ ಸೆಟೆದು ಮೌನದಲ್ಲಿ
ಹಾಕಿದ ಪದ್ಮಾಸನ ಹೇಳುತ್ತದೆ
ಕಾಲು ತೊಡೆ ನೋವಾಗಿ
ನಿಲ್ಲಿಸು ನಿನ್ನ ವ್ಯರ್ಥ ಪ್ರಲಾಪ
ನಿನ್ನದು ತಿಕಲ್ ಮೈಂಡು
ನಡಿ ನಡಿ
ನನ್ನ ಕಾಲುಜ್ಜು!

‍ಲೇಖಕರು sakshi

26 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading