ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಚ್ಚೆ ಎಂದೊಡನೆ ನೆನಪಾಗುತ್ತಾನೆ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..

ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ  

ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು

ಕಿರಣ್ ಕಂಗೊಕರ್ ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ.. ಬರೆದರು 

ವಿನಿ ನಾಯಕ್ ಬೆಳಕಲ್ಲಿ ಕೆನ್ನೆಯ ರಂಗಾಗಿ.. ಬರೆದರು.

ಆನಂದ ಋಗ್ವೇದಿ ಎಲ್ಲಾ ಬಿಚ್ಚಿ.. ಹೇಳಲಾಗುವುದಿಲ್ಲ!! ಎಂದು ಅದಕ್ಕೆ ತಮ್ಮ ದನಿ ಸೇರಿಸಿದರು  

ಈಗ ಕುಸುಮಾ ಪಟೇಲ್ ಸರದಿ 

ಓದಿ 

pair on cot

 

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ

ನೀವೂ ಕವಿತೆ ಮುಂದುವರೆಸಿ  

ಮರುಳ ನೆನಪಾಗುತ್ತಾನೆ, ಹಾಗೇ ನೆನಪಾಗುತ್ತಾನೆ

ಕುಸುಮಾ ಪಟೇಲ್ 

ಮಚ್ಚೆ
ಎಂದೊಡನೆ ನೆನಪಾಗುತ್ತಾನೆ
ಪ್ರೀತಿಯ
pair in bedಕಿಚ್ಚು ಹಚ್ಚಿದ
ಮರುಳ
ಹಾಗೇ ನೆನಪಾಗುತ್ತಾನೆ.

ಬೆಂದಕಾಳೂರ
ಮೊದಲ
ಗಗನಚುಂಬಿ
ಕಟ್ಟಡದ
ತುತ್ತತುದಿಯ “ಕೆಫೆ”
“ಟಾಪ್ ಕೆಫೆ”ಯಲ್ಲಿ

ಆತ ಏನು ಹೇಳಿದ?
ಏನು ಹೇಳಿದ?

ಆ ಚುಮು ಚುಮು ಛಳಿಯಲ್ಲಿ
ಹೆಣ್ಣು, ಗಂಡಿನ ಆಯಸ್ಕಾಂತದ
ಸೆಳೆತದ ಮೋಡಿಯಲ್ಲಿ
ಮನ ಬಿಚ್ಚಿ ಹಾಡುವ ಖದರಿನಲ್ಲಿ
ಮೋಡಿ ಮಾಡುವ ಜಾಡಿನಲ್ಲಿ
ಮರುಳು ಮಾತಿನ,ಹೊಳೆವ ಕಣ್ಣಿನ
ಆತ ಏನು ಹೇಳಿದ?

ಏನು ಹೇಳಿದ?
ಏನು——ಹೇಳಿದ?
ಬಿಡಿ, ಹಳೆಯ ಮಾತದು.

ದಿನ ಕಳೆದು
ಋತು ಕಳೆದು

ಬದಲಾದ ಭರದ
ಬದುಕ ರಾಟೆಗೆ
ಸಿಕ್ಕಿ
ಜೀವ ನಲುಗುವಾಗ,

ಆ ಮರುಳು ಮಾತಿನ
ಹೊಳೆವ ಕಣ್ಣಿನ
ಸಂಗಾತಿಗೆ ಕನಸು -ಮಾರಿದ
ಆ ಮರುಳ
ನೆನಪಾಗುತ್ತಾನೆ
ಹಾಗೇ ನೆನಪಾಗುತ್ತಾನೆ

‍ಲೇಖಕರು admin

27 May, 2016

2 Comments

  1. Ajith

    Soooo nice…

  2. Anonymous

    Thank u.
    kusuma patel

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading