ಮಗಳು ಹೆಣಗಳ ರಾಶಿಯನ್ನೇ ತೋರಿಸಿದಳು..

dead body museum1dead body museum2ಚಳ್ಳಕೆರೆ ಯರ್ರಿಸ್ವಾಮಿ 

ಮಗಳು ಕರೆದೊಯ್ದ ಅದ್ಬುತ ಜಾಗ ! ಅಲ್ಲಿದ್ದದ್ದು ಚರ್ಮ ಸುಲಿದಿಟ್ಟಿದ್ದ ಮನುಷ್ಯರ ಒರಿಜಿನಲ್ ಹೆಣಗಳೇ !!

“ಇಟಲಿಯ ಈ ಸುಂದರ ನಗರ ಫ್ಲೊರೆನ್ಸ್ ಗೆ ಬಂದು ಆರು ದಿನಗಳಾಯಿತು. ಬರೀನಿನ್ನದೇ ಕೆಲಸವಾಯಿತು. ಇಲ್ಲಿನ ಏನೇನೋ ಅದ್ಬುತಗಳನ್ನೆಲ್ಲಾ ನೋಡುವ ಆಸೆಯಿತ್ತು. ಏನೂ ಆಗುತ್ತಿಲ್ಲ” ಎಂದು ನೆನ್ನೆ ರಾತ್ರಿ ಮಲಗುವಮುನ್ನ ಗೊಣಗಿದವನಿಗೆ, ಈ ದಿನ ಎದ್ದಾಗ ಮಗಳು ಇಂಥಾ ಅದ್ಬುತ ತೋರಿಸುತ್ತಾಳೆಂದು ಅಂದುಕೊಂಡಿರಲಿಲ್ಲ.

“ಬೇಗ ರೆಡಿಯಾಗು ಹೋಗೋಣ, ನೀನು ತುಂಬಾ ಖುಷಿಪಡುವ ಜಾಗಕ್ಕೆ ಕರೆದೊಯ್ಯುತ್ತೇನೆ” ಅಂದಳು. ಎಲ್ಲಿಗೆ ಚಿನ್ನು? ಎಂದರೆ ಸಸ್ಪೆನ್ಸ್ ಅಂದಳು. ನಿನ್ನ ಕಾಲೇಜು? ಈ ದಿನ ರಜೆ. ಸರಿ, ಹೋಗುವ ಜಾಗದ ಹಿಂಟ್ ಆದರೂ ಕೊಡು ಅಂದೆ. “ಬರೀ ಹೆಣಗಳಿರುವ ಜಾಗ ಅದು” ಅಂದಳು. ಇಲ್ಲಿನ ಯಾವುದಾದರೂ ಸ್ಮಶಾನಕ್ಕೆ ಕರೆದೊಯ್ಯುತ್ತಿದ್ದೀಯಾ ಏನು ಸಮಾಚಾರ ?

ಇಲ್ಲಪ್ಪಾ ನೀನೇ ನೋಡುವೆಯಂತೆ ಬಾ ಎಂದ ಮಗಳು ಸೀದಾ ಕರೆದೊಯ್ದದ್ದು ಒಂದು ವಿಶೇಷ ಪ್ರದರ್ಶನಕ್ಕೆ! ಅದು ಮಾನವ ದೇಹದ ಕುರಿತ “ಬಾಡೀ ವರ್ಲ್ಡ್” ಎಂಬ ಅದ್ಬುತ ಪ್ರದರ್ಶನ. ಅಲ್ಲಿದ್ದದ್ದೆಲ್ಲಾ 160 ಮಾನವ ದೇಹಗಳು, ಮಾನವ ದೇಹದ ಭಾಗಗಳು. ಎಲ್ಲವೂ ಒರಿಜಿನಲ್! ಬಾಳೇಹಣ್ಣಿನ ಸಿಪ್ಪೇ ಸುಲಿದಿಟ್ಟಂತೆ ಚರ್ಮ ಸುಲಿದಿಟ್ಟಿದ್ದ ದೇಹಗಳು. ಮನುಷ್ಯನ ದೇಹದೊಳಗಿನ ನರವ್ಯೂಹವನ್ನು ಒಂದರಲ್ಲಿ ಬಿಡಿಸಿಟ್ಟಿದ್ದರೆ, ಇನ್ನೊಂದರಲ್ಲಿ ಮಾಂಸಖಂಡಗಳ ರಚನೆಯ ನೋಟ, ಮತ್ತೊಂದರಲ್ಲಿ ಜೀರ್ಣಾಂಗವ್ಯೂಹ….ಹೀಗೆ ಮನುಷ್ಯ ದೇಹವೆಂಬ ಅದ್ಬುತಯಂತ್ರದ ಸಾರಾಸಗಟು ವಿವರಗಳನ್ನು ಒರಿಜಿನಲ್ ದೇಹಗಳಮೂಲಕ ಜನಸಾಮಾನ್ಯರಿಗೆ ತಿಳಿಸುವ ಸ್ತುತ್ಯಾರ್ಹ ಪ್ರಯತ್ನವಿದು. ಪ್ಲಾಸ್ಟಿನೇಷನ್ ಎಂಬ ಆಧುನಿಕ ವೈಜ್ಞಾನಿಕ ತಂತ್ರಬಳಸಿ ಈ ದೇಹಗಳನ್ನು ವಾಸನೆರಹಿತ ಗೊಳಿಸಿ, ಕೊಳೆಯದಂತೆ ಗಾಳಿಗೆ ತೆರೆದಿಡಲಾಗಿದೆ. ದೇಹಗಳನ್ನು ಮುಟ್ಟಲೂಬಹುದು.

dead body museum3

 

ಈ ವಿಧಾನವನ್ನು ಕಂಡುಹಿಡಿದು,ಅಭಿವೃದ್ಧಿ ಪಡಿಸಿರುವ ಜರ್ಮನಿಯ ವೈದ್ಯ ಡಾ.ಗುಂಥರ್ ವಾನ್ ಹಾಗೆನ್ಸ್ ಈ ಪ್ರದರ್ಶನದ ರೂವಾರಿ. ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ನೆರವಾಗುತ್ತಿರುವ ಈ ವಿಧಾನವನ್ನು , ಜನಸಾಮಾನ್ಯರಲ್ಲಿ ಮಾನವ ದೇಹದ ಬಗೆಗಿನ ವೈಜ್ಞಾನಿಕ ಮಾಹಿತಿ ತಿಳಿಯಲು ಆ ಮೂಲಕ ತಮ್ಮ ಆರೋಗ್ಯದ ಕಾಳಜಿವಹಿಸುವಂತೆ ಪ್ರೇರೇಪಿಸಲು ಈ ಪ್ರದರ್ಶನ. ಜಗತ್ತಿನ ಹಲವು ದೇಶಗಳಲ್ಲಿ ಸಾಗಿಬರುತ್ತಿರುವ ಈ ಪ್ರದರ್ಶನವನ್ನು ಇಲ್ಲಿಯವರೆಗೆ 40 ಮಿಲಿಯನ್ ಜನರು ನೋಡಿದ್ದಾರೆ.

ಇಂತಹಾ ವೈಜ್ಞಾನಿಕ ಪ್ರದರ್ಶನಗಳನ್ನು ಇಷ್ಟಪಡುವ ನನ್ನ ಹವ್ಯಾಸತಿಳಿದ ಮಗಳು ಟಕೇಟನ್ನೂ ತೆಗೆದಿಟ್ಟು ನನ್ನನ್ನು ಕರೆದೊಯ್ದದ್ದಕ್ಕೆ ಪ್ರೀತಿಯಿಂದ ಕೃತಜ್ಞತೆ ತಿಳಿಸಿದೆ.

ಈ ಪ್ರದರ್ಶನದಲ್ಲಿರುವ ಮಾನವದೇಹಗಳೆಲ್ಲಾ ಪ್ರದರ್ಶನಕ್ಕೆ ಅನುಮತಿ ನೀಡಿದ (ಸತ್ತಮೇಲೆ) ಪುಣ್ಯಾತ್ಮರದ್ದೇ. ಈ ಕಾರಣಕ್ಕಾಗಿಯೇ ಡಾ.ಗುಂಥರ್ ಪ್ರಾರಂಭಿಸಿರುವ ದೇಹದಾನ ಕಾರ್ಯಕ್ರಮದಲ್ಲಿ ಈಗಾಗಲೇ 15,000 ಜನ ದೇಹದಾನಿಗಳು ಹೆಸರು ನೊಂದಾಯಿಸಿಕೊಂಡು ಹೀಗೆ ಪರ್ಮನೆಂಟ್ ಮಾಡೆಲ್ ಆಗಲು ಕ್ಯೂ ನಲ್ಲಿದ್ದಾರೆ.

dead body museum4

 

‍ಲೇಖಕರು Admin

January 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಶಮ, ನಂದಿಬೆಟ್ಟ

    Oh… Never imagined such a concept…

    ನೋಡಲೇ ಬೇಕು ಅನ್ನಿಸಿಬಿಡ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: