ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುಳಾ ಸಿ ಎಸ್ ಹೊಸ ಕವಿತೆ-‌ ಗಂಧರ್ವ ಚರಿತೆ

ಮಂಜುಳಾ ಸಿ ಎಸ್

ಅಗೋ ಕತ್ತಲಾಯ್ತು ಮತ್ತೆ
ಅರಿವಿನ ಕುರುಹಿಗೆ ಅರವಳಿಕೆ
ನೀಡುವವನ ಆಗಮನ
ಸವೆಯದ ಕಾಲಕ್ಕೆ ಮತ್ತದೇ ಮತ್ತಿನ
ಬಟ್ಟಲಿಗೆ ತುಟಿಯೊತ್ತಲು
ಕಾದು ನಿಂತ ಚೋರನ ಜತೆ ಮರು
ಗಂಧವ೯ ವಿವಾಹ ॥

ಹೊತ್ತುಡುವ ತುಸು ಹೊತ್ತು ಮುನ್ನ
ಕಮರುವ ಕನಸ ಭ್ರೂಣಕ್ಕೆ
ಸದ್ದಿಲ್ಲದ ವಿದಾಯ ಹೇಳಿ
ಮಂಪರು ಕಳೆದು ವಾಸ್ತವದ ಕುಲುಮೆಗೆ
ಮತ್ತಿಷ್ಟು ಕೆಂಡ ಹೊಂಚಲು
ಶುರುವಾತು ಇನ್ನೀ ಹಗಲು ಹೊತ್ತು॥

ಮುಸ್ಸಂಜೆ ಹೂ- ಪಕಳೆಗಳು
ಉದುರುವಾಗ ಸುಮ್ಮನೆ
ಕೇಳಿಸಿ ಕೊಳ್ಳುತ್ತೇನೆ
ಅಸು ನೀಗುವ ಮುನ್ನ
ಹೇಳಿಬಿಡುವ ಗುಟ್ಟು ರಟ್ಟು
ಮಾಡದ ಆಣೆಗೆ ಕಟ್ಟುಬಿದ್ದು॥

ಭಾವನೆಗಳಿಗೆ ಬಣ್ಣ ಹಚ್ಚುವವ
ಕಾಮನೆಗಳ ಸೃಷ್ಟಿಸಿ
ಮೋಹದ ಬಲೆಯಲಿ ಸುರುಳಿ ಸುತ್ತಿಸಿ
ತೀರದ ನಿರೀಕ್ಷೆಯ ಬಟ್ಟಲ
ತುಟಿಗೆ ಹೊತ್ತಿಸಿ
ಮಾಯವಾಗಿ ಬಿಡುವ॥

ಮರುಘಳಿಗೆ ಮರೆತಂತೆ ಗಂಧವ೯ ವಿವಾಹ

‍ಲೇಖಕರು Avadhi

28 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading