ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಗ್ನ ಪ್ರೇಮಿಯೆಂಬುದ ಒಪ್ಪಲಾಗದೆ…

ಸೌಜನ್ಯ ನಾಯಕ

ಅದೆನೋ ಮಾದಕತೆ ಇದೆ
ಕಾಡಿಗೆ ಸಿಂಗರಿಸಿದ
ಆ ನಿನ್ನ‌ ಕಂಗಳಲಿ
ಇಲ್ಲವಾದರೆ ನಾನೇಕೆ
ಪದೇ ಪದೇ ಸಿಲುಕುತಿದ್ದೆ ಹೇಳು
ದೂರದಿಂದಲೇ ಮೋಹಿಸುವ
ಆ‌ ನಿನ್ನ ಕಣ್ಗಳಲಿ

ಬಹುದೂರದಿಂದಲೇ ನಸುನಕ್ಕು
ಮೌನದೊಡನೆ ಮಾತನಾಡುವ
ಹುಡುಗಿಯಿರಬೇಕು ನೀನು
ಇಲ್ಲವಾದರೆ ಆಲಿಸದೆ ಇರುತಿದ್ದವೇ
ನನ್ನ ಕಿವಿಗಳು
ಪಿಸುಗುಡುವ ಆ ನಿನ್ನ ದನಿಯನ್ನು

ಅದೆಂತಹ ನಾಚಿಕೆ ನಿನಗೆ
ಸಮೀಪಿಸುತಲೇ
ನನ್ನ ಕಣ್ತಪ್ಪಿಸಿ
ಮಾಯವಾಗುವ ಮಟ್ಟಿಗೆ
ಇಲ್ಲವಾದರೆ
ನನ್ನ ಕಣ್ಣಗಳು
ನಿನ್ನ ಮುಗ್ದತೆಯನು
ಹಿಂಬಾಲಿಸದೆ ಇರುತಿದ್ದವೇ ಹೇಳು

ಅದೆಷ್ಟು ಕಾಡಿಸುವೆ
ದೂರದಿಂದಲೇ ನೀ ನನ್ನ
ನಿಜ ಹೇಳಬೇಕೆಂದರೆ
ಅನುಭವಿಸುವಾಸೆಯಾಗಿದೆ ನನಗೂ
ಸಲಿಗೆ ತುಂಬಿದ ನಿನ್ನ ಸನಿಹವನ್ನ

ಆದರೆ ಅದೆಕೋ
ಈ ಪ್ರೇಮಿಯ ಪಾಡು
ನಿನ್ನ ಕಂಗಳಲಿ ಸೆರೆಯಾದಂತಿಲ್ಲ
ಕಾಡಿಗೆಯ ಕಣ್ಗಳು
ದೂರದಿಂದಲೇ ಕಾಡುತಿವೆಯೆ
ಹೊರತು
ಹತ್ತಿರ ಸುಳಿಯುತಿಲ್ಲ…

ಪಿಸುಗುಡುವ ನಿನ್ನ ಮಾತುಗಳು
ಮೌನ ಮುರಿದು
ನನ್ನ ಕಿವಿಯ ತಲುಪುತಲೇ ಇಲ್ಲ…
ನಿನ್ನ ಇರುವಿಕೆಯ ಅರಿತು
ಹುಡುಕಾಡಿದ ಜಾಗಗಳಲಿ
ನೀ ಇದ್ದು ಹೋ
ಕುರುಹಿದೆಯೇ ಹೊರತು
ನೀನಿಲ್ಲ…

ಕೆಲವೊಮ್ಮೆ ಕಂಗಾಲಾಗುವೆ ನಾ
ನೈಜತೆಯ ಹುಡುಕಲಾಗದೆ
ಭಾಸವಾದವುಗಳೊಡನೆಯೆ
ಭಾವ ಬೆಸೆದು ಬದುಕುತಿರುವೆ
ನಾನೊಬ್ಬ
ಭಗ್ನ ಪ್ರೇಮಿಯೆಂಬುದ ಒಪ್ಪಲಾಗದೆ…

                           

‍ಲೇಖಕರು Avadhi

25 August, 2020

4 Comments

  1. ಯಂ. ಕೃಷ್ಣರಾಜ. ಭಟ್. ಹೆಬ್ರಿ.

    ನಿಜ..
    ನಿಜ..
    ನಾನಂತೂ ಯಾವತ್ತೂ ಭಗ್ನ ಪ್ರೇಮಿ ಅನ್ನೋದನ್ನ ಒಪ್ಪಿಕೊಳ್ಳೋದೇ ಇಲ್ಲ.

    ಪ್ರೇಮಿಯೊಬ್ಬನ ಮನಸಿನಾಳದ ಮಾತನ್ನು ಕವಿತೆಯಾಗಿಸಿದ್ದಕ್ಕೆ ಕವಯಿತ್ರಿಗೆ ಅಭಿಮಾನದ ವಂದನೆಗಳು

    • Soujanya

      ಧನ್ಯವಾದಗಳು

  2. Prajna Mattihalli

    very interesting lines Soujanya. Good

  3. Soujanya

    Thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading