ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಬೊಗಸೆಯೊಳಗಿನ ಕುತೂಹಲಕ್ಕೆ ಮರುಳಾಗಲಾರೆ’ – ಟಿ ಎಸ್ ಗೊರವರ ಕವಿತೆ

ಶರಣಾಗಿದೆ ನಿಶ್ಯಬ್ದ ಪ್ರೇಮ

– ಟಿ ಎಸ್ ಗೊರವರ


ಮೋಹಕ ಮಾತು, ಕೆಂದುಟಿ ಚಂಚಲಗೊಳಿಸಲಾರವು
ರೂಪ, ಲಾವಣ್ಯವಂತೂ ಮೆಚ್ಚಿಸಲಾರವು
ಬೊಗಸೆಯೊಳಗಿನ ಕುತೂಹಲಕ್ಕೆ ಮರುಳಾಗಲಾರೆ
 
ಐಟಂ ಸಾಂಗಿನ ಬಳುಕುವ ಬಳ್ಳಿಯಂತ ಹುಡುಗಿ
ಕಾತರಿಸಿದರೂ ಕನವರಿಸಿದರೂ
ನನ್ನ ಒಂದು ರೋಮವನ್ನೂ ಗೆಲ್ಲದೆ ಸೋಲೊಪ್ಪುವಳು
 
 
ನಾನೋ ಯಾವುದೋ ರಾಜ್ಯದ ರಾಜಕುಮಾರನೇನಲ್ಲ
ರಟ್ಟೆಯ ಕಸುವು ನಂಬಿ ಕನಸು ಮಾರೋ ಸೊಗಸುಗಾರ ;
ಮರುಳಗೊಳಿಸಲಾರವು ಅಂದ ಚೆಂದ
 
ನೋವುಗಳು ಮುಪ್ಪರಿಗೊಂಡ ಹೃದಯವಿದು
ನಿನ್ನ ತಾಯ್ತನಕೆ, ಸೋಗಿಲ್ಲದ ಅಂತರಂಗದ ಸೌಂದರ್ಯಕೆ
ಶರಣಾಗಿದೆ ಒಳಗೊಳಗಿನ ನಿಶ್ಯಬ್ದ ಪ್ರೇಮ
 

‍ಲೇಖಕರು G

16 October, 2014

8 Comments

  1. Divya Anjanappa

    Super 🙂

  2. mmshaik

    tumbaa sogsaagide..

  3. Gubbachchi Sathish

    chandavide.

  4. Vithal Dalawai

    Khare khare

  5. renuka prakash

    sogillada soundairyake maruhogiddeve..nimma kavite kuda hage ide

  6. srujan

    Tumbaa chennagide Goravar.Congrats

  7. ಹನುಮಂತ ಹಾಲಿಗೇರಿ

    ಖರೇನ$$ ಖರೆ…

  8. BHUVANESHVARI

    Great

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading