ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂತೇಶ್ ದಿಂಡಾವರ ಅನುವಾದಿತ ಕವಿತೆ- ಮುದ್ದಾದ ಪಾರಿವಾಳ…

ಮೂಲ : ಜಾನ್ ಕೀಟ್ಸ್

ಕನ್ನಡಕ್ಕೆ : ಭೂತೇಶ್ ಬಿ ದಿಂಡಾವರ

ನನ್ನೊಂದಿಗಿದ್ದ ಮುದ್ದಾದ ಪಾರಿವಾಳ ಪ್ರಾಣಚೆಲ್ಲಿದೆ
ನಾನು ಯೋಚಿಸಿದ್ದೆ, ಯಾವುದೋ ದುಃಖಕ್ಕಿಡಾಗಿ ಮರಣಿಸಿದೆ
ಅಂತಹ ದುಃಖವೇನಿತ್ತು ಅದಕ್ಕೆ? ನನ್ನ ಕೈಗಳಿಂದ ಹೆಣೆದ
ರೇಷ್ಮೆಯ ದಾರದಿಂದ ಅದರ ಕಾಲ್ಗಳನ್ನು ಬಂದಿಸಿದ್ದೆ.
ಅಯ್ಯೋ! ಮಿರುಗುವ ಕೆಂಪಾದ ಪಾದವೇ, ನೀನೇಕೆ ಮರಣಿಸಿದೆ?
ನನ್ನೇಕೆ ತೊರೆದೆ, ನನ್ನ ಪ್ರೀತಿಯ ಪಕ್ಷಿಯೆ, ನನ್ನೇಕೆ ತೊರೆದೆ.

ನೀನು ಅರಣ್ಯದಲ್ಲಿ ಒಬ್ಬೊಂಟಿಯಾಗಿ ಜೀವಿಸುತ್ತಿದ್ದೆ,
ಸುಂದರ ಪಕ್ಷಿಯೇ, ನನ್ನೊಂದಿಗೆ ನಿನಗೇಕೆ ಬದುಕಲಾಗಲಿಲ್ಲ?
ಆಗಾಗ ನಿನ್ನ ಮುದ್ದಾಡುತ್ತಿದ್ದೆ, ಬಿಳಿಯ ಬಟಾಣಿಗಳನ್ನು ನೀಡುತ್ತಿದ್ದೆ.
ನೀ ಅರಣ್ಯದಲ್ಲಿ ಸಂತೋಷವಾಗಿ ಬದುಕುತ್ತಿದ್ದ ಹಾಗೆ ನನ್ನೊಂದಿಗೇಕೆ ಸಂತೋಷದಿಂದ ಬದುಕಲಾಗಲಿಲ್ಲ?

‍ಲೇಖಕರು Admin

25 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading