ಭಾವಿಕಟ್ಟೆ ರಾಘವೇಂದ್ರ ಫೋಟೋ ಮತ್ತು ಒಂದು ಆಕ್ಷನ್..

ಭಾವಿಕಟ್ಟೆ ರಾಘವೇಂದ್ರ ನನ್ನ ಇಷ್ಟದ ಫೋಟೋಗ್ರಾಫರ್

ಅವರು ತೆಗೆಯುವ ಚಿತ್ರಗಳು ಸಮಾಜದ ಅನೇಕ ಕಥೆಗಳನ್ನು ಹೇಳುತ್ತವೆ.

ನಿನ್ನೆ ಹಂಪಿ ವಿಶ್ವವಿದ್ಯಾಲಯ ಕುರಿತು ಇಂತಹದೇ ಒಂದು ಚಿತ್ರವನ್ನು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದರು.

ಪರೀಕ್ಷೆ ಬರೆಯಲು ಅಥವಾ ಕಾಂಟಾಕ್ಟ್ ಕ್ಲಾಸ್ ಗಾಗಿ ಬಂದ ವಿದ್ಯಾರ್ಥಿಯೊಬ್ಬರು ತಮ್ಮ ಎಳೆಗೂಸಿನೊಂದಿಗೆ ತಯಾರಿ ನಡೆಸುತ್ತಿರುವ ದೃಶ್ಯ ಅದು

ಕಾಡುವ ಚಿತ್ರ

ಅದನ್ನು ನಾನು ಶೇರ್ ಮಾಡಿಕೊಂಡಿದ್ದೆ.

ಇದನ್ನು ನೋಡಿದ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ, ಮಂಗಳೂರಿನ ನನ್ನ ಮಸಾಲೆದೋಸೆ ಗೆಳತಿ, ಪತ್ರಕರ್ತೆ ನಯನ ನನಗೆ ಫೋನ್ ಮಾಡಿ ‘ತಕ್ಷಣ ವಿಶ್ವವಿದ್ಯಾಲಯದಲ್ಲಿ ಸೂಕ್ತ ವ್ಯವಸ್ಥೆ ಇದೆಯೇ ಇಲ್ಲವೇ ಪರಿಶೀಲಿಸುತ್ತೇನೆ’ ಎಂದು ಹೇಳಿದರು.

ಒಂದು ಗಂಟೆಯಲ್ಲಿ ಮತ್ತೆ ಫೋನ್ ಮಾಡಿ ತಾವು ವಿವಿಯ ಕುಲಪತಿ, ರಿಜಿಸ್ಟ್ರಾರ್ ಗೆ ಫೋನ್ ಮಾಡಿ ವಿಚಾರಿಸಿದ್ದು ಹಾಗೂ ಈ ರೀತಿ ಪರೀಕ್ಷೆ ಬರೆಯಲು, ಕಾಂಟಾಕ್ಟ್ ಕ್ಲಾಸ್ ಗೆ ಅಟೆಂಡ್ ಮಾಡಲು ಬರುವ ವಿದ್ಯಾರ್ಥಿಗಳಿಗಾಗಿ ವಿವಿಧ ವಿಭಾಗಗಳಲ್ಲಿ ಮಾಡಿರುವ ವ್ಯವಸ್ಥೆಯ ಬಗೆಗಿನ ಸಾಕಷ್ಟು ಫೋಟೋಗಳನ್ನು ಕಳಿಸಿದರು.

ಅವರು ಕಳಿಸಿದ ಚಿತ್ರಗಳು ಇಲ್ಲಿವೆ.

ನಯನ ಅತ್ಯಂತ ಚಟುವಟಿಕೆಯ ಹುಡುಗಿ. ಪತ್ರಕರ್ತ ಜೀವನಕ್ಕೆ ಪ್ರವೇಶ ಕೊಟ್ಟಾಗಿನಿಂದಲೂ ಗಮನಿಸಿದ್ದೇನೆ. ಅಂತೆಯೇ ಈ ವಿಷಯದಲ್ಲೂ ಅವರು ತಕ್ಷಣ ಸ್ಪಂದಿಸಿದ್ದು ಅಭಿನಂದನಾರ್ಹ

ಹಂಪಿ ವಿವಿಗೆ ಸಂಬಂಧಿಸಿದಂತೆ ಯಾವುದೇ ವಿಷಯವಿದ್ದರೂ ಅವರನ್ನು ಸಂಪರ್ಕಿಸಬಹುದು

ಅವರ ಮೊಬೈಲ್ ಸಂಖ್ಯೆ -94481 93209

‍ಲೇಖಕರು avadhi

March 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಒಂದು ವಿಷಯಕ್ಕೆ ಪ್ರತಿಕ್ರಿಯೆಯೆಂದರೆ ಹೀಗಿರಬೇಕು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: