ಈ ರೊಟ್ಟಿಯ ಚೂರು..

ಆಶೀಷ್ ಮಾರಾಳಿ
ಅನಾಥ ರಕ್ಷಕನ ಗುಡಿ ಮುಂದೆ
ಚಪ್ಪಲಿ ಕಾಯುವ ಹುಡುಗನನ್ನು
ಅವನ ಮಾಲಿಕ ಕಾಯುತ್ತಿದ್ದಾನೆ
……………….
.
ಅಕ್ಕ ಕೂಡ ಅಮ್ಮನದೇ ತದ್ರೂಪು
ಕೊನೆಗೆ ಊಟ ಮಾಡುತ್ತಾಳೆ
………..
.
ನಾನು ಗರ್ಭದಲ್ಲಿದ್ದಾಗ ಅಪ್ಪನಿಗೆ
ಸಂಪಾದನೆ ಚನ್ನಾಗಿತ್ತಂತೆ
ಅಮ್ಮನ ಹೊಟ್ಟೆ ಮೇಲೆ ಈಗಲೂ
ಕೊಯ್ದ ಕಲೆ ಇದೆ
………….
.
ಅಪರೂಪಕ್ಕೆ ಮಗಳ ಮನೆಗೆ ಬಂದ
ತಂದೆಗೆ ಎಲೆ ಮೇಲಿನ ಖಾದ್ಯಗಳು ಕಾಣುತ್ತಿಲ್ಲ
ಮಗಳ ಒಡೆದ ಹಿಮ್ಮಡಿ ನೋಡಿ ಬಿಟ್ಟಿದ್ದಾನೆ
………………,,,
.
ಈ ರೊಟ್ಟಿಯ ಚೂರು ಇನ್ನೊಂದಿಷ್ಟು
ದೊಡ್ಡದಿದ್ದರೆ ಅಣ್ಣನಿಗಿಂತ ನಾನೇ ಅಮ್ಮನಿಗೆ
ಮುದ್ದು ಎಂಬ ಮಾತು ನಂಬಬಹುದಿತ್ತು





mannassige naatuva saalugalu…
hats-off