-ಕೆ.ಮಹಾಂತೇಶ್
ಅತ್ತ…
ದೂರದ ಪವಿತ್ರ ಮೆಕ್ಕಾದ ಮಸೀದಿಯಲ್ಲಿ
ಪರಸ್ಪರ ಮುತ್ತಿಟ್ಟು ಕೊಂಡ
ಆ ಜೋಡಿಗೆ ಆ ಕ್ಷಣದ ಪ್ರೀತಿಯ ಬಂಧ
ಹೊರತುಪಡಿಸಿ ನಾಳೆ ಬಂದೆರುಗುವ
ಸಾವಿನ ಬಗ್ಗೆ ಭಯವಿರಲಿಲ್ಲ
ಆದರೆ ಅದನ್ನು ನೋಡಿದವರಿಗೆ
ಆ ನೆಲದ ಪವಿತ್ರತೆಯ ಭಯಕ್ಕಿಂತಲೂ ತಮ್ಮ
ದೊರೆಗಳ ಮೇಲಿನ ಭಯವಿತ್ತು ಮತ್ತು
ತಮ್ಮ ನಾಳೆಗಳ ಜೀವದ ಭಯವಿತ್ತು
ಸುಲ್ತಾನರನ್ನು ತೃಪ್ತಿಗೊಳಿಸುವ ಆತುರವಿತ್ತು. ಅದಕ್ಕಿಂತ ಮಿಗಿಲಾಗಿ ಧರ್ಮಾಂಧತೆಯ
ಅಮಲು ಅವರ ಮನ ತುಂಬಾ ಆವರಿಸಿತ್ತು
ಹೀಗಾಗಿ ಸುಲ್ತಾನನ ಆದೇಶದಂತೆ ಹಾರಿದ
ಆ ಗುಂಡುಗಳು ಎರಡು
ಅಮೂಲ್ಯ ಜೀವಗಳ ಬಲಿ ಪಡೆದವು
ಇತ್ತ….
ಕೊಲ್ಕತ್ತಾದ ಮಹಾನಗರಿಯ
ದುರ್ಗಾದೇವಿಯ ಸನ್ನಿಧಾನದಲಿ
ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದ ಪುಸ್ತಕ ಮಳಿಗೆ ಮೇಲೆ ಬಿದ್ದಿತ್ತು ಮತಾಂಧರ ಕಣ್ಣು..!
“ಬುಲ್ಡೋಜರ್” ಬಳಸಿ ಮಳಿಗೆಯನ್ನೇ ನಾಶ ಮಾಡಲೊರಟಿತ್ತು ಮತಾಂಧತೆ ಸರ್ಕಾರ
ಅರೇ….ಇದೆನೀದು…!
ಪುಸ್ತಕ ಮಳಿಗೆ ಮೇಲೇಕೆ ಇವರ ಸಿಟ್ಟು ?
ಎಂದು ಅರೆಕ್ಷಣ ಯೋಚಿಸಿದೀರಾ ನೀವು?
ಹೌದು…
ಮತಾಂಧತೆಯ ಅಮಲಿನಲಿ ತೇಲಾಡುವವರಿಗೆ
ಮನುಷ್ಯರು ಹಾಗೂ ಅವರ ಪ್ರೀತಿ ಮಾತ್ರವೇ ಶತ್ತುಗಳಲ್ಲ
ಮೆದುಳನ್ನು ಜಾಗೃತಗೊಳಿಸುವ ಪುಸ್ತಕಗಳು
ಕೂಡ ಅವರ ಪರಮ ಶತ್ರುಗಳು
ಆದ್ದರಿಂದಲೇ….
ಧರ್ಮಾಂಧತೆಯ ಹೆಂಡ ಕುಡಿದ ಮನಸ್ಸುಗಳು ಪ್ರಭುತ್ವಗಳು, ದೊರೆಗಳು,ಯಾರೇ ಆಗಲಿ…..
ಪ್ರೀತಿಯನ್ನು ಮತ್ತು ಮುತ್ತನ್ನು ಶತ್ರುವೆಂದೇ ಭಾವಿಸುತ್ತಾರೆ ಮತ್ತು
ಪ್ರೀತಿಸುವ ಹೃದಯಗಳನ್ನು
ಹೊಸಕಿ ಹಾಕುತ್ತಾರೆ
ಹಾಗೆಯೇ….
ಪ್ರೀತಿ ಹಂಚುವ ಅರಿವು ಮೂಡಿಸುವ
ಪುಸ್ತಕಗಳನ್ನು, ಪುಸ್ತಕ ಪ್ರೇಮಿಗಳನ್ನು, ಶತ್ರುವೆಂದೇ ಭಾವಿಸುತ್ತಾ ನಾಶಪಡಿಸುತ್ತಾರೆ.
ಇದರರ್ಥವಿಷ್ಟೇ….
ಮತಾಂಧತೆ ಎನ್ನುವುದು
“ಪ್ರೀತಿ ಮತ್ತು ಪುಸ್ತಕ” ಎರಡನ್ನು
ದ್ವೇಷಿಸುತ್ತದೆ ಮತ್ತು ಅಂತಿಮವಾಗಿ
ಬಲಿ ಪಡೆಯುತ್ತದೆ.






0 Comments